ಚೀನಾ ಭಾರತದ ಒಂದಿಂಚೂ ಭೂಮಿಯನ್ನು ಕಬಳಿಸಿಲ್ಲ ! – ಲಡಾಖ್ ಉಪ ರಾಜ್ಯಪಾಲ ಹಾಗೂ ನಿವೃತ್ತ ಬ್ರಿಗೇಡಿಯರ್ ಬಿ.ಡಿ. ಮಿಶ್ರಾ

ಚೀನಾ ಭಾರತದ ಒಂದಿಂಚೂ ಭೂಮಿಯನ್ನೂ ಕಬಳಿಸಿಲ್ಲ ಎಂದು ಲಡಾಖ್ ನ ಉಪ ರಾಜ್ಯಪಾಲ ಮತ್ತು ನಿವೃತ್ತ ಬ್ರಿಗೇಡಿಯರ್ ಬಿ.ಡಿ. ಮಿಶ್ರಾ ಇವರು `ಚೀನಾ ಲಡಾಖ್ ನ ದೊಡ್ಡ ಪ್ರದೇಶವನ್ನು ಕಬಳಿಸಿದೆ’ ಎಂದ ರಾಹುಲ್ ಗಾಂಧಿಯವರ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ.

ಚೀನಾದ ವಿದೇಶಾಂಗ ಸಚಿವರ ನಂತರ, ಈಗ ರಕ್ಷಣಾ ಸಚಿವರೂ ನಾಪತ್ತೆ !

ಚೀನಾದ ವಿದೇಶಾಂಗ ಸಚಿವರು ನಾಪತ್ತೆಯಾದ ನಂತರ ಈಗ ರಕ್ಷಣಾ ಸಚಿವ ಲಿ ಶಾಂಗಫೂ ಕೂಡ ನಾಪತ್ತೆಯಾಗಿದ್ದಾರೆ. ಈ ಹಿಂದೆ ಚೀನಾ ಸೇನೆಯ ‘ರಾಕೆಟ್ ಫೋರ್ಸ್’ನ ಮುಖ್ಯಸ್ಥರೂ ನಾಪತ್ತೆಯಾಗಿದ್ದರು.

“ಅಂತರಾಷ್ಟ್ರೀಯ ಆರ್ಥಿಕ ಹೆದ್ದಾರಿ” ಇತಿಹಾಸದಲ್ಲೇ ಅತಿ ದೊಡ್ಡ ಯೋಜನೆ ! – ಇಸ್ರೇಲ್

ಭಾರತದಲ್ಲಿ ನಡೆದ ‘ಜಿ-20’ ಶೃಂಗಸಭೆಯಲ್ಲಿ, ರೈಲ್ವೆ, ರಸ್ತೆಗಳು ಮತ್ತು ಬಂದರುಗಳ ಮೂಲಕ ಭಾರತ, ಮಧ್ಯಪ್ರಾಚ್ಯ ದೇಶಗಳು, ಯುರೋಪ್ ಮತ್ತು ಅಮೆರಿಕಾವನ್ನು ಸಂಪರ್ಕಿಸುವ ಆರ್ಥಿಕ ಹೆದ್ದಾರಿಯನ್ನು ನಿರ್ಮಿಸಲು ನಿರ್ಧರಿಸಲಾಯಿತು.

ಭಾರತದಿಂದ ನೇಪಾಳದ ವಿದೇಶಾಂಗ ಸಚಿವಾಲಯವು ಕ್ರಮಕೈಗೊಳ್ಳುವಂತೆ ಆಗ್ರಹ !

ನೇಪಾಳದಲ್ಲಿನ ಚೀನಾದ ರಾಯಭಾರಿಯು ಭಾರತದ ವಿರುದ್ಧ ಹೇಳಿಕೆ ನೀಡಿದ ನಂತರ ಈಗ ಭಾರತದ ಕಟ್ಮಂಡು ಇಲ್ಲಿಯ ರಾಯಭಾರಿ ಕಚೇರಿಯಿಂದ ನೇಪಾಳದ ವಿದೇಶಾಂಗ ಸಚಿವಾಲಯದ ಬಳಿ ಈ ವಿಷಯದ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.

‘ದುರದೃಷ್ಟವಶಾತ್, ನಿಮ್ಮ ನೆರೆಯ ದೇಶ ಭಾರತ !'(ಅಂತೆ) – ನೇಪಾಳದ ಚೀನಿ ರಾಯಭಾರಿ

ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಅಧಿಕಾರದಲ್ಲಿದ್ದ ಕಾರಣ ನೇಪಾಳದಲ್ಲಿನ ಚೀನಾದ ಒಡನಾಟ ಬೆಳೆದಿದೆ. ನೇಪಾಳ ಮತ್ತು ಭಾರತದ ನಡುವಿನ ಅಂತರವನ್ನು ಹೆಚ್ಚಿಸುವ ಮೂಲಕ ನೇಪಾಳವನ್ನು ಚೀನಾ ತನ್ನ ಕಡೆ ವಾಲಿಸಲು ಸಂಚು ನಡೆಸಲಾಗುತ್ತಿದೆ. ಭಾರತವು ಸಮಯಕ್ಕೆ ಎಚ್ಚೆತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು !

ಚೀನಾದ ಹೊಸ ನಕಾಶೆಗೆ ವಿರೋಧ ವ್ಯಕ್ತವಾದ ನಂತರ ಉದ್ಧಟ ಚೀನಾದಿಂದ ಭಾರತಕ್ಕೆ ಸಲಹೆ !

ಚೀನಾ ಇತ್ತೀಚೆಗೆ ಪ್ರಸಾರ ಮಾಡಿರುವ ಅದರ ಹೊಸ ನಕಾಶೆಯಲ್ಲಿ ಭಾರತದ ಅಕ್ಸಾಯಿ ಚೀನಾ ಮತ್ತು ಅರುಣಾಚಲ ಪ್ರದೇಶದ ಭಾಗಗಳು ತನ್ನದೆಂದು ತೋರಿಸಿರುವುದರಿಂದ ಭಾರತ ಇದಕ್ಕೆ ವಿರೋಧಿಸಿದೆ. ಭಾರತದ ವಿದೇಶಾಂಗ ಸಚಿವರು ‘ಇದು ಚೀನಾದ ಹಳೆಯ ಚಾಳಿ ಆಗಿದೆ, ಅದರ ದಾವೆಗೆ ಏನು ಅರ್ಥವಿಲ್ಲ’, ಎಂದು ಹೇಳಿದ್ದರು.

ಬೇರೊಬ್ಬರ ಪ್ರದೇಶವನ್ನು ತನ್ನದೆಂದು ಹೇಳುವ ಚೀನಾದ ಹಳೆಯ ಚಾಳಿ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ಚೀನಾವು ತನ್ನ ಭೂಪಟದಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚೀನಾವನ್ನು ತನ್ನ ಭೂಪ್ರದೇಶವೆಂದು ತೋರಿಸಿದ ನಂತರ, ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವಾಗ, ‘ಚೀನಾ ಇತರರ ಪ್ರದೇಶವನ್ನು ತನ್ನದು ಎಂದು ಹೇಳಿಕೊಳ್ಳುವ ಹಳೆಯ ಚಾಳಿ’ ಎಂದು ಹೇಳಿದ್ದಾರೆ.

ತನ್ನ ಭೂಪಟದಲ್ಲಿ ಅರುಣಾಚಲ ಪ್ರದೇಶವನ್ನು ಸೇರಿಸಿದ ಚೀನಾ

ಅರುಣಾಚಲ ಪ್ರದೇಶ, ಅಕ್ಸಾಯ್ ಚೀನಾ, ದಕ್ಷಿಣ ಟಿಬೆಟ್, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದ ಹೆಚ್ಚಿನ ಭಾಗಗಳನ್ನು ಒಳಗೊಂಡಿರುವ ಹೊಸ ನಕ್ಷೆಯನ್ನು ಚೀನಾ ಬಿಡುಗಡೆ ಮಾಡಿದೆ.

ಚೀನಾವನ್ನು ಎದುರಿಸಲು, ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧ ದೃಢ ಪಡಿಸುವುದು ಅತ್ಯಗತ್ಯ !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಸಂಭಾವ್ಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಇವರ ಹೇಳಿಕೆ !