ಚೀನಾದ ವಿದೇಶಾಂಗ ಸಚಿವರ ನಂತರ, ಈಗ ರಕ್ಷಣಾ ಸಚಿವರೂ ನಾಪತ್ತೆ !

ಚೀನಾದ ರಕ್ಷಣಾ ಸಚಿವ ಲಿ ಶಾಂಗಫೂ

ಬೀಜಿಂಗ್ (ಚೀನಾ) – ಚೀನಾದ ವಿದೇಶಾಂಗ ಸಚಿವರು ನಾಪತ್ತೆಯಾದ ನಂತರ ಈಗ ರಕ್ಷಣಾ ಸಚಿವ ಲಿ ಶಾಂಗಫೂ ಕೂಡ ನಾಪತ್ತೆಯಾಗಿದ್ದಾರೆ. ಈ ಹಿಂದೆ ಚೀನಾ ಸೇನೆಯ ‘ರಾಕೆಟ್ ಫೋರ್ಸ್’ನ ಮುಖ್ಯಸ್ಥರೂ ನಾಪತ್ತೆಯಾಗಿದ್ದರು. ಲಿ ಶಾಂಗಫೂ ಅವರನ್ನು ಮಾರ್ಚ್ 2023 ರಲ್ಲಿ ರಕ್ಷಣಾ ಸಚಿವರನ್ನಾಗಿ ನೇಮಿಸಲಾಗಿತ್ತು. ಜುಲೈ ತಿಂಗಳಿನಲ್ಲಿ ವಿದೇಶಾಂಗ ಸಚಿವ ಕಿನ್ ಗಾಂಗ ಅವರನ್ನು ತೆಗೆದುಹಾಕಲಾಗಿತ್ತು. ಅದಕ್ಕೂ ಮುನ್ನ ಅವರು 2 ತಿಂಗಳ ಹಿಂದೆ ನಾಪತ್ತೆಯಾಗಿದ್ದರು.

ಈ ಸಂದರ್ಭದಲ್ಲಿ ಜಪಾನನಲ್ಲಿರುವ ಅಮೇರಿಕಾ ರಾಯಭಾರಿ ರೇಹಮ್ ಇಮ್ಯಾನುಯೆಲ್ ಅವರು ಟ್ವೀಟ್ ಮಾಡಿ, “ಕಳೆದ 2 ವಾರಗಳಿಂದ ಚೀನಾದ ರಕ್ಷಣಾ ಸಚಿವರು ಕಾಣಿಸುತ್ತಿಲ್ಲ.” ತಿಳಿಸಿದ್ದರು. ಚೀನಾ ರಕ್ಷಣಾ ಸಚಿವರಾದ ಲೀ ಶಾಂಗಫೂ ಆಗಸ್ಟ್ 29, 2023 ರಿಂದ ಕಾಣಿಸಿಕೊಂಡಿಲ್ಲ. ಲಿ ಶಾಂಗಫೂ ಇವರು ಚೀನಾ-ಆಫ್ರಿಕಾ ಶಾಂತಿ ಮತ್ತು ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ್ದರು. ತದನಂತರ ಅವರು ಕಾಣಿಸಿಕೊಂಡಿಲ್ಲ.