ಬೇರೊಬ್ಬರ ಪ್ರದೇಶವನ್ನು ತನ್ನದೆಂದು ಹೇಳುವ ಚೀನಾದ ಹಳೆಯ ಚಾಳಿ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ಚೀನಾದ ಹೊಸ ನಕ್ಷೆ ಬಗ್ಗೆ ಕಿವಿ ಹಿಂಡಿದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ !

ನವ ದೆಹಲಿ – ಚೀನಾವು ತನ್ನ ಭೂಪಟದಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚೀನಾವನ್ನು ತನ್ನ ಭೂಪ್ರದೇಶವೆಂದು ತೋರಿಸಿದ ನಂತರ, ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವಾಗ, ‘ಚೀನಾ ಇತರರ ಪ್ರದೇಶವನ್ನು ತನ್ನದು ಎಂದು ಹೇಳಿಕೊಳ್ಳುವ ಹಳೆಯ ಚಾಳಿ’ ಎಂದು ಹೇಳಿದ್ದಾರೆ. ಎನ್.ಡಿ.ಟಿ.ವಿ. ವಾರ್ತಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು, ಚೀನಾವು ಭೂಪಟದಲ್ಲಿ ತನ್ನದೆಂದು ತೋರಿಸಿರುವ ಪ್ರದೇಶಗಳು ತನ್ನದಲ್ಲ ಎಂದು ಹೇಳಿದ್ದಾರೆ. ಚೀನಾದಲ್ಲಿ ಇದನ್ನು ಮಾಡುವ ಹಳೆಯ ಚಾಳಿಯಾಗಿದೆ. ಅಕ್ಸಾಯ್ ಚೀನಾ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗಗಳಾಗಿವೆ. ಈ ಹಿಂದೆಯೂ ಚೀನಾ ಭಾರತದ ಕೆಲವು ಭಾಗಗಳನ್ನು ನಕ್ಷೆ ಮಾಡಿದೆ. ಅವರ ದಾವೆಯಿಂದ ಏನೂ ಆಗಲ್ಲ. ನಮ್ಮ ಸರಕಾರದ ನಿಲುವು ಸ್ಪಷ್ಟವಾಗಿದೆ. ಬೇರೊಬ್ಬರ ಪ್ರದೇಶಗಳು ತಮ್ಮದಾಗಿರುತ್ತವೆ ಎಂಬ ನಿಷ್ಫಲ ಹಕ್ಕುಗಳನ್ನು ಮಾಡುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂದು ಹೇಳಿದರು.