“ಅಂತರಾಷ್ಟ್ರೀಯ ಆರ್ಥಿಕ ಹೆದ್ದಾರಿ” ಇತಿಹಾಸದಲ್ಲೇ ಅತಿ ದೊಡ್ಡ ಯೋಜನೆ ! – ಇಸ್ರೇಲ್

ಜೆರುಸಲೇಂ (ಇಸ್ರೇಲ್) – ಭಾರತದಲ್ಲಿ ನಡೆದ ‘ಜಿ-20’ ಶೃಂಗಸಭೆಯಲ್ಲಿ, ರೈಲ್ವೆ, ರಸ್ತೆಗಳು ಮತ್ತು ಬಂದರುಗಳ ಮೂಲಕ ಭಾರತ, ಮಧ್ಯಪ್ರಾಚ್ಯ ದೇಶಗಳು, ಯುರೋಪ್ ಮತ್ತು ಅಮೆರಿಕಾವನ್ನು ಸಂಪರ್ಕಿಸುವ ಆರ್ಥಿಕ ಹೆದ್ದಾರಿಯನ್ನು ನಿರ್ಮಿಸಲು ನಿರ್ಧರಿಸಲಾಯಿತು. ಇಸ್ರೇಲ್ ತನ್ನ ಸಂತೋಷವನ್ನು ವ್ಯಕ್ತಪಡಿಸಿದೆ ಮತ್ತು ಇದು ‘ದೊಡ್ಡ ಯೋಜನೆ’ ಎಂದು ಹೇಳಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಈ ಅಂತರಾಷ್ಟ್ರೀಯ ಯೋಜನೆಯ ಕೇಂದ್ರವಾಗಿದೆ ಎಂದು ಹೇಳುವ ವೀಡಿಯೊವನ್ನು ಪ್ರಸಾರ ಮಾಡಿದರು; ಏಕೆಂದರೆ ಇದು ಏಷ್ಯಾವನ್ನು ಯುರೋಪಿನೊಂದಿಗೆ ಸಂಪರ್ಕಿಸುತ್ತದೆ. ಈ ಯೋಜನೆಯು ಮಧ್ಯಪ್ರಾಚ್ಯ ಮತ್ತು ಇಸ್ರೇಲ್‌ನ ಸ್ಥಿತಿಯನ್ನು ಬದಲಾಯಿಸುತ್ತದೆ. ಇದು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ. ಇದು ಇತಿಹಾಸದಲ್ಲೇ ಅತಿ ದೊಡ್ಡ ಯೋಜನೆಯಾಗಿದೆ.

ಇದನ್ನು ಭಾರತ, ಅಮೆರಿಕಾ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಜರ್ಮನಿ, ಇಟಲಿ ಇತ್ಯಾದಿಗಳು ಘೋಷಿಸಿತ್ತು. ಈ ಆರ್ಥಿಕ ಹೆದ್ದಾರಿಯು ಚೀನಾದ ‘ಒನ್ ಬೆಲ್ಟ್ ಒನ್ ರೋಡ್’ ಯೋಜನೆಗೆ ಪ್ರತ್ಯುತ್ತರವೆಂದು ಹೇಳಲಾಗುತ್ತದೆ.