ಚೀನಾದ ಹೊಸ ನಕಾಶೆಗೆ ವಿರೋಧ ವ್ಯಕ್ತವಾದ ನಂತರ ಉದ್ಧಟ ಚೀನಾದಿಂದ ಭಾರತಕ್ಕೆ ಸಲಹೆ !

‘ಭಾರತ ಶಾಂತಿಯಿಂದ ಇರಬೇಕು ಮತ್ತು ಇದರ ಬಗ್ಗೆ ಹೆಚ್ಚು ಮಾತನಾಡುವುದು ಬಿಡಬೇಕಂತೆ !

ನವ ದೆಹಲಿ – ಚೀನಾ ಇತ್ತೀಚೆಗೆ ಪ್ರಸಾರ ಮಾಡಿರುವ ಅದರ ಹೊಸ ನಕಾಶೆಯಲ್ಲಿ ಭಾರತದ ಅಕ್ಸಾಯಿ ಚೀನಾ ಮತ್ತು ಅರುಣಾಚಲ ಪ್ರದೇಶದ ಭಾಗಗಳು ತನ್ನದೆಂದು ತೋರಿಸಿರುವುದರಿಂದ ಭಾರತ ಇದಕ್ಕೆ ವಿರೋಧಿಸಿದೆ. ಭಾರತದ ವಿದೇಶಾಂಗ ಸಚಿವರು ‘ಇದು ಚೀನಾದ ಹಳೆಯ ಚಾಳಿ ಆಗಿದೆ, ಅದರ ದಾವೆಗೆ ಏನು ಅರ್ಥವಿಲ್ಲ’, ಎಂದು ಹೇಳಿದ್ದರು. ಈ ಕುರಿತು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೇನಬೀನ್ ಇವರು, ನಾವು ನಮ್ಮ ನಕಾಶೆಯ ೨೦೨೩ ರ ಆವೃತ್ತಿ ಪ್ರಸಾರಗೊಳಿಸಿದ್ದೇವೆ, ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಚೀನಾದ ಸಾರ್ವಭೌಮತ್ವ ಮತ್ತು ಅಖಂಡತೆ ಗಮನಕ್ಕೆ ತೆಗೆದು ಕೊಂಡು ಈ ನಕಾಶೆ ಪ್ರಸಾರ ಮಾಡಲಾಗಿದೆ. ಈ ಪ್ರದೇಶ ಕಾನೂನ ರೀತಿಯಲ್ಲಿ ನಮ್ಮದಾಗಿದೆ. ಸಂಬಂಧಿತ ಪಕ್ಷ (ಭಾರತ) ಈ ವಿಷಯದ ಬಗ್ಗೆ ಶಾಂತವಾಗಿರಲಿ ಮತ್ತು ಇದರ ಬಗ್ಗೆ ಮಾತನಾಡುವುದಿಲ್ಲ ಎಂಬು ನಾವು ನಂಬಿದ್ದೇವೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲಿವು

ಭಾರತವು ಏನು ಮಾಡಬೇಕು ಮತ್ತು ಏನು ಮಾಡಬಾರದು ? ಇದು ಚೀನಾ ಹೇಳುವ ಅಗತ್ಯವಿಲ್ಲ ! ಇಂತಹ ಉದ್ಧಟ ಚೀನಾಗೆ ಕೇವಲ ಮಾತಿನಿಂದ ತಿಳಿಯುವುದಿಲ್ಲ ಎಂಬುದು ಇದರಿಂದ ತಿಳಿದು ಬರುತ್ತದೆ !