‘ಆದಿತ್ಯ ಎಲ್ 1’ ರ ಯಶಸ್ವಿ ಉಡಾವಣೆ !

೬೩ ನಿಮಿಷದಲ್ಲಿ ಪೃಥ್ವಿಯ ಕಕ್ಷೆ ತಲುಪಿತು !

೧೬ ದಿನದ ನಂತರ ಸೂರ್ಯನತ್ತ ಪಯಣ !

ಬೆಂಗಳೂರು – ಭಾರತದ ಸೂರ್ಯ ಅಭಿಯಾನದ ಅಡಿಯಲ್ಲಿ ‘ಆದಿತ್ಯ ಎಲ್ 1’ ಈ ಯಾನ ಸಪ್ಟೆಂಬರ್ ೨ ರಂದು ಬೆಳಿಗ್ಗೆ ೧೧.೫೦ ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆಂಧ್ರ ಪ್ರದೇಶದಲ್ಲಿನ ಶ್ರೀಹರಿಕೋಟದಿಂದ ಕ್ಯಾಪ್ಟನ್ ಸತೀಶ್ ಧವನ ಬಾಹ್ಯಕಾಶ ಕೇಂದ್ರದಿಂದ ಈ ಯಾನ ‘ಪಿ.ಎಸ್’ಎಲ್’ವಿ.ಸಿ. 57’ ಈ ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು. ಅದರ ನಂತರ ೬೩ ನಿಮಿಷದಲ್ಲಿ ಈ ಯಾನ ಪೃಥ್ವಿಯ ಕಕ್ಷೆಗೆ ತಲುಪಿತು. ಅಲ್ಲಿ ಈ ಯಾನ ೧೬ ದಿನ ಉಳಿಯುವುದು. ಅದರ ನಂತರ ಅದು ಸೂರ್ಯನ ಕಡೆಗೆ ಮಾರ್ಗಕ್ರಮಣ ಮಾಡಲಿದೆ. ಪೃಥ್ವಿ ಮತ್ತು ಸೂರ್ಯನ ಮಧ್ಯ ಪೃಥ್ವಿಯಿಂದ ೧೫ ಲಕ್ಷ ಕಿಲೋಮೀಟರ್ ಅಂತರದಲ್ಲಿರುವ ‘ಲಾಂಗ್ರಾಜ್ ಪಾಯಿಂಟ್ 1’ ಇಲ್ಲಿ ೪ ತಿಂಗಳ ನಂತರ ಈ ಯಾನ ತಲುಪುವುದು ಮತ್ತು ಅಲ್ಲಿ ಸ್ಥಿರವಾಗುವುದು. ಅಲ್ಲಿ ಮುಂದಿನ ೫ ವರ್ಷಗಳ ಕಾಲ ಉಳಿದು ‘ಆದಿತ್ಯ ಎಲ್ 1’ ಸೂರ್ಯನ ಅಧ್ಯಯನ ಮಾಡುವುದು. ಆದ್ದರಿಂದ ಸೂರ್ಯನಲ್ಲಾಗುವ ಬದಲಾವಣೆ ಪೃಥ್ವಿಯ ಮೇಲಿನ ಆಕಾಶ ಮತ್ತು ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ? ಇದನ್ನು ತಿಳಿದುಕೊಳ್ಳಬಹುದು. ‘ಇಸ್ರೋ’ದಿಂದ ಈ ಅಭಿಯಾನಕ್ಕಾಗಿ ಸುಮಾರು ೪೦೦ ಕೋಟಿ ರೂಪಾಯಿ ಖರ್ಚು ಮಾಡಿದೆ. ‘ಆದಿತ್ಯ ಎಲ್ 1’ ರ ಮೂಲಕ ಯಾವ ರೀತಿ ಎಲ್ಲಾ ಗ್ರಹಗಳು ಸೂರ್ಯನಿಗೆ ವ್ಯವಸ್ಥಿತವಾಗಿ ಪ್ರದಕ್ಷಿಣೆ ಹಾಕುತ್ತವೆ ? ಸೂರ್ಯನ ನಿರ್ಮಿತಿ ಹೇಗೆ ಆಯಿತು? ಪೃಥ್ವಿಯ ಉತ್ಪತ್ತಿ ಎಲ್ಲಿಂದ ಆಯಿತು? ಸಂಪೂರ್ಣ ಸೌರ ಮಂಡಲ ಸೂರ್ಯನಿಂದ ನಿರ್ಮಾಣವಾಗಿದೆಯೇ ? ಅಥವಾ ಪೃಥ್ವಿ ಸಹಿತ ಸೌರ ಮಂಡಲದಲ್ಲಿನ ಗ್ರಹಗಳು ಎಲ್ಲಿಂದ ಬಂದಿದೆ? ಈ ಎಲ್ಲಾ ವಿಷಯದ ಅಧ್ಯಯನ ಮಾಡಲಾಗುವುದು. ‘ಆದಿತ್ಯ ಎಲ್ 1’ ಇದರ ಸಂಪೂರ್ಣ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಲಿದೆ.

ಚೀನಾದ ಸೂರ್ಯ ಅಭಿಯಾನದಕ್ಕಿಂತಲೂ ಭಾರತದ ಅಭಿಯಾನ ಹೆಚ್ಚು ಪ್ರಭಾವಶಾಲಿ !

ಭಾರತಕ್ಕಿಂತ ಮೊದಲ ಚೀನಾ ಸೂರ್ಯ ಅಭಿಯಾನ ನಡೆದಿದೆ. ಚೀನಾ ಅಕ್ಟೋಬರ್ ೮, ೨೦೨೨ ರಂದು ‘ಎ. ಎಸ್.ಓ.ಎಸ್.’ ಈ ಯಾನದ ಉಡಾವಣೆ ನಡೆಸಿತ್ತು. ಅದು ಸೂರ್ಯನ ಕಡೆಗೆ ಹೋಗದೆ ಪೃಥ್ವಿಯಿಂದ ೭೨೦ ಕಿಲೋಮೀಟರ್ ಎತ್ತರದಲ್ಲಿ ಉಳಿದು, ಎಂದರೆ ಪೃಥ್ವಿಯ ಕಕ್ಷೆಯಲ್ಲಿಯೇ ಉಳಿದು ಸೂರ್ಯನ ಅಧ್ಯಯನ ನಡೆಸುತ್ತಿದೆ. ಅದರ ತುಲನೆಯಲ್ಲಿ ಭಾರತದ ‘ಆದಿತ್ಯ ಎಲ್ 1’ ಈ ಯಾನ ಪೃಥ್ವಿಯಿಂದ ೧೫ ಲಕ್ಷ ಕಿಲೋಮೀಟರ್ ದೂರದವರೆಗೆ ಹೋಗಿ ಸೂರ್ಯನ ಅಧ್ಯಯನ ನಡೆಸುವುದು. ಭಾರತದ ಈ ಯಾನದ ತೂಕ ಕೇವಲ ೪೦೦ ಕಿಲೋ ಹಾಗೂ ಚೀನಾದ ಯಾನದ ತೂಕ ೮೮೮ ಕಿಲೋ ದಷ್ಟು ಇದೆ. ಭಾರತದ ಯಾನ ಸುಮಾರು ೪೦೦ ಕೋಟಿ ರೂಪಾಯಿಯಲ್ಲಿ ತಯಾರಾಗಿದೆ, ಹಾಗೂ ಚೀನಾದಿಂದ ಅದರ ಯಾನದ ಮೇಲೆ ಭಾರತದಕ್ಕಿಂತಲೂ ಹೆಚ್ಚಿನ ಹಣ ಖರ್ಚು ಮಾಡಿದೆ.