ತನ್ನ ಭೂಪಟದಲ್ಲಿ ಅರುಣಾಚಲ ಪ್ರದೇಶವನ್ನು ಸೇರಿಸಿದ ಚೀನಾ

ತನ್ನ ವಿಸ್ತರಣೆಯ ಮಹತ್ವಾಕಾಂಕ್ಷೆಯೊಂದಿಗೆ ಚೀನಾ ಈ ರೀತಿ ವರ್ತಿಸುವುದರಲ್ಲಿ ಆಶ್ಚರ್ಯವೇನಿಲ್ಲ!

ನವದೆಹಲಿ – ಅರುಣಾಚಲ ಪ್ರದೇಶ, ಅಕ್ಸಾಯ್ ಚೀನಾ, ದಕ್ಷಿಣ ಟಿಬೆಟ್, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದ ಹೆಚ್ಚಿನ ಭಾಗಗಳನ್ನು ಒಳಗೊಂಡಿರುವ ಹೊಸ ನಕ್ಷೆಯನ್ನು ಚೀನಾ ಬಿಡುಗಡೆ ಮಾಡಿದೆ. “2023 ರ ಅಧಿಕೃತ ನಕ್ಷೆಯನ್ನು ಚೀನಾದ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯವು ಚೀನಾದ ‘ಸ್ಟ್ಯಾಂಡರ್ಡ್ ಮ್ಯಾಪ್ ಸರ್ವೀಸ್’ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ” ಎಂದು ಚೀನಾ ಸರಕಾರದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ಟ್ವೀಟ್ ಮಾಡಿದೆ. “ಈ ನಕ್ಷೆಯು ಚೀನಾ ಮತ್ತು ವಿಶ್ವದ ಇತರ ದೇಶಗಳು ಗಡಿಗಳನ್ನು ಸೆಳೆಯುವ ವಿಧಾನವನ್ನು ಆಧರಿಸಿದೆ”, ಎಂದು ಈ ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ವಿಶೇಷವೆಂದರೆ, ಈ ವರ್ಷದ ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶದ 11 ಹಳ್ಳಿಗಳಿಗೆ ಚೀನಾ ಹೆಸರಿಸಿತ್ತು. ಈ ಬಗ್ಗೆ ವಾಗ್ವಾದ ನಡೆದಿತ್ತು. ಅಮೆರಿಕಾವು ಭಾರತದ ಪರವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಸಂಪಾದಕೀಯ ನಿಲುವು

  • ಚೀನಾ ತನ್ನ ಭೂಪಟದಲ್ಲಿ ಏನೇ ತೋರಿಸಿದರೂ ವಾಸ್ತವ ಸ್ಥಿತಿ ಜಗತ್ತಿಗೇ ಗೊತ್ತು !
  • ಈಗ ಭಾರತವು ಚೀನಾಕ್ಕೆ ಪ್ರತ್ಯುತ್ತರ ನೀಡಲು ಟಿಬೆಟ್ ಅನ್ನು ಚೀನಾದಿಂದ ಸ್ವತಂತ್ರವಾಗಿ ತೋರಿಸಲು ಪ್ರಾರಂಭಿಸಬೇಕು !