ಎಲ್ಲಿಯವರೆಗೆ ಮಂದಿರ ಬೇರೆ ಕಡೆಗೆ ಸ್ಥಳಾಂತರ ವಾಗುವುದಿಲ್ಲವೋ ಮತ್ತು ಮೂರ್ತಿ ವಿಸರ್ಜನೆ ಮಾಡಲಾಗುವುದಿಲ್ಲವೋ ಅಲ್ಲಿಯವರೆಗೆ ಮಂದಿರ ಎಂದಿಗೂ ಮಂದಿರವಾಗಿಯೇ ಇರುತ್ತದೆ!

ಹಿರಿಯ ನ್ಯಾಯವಾದಿ ಶ್ರೀ ಅಶ್ವಿನಿ ಉಪಾಧ್ಯಾಯ ಇವರಿಂದ ಜ್ಞಾನವಾಪಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪ ಮನವಿ.

ಬಿಜೆಪಿ ದೇಶದಲ್ಲಿ ಧ್ರುವಿಕರಣದ ಸೀಮೆಎಣ್ಣೆ ಸಿಂಪಡಿಸುತ್ತಿದೆ ಮತ್ತು ಕಿಡಿ ಹತ್ತಿಸಿದ ನಂತರ ದೇಶ ಉರಿಯಲು ಪ್ರಾರಂಭವಾಗಲಿದೆ (ಅಂತೆ) ! ರಾಹುಲ ಗಾಂಧಿ

ಬಿಜೆಪಿ ದೇಶದಲ್ಲಿ ಧ್ರುವಿಕರಣದ ಸೀಮೆಎಣ್ಣೆ ಸಿಂಪಡಿಸುತ್ತಿದೆ. ನಿಮಗೆ ಕೇವಲ ಒಂದು ಕಿಡಿ ಹೊತ್ತಿಸಲಿಕ್ಕಿದೆಯಷ್ಟೆ, ನಂತರ ದೇಶ ಸ್ವತಃ ಸುಟ್ಟುಹೋಗಲಿದೆ ಎಂದು ಕಾಂಗ್ರೆಸಿನ ನಾಯಕ ರಾಹುಲ ಗಾಂಧಿಯವರು ನಿರಾಧಾರ ಟೀಕೆ ಮಾಡಿದ್ದಾರೆ.

ದೆಹಲಿಯಲ್ಲಿನ `ಔರಂಗಜೇಬ ಲೇನ್’ಗೆ `ಬಾಬಾ ವಿಶ್ವನಾಥ ಮಾರ್ಗ’ ಎಂದು ಹೆಸರಿಸಲು ಭಾಜಪದ ಮನವಿ

ಹೀಗೆ ಒಂದೊಂದೆ ಹೆಸರನ್ನು ಬದಲಾಯಿಸುವ ಬದಲು ಕೇಂದ್ರ ಸರಕಾರವು ಸಂಪೂರ್ಣ ದೇಶದಲ್ಲಿ ಮೊಗಲ, ಆಂಗ್ಲರು ಮುಂತಾದ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸಿ ಅಲ್ಲಿ ಭಾರತೀಯ ಹೆಸರುಗಳನ್ನಿಡುವ ಕಾನೂನನ್ನು ಮಾಡಿ ಅದನ್ನು ತಕ್ಷಣ ಕಾರ್ಯಾಚರಣೆಗೆ ತರಬೇಕು!

ಅರಳಿ ಮರದ ಕೆಳಗಡೆ ಒಂದು ಕಲ್ಲು ಇಡಿ, ಅಲ್ಲಿ ಒಂದು ಧ್ವಜ ಹಾಕಿರಿ, ದೇವಸ್ಥಾನ ಸಿದ್ಧ

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಸಿಕ್ಕಿರುವುದರಿಂದ ಹಿಂದೂ ಧರ್ಮದ ವಿರುದ್ಧ ಟೀಕಿಸಿದರು, ಯಾದವರು,  ಹಿಂದೂ ಧರ್ಮದ ಪ್ರಕಾರ ಎಲ್ಲಾದರೂ ಒಂದು ಅರಳಿ ಮರದ ಕೆಳಗಡೆ ಕಲ್ಲನ್ನು ಇಡಿ, ಅಲ್ಲಿ ಒಂದು ಧ್ವಜ ಹಾಕಿರಿ, ಮಂದಿರ ಸಿದ್ಧವಾಗುತ್ತದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ ಇವರು ಟೀಕಿಸಿದರು.

ತ್ರಿಪುರಾದ ಹೊಸ ಮುಖ್ಯಮಂತ್ರಿಯಾಗಿ ಮಾಣಿಕ ಸಾಹಾ ಆಯ್ಕೆ

ತ್ರಿಪುರಾದ ಭಾಜಪಾ ಸರಕಾರದ ಮುಖ್ಯಮಂತ್ರಿ ವಿಪ್ಲವ ಕುಮಾರ್ ದೇವ ಇವರು ರಾಜೀನಾಮೆ ನೀಡಿದ ನಂತರ ತ್ರಿಪುರಾದಲ್ಲಿ ಭಾಜಪದ ಪ್ರದೇಶಾಧ್ಯಾಕ್ಷ ಮಾಣಿಕ ಸಾಹಾ ಇವರನ್ನು ಮುಖ್ಯಮಂತ್ರಿಯೆಂದು ಘೋಷಿಸಲಾಯಿತು.

ಮತಾಂತರ ವಿರೋಧಿ ಮಸೂದೆಗೆ ಕರ್ನಾಟಕ ಮಂತ್ರಿಮಂಡಳದಲ್ಲಿ ಅನುಮೊದನೆ

ಕರ್ನಾಟಕದ ಭಾಜಪ ಸರಕಾರದ ಮಂತ್ರಿಮಂಡಳವು ಮತಾಂತರವಿರೋಧಿ ಮಸೂದೆಯನ್ನು ಅನುಮೋದಿಸಿದೆ. ಈಗ ಈ ಮಸೂದೆ ವಿಧಾನ ಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಅಂಗಿಕರಿಸಿದ ನಂತರ ಅದು ಕಾನೂನಾಗಿ ಜಾರಿಗೆ ಬರುತ್ತದೆ; ಆದರೆ ಅಲ್ಲಿಯವರೆಗೆ ಮಸೂದೆ ಸುಗ್ರೀವಾಜ್ಞೆಯಾಗಿ ಜಾರಿಗೆ ಬರಲಿದೆ.

ದೆಹಲಿಯ ರಸ್ತೆಗಳಿಗಿರುವ ಮೊಘಲ್ ಬಾದಶಾಹರ ಹೆಸರುಗಳನ್ನು ಬದಲಾಯಿಸಲು ಭಾಜಪದಿಂದ ಮನವಿ

ದೆಹಲಿಯಲ್ಲಿರುವ ತುಘಲಕ ರೋಡ್, ಅಕಬರ ರೋಡ್, ಔರಂಗಜೇಬ ಲೇನ್, ಹುಮಾಯೂನ ರೋಡ್, ಮತ್ತು ಶಹಜಹಾನ ರೋಡ್ ಈ ಹೆಸರುಗಳನ್ನು ಬದಲಾಯಿಸಬೇಕು ಎಂದು ಭಾಜಪವು ಮಹಾನಗರಪಾಲಿಕೆಯಲ್ಲಿ ಮನವಿ ಮಾಡಿದೆ.

ಧರ್ಮಶಾಳಾ (ಹಿಮಾಚಲ ಪ್ರದೇಶ)ದಲ್ಲಿನ ವಿಧಾನಭವನದ ಮೇಲೆ ಅಜ್ಞಾತರು ಖಲಿಸ್ತಾನದ ಧ್ವಜಗಳನ್ನು ಹಚ್ಚಿದ್ದಾರೆ

ಇಲ್ಲಿನ ವಿಧಾನಸಭಾ ಭವನದ ಮುಖ್ಯ ಪ್ರವೇಶದ್ವಾರದ ಮೇಲೆ ರಾತ್ರಿಯ ಸಮಯದಲ್ಲಿ ಅಜ್ಞಾತರು ಖಲಿಸ್ತಾನಿ ಧ್ವಜವನ್ನು ಹಚ್ಚಿರುವ ಹಾಗೆಯೇ ಭವನದ ಗೋಡೆಗಳ ಹೊರಗಿನ ಬದಿಯಲ್ಲಿ ಖಲಿಸ್ತಾನಿ ಸಮರ್ಥನೆಯ ಘೋಷಣೆಗಳನ್ನು ಬರೆದಿರುವುದು ಕಂಡುಬಂದಿದೆ.

ಮತಾಂತರ ಆಗಿರುವ ಮುಸಲ್ಮಾನರಿಗೆ ಹಿಂದೂ ಧರ್ಮ ಸ್ವೀಕರಿಸಬೇಕಾಗುವುದು – ಭಾಜಪಾದ ನಾಯಕ ಜ್ಞಾನದೇವ ಆಹುಜಾ

ಮುಸಲ್ಮಾನರು ದೇಶವನ್ನು ಎಂದೂ ಆಳಲಿಲ್ಲ . ಮೊಘಲ್ ಮತ್ತು ಅಪಘಾನಿ ಇವರು ದೇಶ ಆಳಿದವರು. ಈಗಿರುವ ಮುಸಲ್ಮಾನರಿಗೆ ಆ ಕಾಲದಲ್ಲಿ ಹೊಡೆದು ಬಡೆದು ಮುಸಲ್ಮಾನರನ್ನಾಗಿ ಪರಿವರ್ತಿಸಲಾಗಿದೆ.

ಭಿಲವಾಡಾ (ರಾಜಸ್ತಾನ)ದಲ್ಲಿ ಇಬ್ಬರು ತರುಣರ ಮೇಲೆ ಚಾಕುವಿನಿಂದ ಆಕ್ರಮಣವಾಗಿದ್ದರಿಂದ ಒತ್ತಡ

ಇಲ್ಲಿನ ಸಾಂಗಾನೇರ ಭಾಗದಲ್ಲಿ ೨ ತರುಣರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಅವರ ದ್ವಿಚಕ್ರವನ್ನು ಸುಟ್ಟಿರುವ ಘಟನೆಯ ನಂತರ ಇಲ್ಲಿ ಒತ್ತಡದ ವಾತಾವರಣವಿದೆ. ಆರೋಪಿಗಳನ್ನು ತಕ್ಷಣ ಬಂಧಿಸುವ ಮನವಿ ಮಾಡಲು ಇಲ್ಲಿ ಪ್ರತಿಭಟನೆ ಆಂದೋಲನಗಳನ್ನು ಮಾಡಲಾಗುತ್ತದೆ.