ಧರ್ಮಶಾಳಾ (ಹಿಮಾಚಲ ಪ್ರದೇಶ)ದಲ್ಲಿನ ವಿಧಾನಭವನದ ಮೇಲೆ ಅಜ್ಞಾತರು ಖಲಿಸ್ತಾನದ ಧ್ವಜಗಳನ್ನು ಹಚ್ಚಿದ್ದಾರೆ

ಧರ್ಮಶಾಳಾ (ಹಿಮಾಚಲ ಪ್ರದೇಶ) – ಇಲ್ಲಿನ ವಿಧಾನಸಭಾ ಭವನದ ಮುಖ್ಯ ಪ್ರವೇಶದ್ವಾರದ ಮೇಲೆ ರಾತ್ರಿಯ ಸಮಯದಲ್ಲಿ ಅಜ್ಞಾತರು ಖಲಿಸ್ತಾನಿ ಧ್ವಜವನ್ನು ಹಚ್ಚಿರುವ ಹಾಗೆಯೇ ಭವನದ ಗೋಡೆಗಳ ಹೊರಗಿನ ಬದಿಯಲ್ಲಿ ಖಲಿಸ್ತಾನಿ ಸಮರ್ಥನೆಯ ಘೋಷಣೆಗಳನ್ನು ಬರೆದಿರುವುದು ಕಂಡುಬಂದಿದೆ. ಇದರಿಂದಾಗಿ ಇಲ್ಲಿ ಒತ್ತಡ ನಿರ್ಮಾಣವಾಗಿದೆ. ಪೊಲೀಸರು ಧ್ವಜಗಳನ್ನು ತೆಗೆದು ಘೋಷಣೆಗಳನ್ನು ಒರೆಸಿ ಹಾಕಿದ್ದಾರೆ. ಈ ಪ್ರಕರಣದ ನಂತರ ಈ ಪರಿಸರದಲ್ಲಿ ಒತ್ತಡ ನಿರ್ಮಾಣವಾಗಿದೆ. ಅನಂತರ ವಿಧಾನಸಭಾ ಭವನದ ಪರಿಸರದಲ್ಲಿ ಪೊಲೀಸ ಬಂದೋಬಸ್ತನ್ನು ಹೆಚ್ಚಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಅಪರಾಧವನ್ನು ದಾಖಲಿಸಿದ್ದಾರೆ ಮತ್ತು ಪರಿಸರದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಆಧಾರದಲ್ಲಿ ತನಿಖೆಯನ್ನು ಆರಂಭಿಸಿದ್ದಾರೆ. ಪಂಜಾಬಿನಿಂದ ಬಂದಿರುವ ಕೆಲವು ಪ್ರವಾಸಿಗಳು ಈ ಕೃತ್ಯವನ್ನು ಮಾಡಿರಬಹುದು ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.

ಹಿಮಾಚಲಪ್ರದೇಶದ ಭಾಜಪ ಸರಕಾರದ ಮುಖ್ಯಮಂತ್ರಿಗಳಾದ ಜಯರಾಮ ಠಾಕೂರರವರು ಟ್ವೀಟ್‌ ಮಾಡಿ ‘ಈ ವಿಧಾನಸಭೆಯಲ್ಲಿ ಕೇವಲ ಚಳಿಗಾಲದ ಅಧಿವೇಶನವನ್ನು ಆಯೋಜಿಸಲಾಗುತ್ತದೆ. ಆದುದರಿಂದ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಸುರಕ್ಷಾವ್ಯವಸ್ಥೆಯನ್ನು ನೇಮಿಸಿರುವುದಿಲ್ಲ. ಶೀಘ್ರದಲ್ಲಿಯೇ ಈ ಘಟನೆಯ ತನಿಖೆ ನಡೆಸಲಾಗುವುದು. ಹಾಗೆಯೇ ದೋಷಿಗಳು ಕಂಡುಬಂದರೆ ಕಠೋರ ಕಾರ್ಯಾಚರಣೆಯನ್ನೂ ಮಾಡಲಾಗುವುದು. ಈ ಕೃತ್ಯವನ್ನು ಮಾಡುವವರಿಗೆ ನಾನು ‘ಧೈರ್ಯವಿದ್ದರೆ ಎದುರಿಗೆ ಬನ್ನಿ’ ಎಂದು ಹೇಳಲು ಇಚ್ಛಿಸುತ್ತೇನೆ’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಖಲಿಸ್ತಾನವಾದಿಗಳ ಜಾಲವು ಈಗ ಹರಿಯಾಣಾ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ವರೆಗೂ ಹಬ್ಬಲು ಆರಂಭವಾಗಿದೆ. ಆದುದರಿಂದ ಕೇಂದ್ರ ಸರಕಾರವು ಅವರ ಮೇಲೆ ಈಗಲೇ ಕಠೋರ ಕಾರ್ಯಾಚರಣೆಯನ್ನು ಮಾಡಿ ಅವರ ವ್ಯವಸ್ಥೆ ಮಾಡಬೇಕಿದೆ !