ಲಂಡನ್ ( ಬ್ರಿಟನ) – ಬಿಜೆಪಿ ದೇಶದಲ್ಲಿ ಧ್ರುವಿಕರಣದ ಸೀಮೆಎಣ್ಣೆ ಸಿಂಪಡಿಸುತ್ತಿದೆ. ನಿಮಗೆ ಕೇವಲ ಒಂದು ಕಿಡಿ ಹೊತ್ತಿಸಲಿಕ್ಕಿದೆಯಷ್ಟೆ, ನಂತರ ದೇಶ ಸ್ವತಃ ಸುಟ್ಟುಹೋಗಲಿದೆ ಎಂದು ಕಾಂಗ್ರೆಸಿನ ನಾಯಕ ರಾಹುಲ ಗಾಂಧಿಯವರು ನಿರಾಧಾರ ಟೀಕೆ ಮಾಡಿದ್ದಾರೆ. ಅವರು ಕೆಂಬ್ರಿಜ ವಿಶ್ವವಿದ್ಯಾಲಯದಲ್ಲಿ ಎರ್ಪಡಿಸಲಾಗಿದ್ದ `ಭಾರತದ ವಿಚಾರಗಳು’ ಎಂಬ ವಿಚಾರ ಸಂಕೀರ್ಣದಲ್ಲಿ ಮಾತನಾಡುತ್ತಿದ್ದರು. `ಚೀನಾ ಲಡಾಖ ಮತ್ತು ಡೊಕಲಾಮದಲ್ಲಿ ಉಕ್ರೇನನಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ; ಆದರೆ ಬಿಜೆಪಿ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರ ಸರಕಾರ ಈ ವಿಚಾರದಲ್ಲಿ ಮಾತನಾಡಲು ಹೆದರುತ್ತಿದೆ.’ ಎನ್ನುವ ಆರೋಪವನ್ನು ಅವರು ಈ ಸಂದರ್ಭದಲ್ಲಿ ಮಾಡಿದರು. (ರಾಹುಲ ಗಾಂಧಿಯವರ ಮುತ್ತಾತ ನೆಹರು ಪ್ರಧಾನಿಯಾಗಿದ್ದಾಗ ಚೀನಾವು ಭಾರತದ ಸಾವಿರಾರು ಚದುರ ಕಿ. ಮೀ ಭೂಮಿಯನ್ನು ಕಬಳಿಸಿದೆ ಮತ್ತು ಕಾಂಗ್ರೆಸ ಯಾವತ್ತು ಚೀನಾದಿಂದ ಹಿಂತಿರುಗಿ ಪಡೆಯಲಿಲ್ಲ, ಈ ವಿಷಯದ ಬಗ್ಗೆ ರಾಹುಲಗಾಂಧಿ ಏಕೆ ಮಾತನಾಡುತ್ತಿಲ್ಲ? – ಸಂಪಾದಕರು)
At London talk, Rahul accused BJP, RSS of polarising India https://t.co/TgBTW3vhDU
— TOI India (@TOIIndiaNews) May 20, 2022
ರಾಹುಲ ಗಾಂಧಿ ಒಂದು ಪ್ರಶ್ನೆಗೆ ಉತ್ತರಿಸುತ್ತ ಹೇಳಿದರು; ಭಾರತದಲ್ಲಿಯ ಪ್ರಜಾಪ್ರಭುತ್ವದ ಸ್ಥಿತಿ ಚೆನ್ನಾಗಿಲ್ಲ.( ಭಾರತದಲ್ಲಿಯ ಪ್ರಜಾಪ್ರಭುತ್ವದ ಸ್ಥಿತಿಗೆ ಕಾಂಗ್ರೆಸ ಕಾರಣವೆಂದು ರಾಹುಲ ಗಾಂಧಿ ಏಕೆ ಹೇಳುವುದಿಲ್ಲ?- ಸಂಪಾದಕರು) ಎಲ್ಲ ಸಂವಿಧಾನಾತ್ಮಕ ಪದವಿಗಳ ಮೇಲೆ ಬಿಜೆಪಿಯು ನಿಯಂತ್ರಣವನ್ನು ಪಡೆದಿದೆ. ಎಲ್ಲ ಸರಕಾರಿ ಸಂಸ್ಥೆಗಳಲ್ಲಿ ಜನರಿಗೆ ಬೆನ್ನಹಿಂದಿನಿಂದ ಪ್ರವೇಶ ನೀಡಲಾಗುತ್ತಿದೆ. ನಾವು ಈ ಜನರ ವಿರುದ್ಧ ಹೋರಾಡುತ್ತಿದ್ದೇವೆ.