ಮತಾಂತರ ವಿರೋಧಿ ಮಸೂದೆಗೆ ಕರ್ನಾಟಕ ಮಂತ್ರಿಮಂಡಳದಲ್ಲಿ ಅನುಮೊದನೆ

ವಿಧಾನಸಭೆಯಲ್ಲಿ ಮಸುದೆ ಅನುಮೋದನೆಯಾಗುವ ತನಕ ಸುಗ್ರಿವಾಜ್ಞೆಯ ಸ್ವರೂಪದಲ್ಲಿ ಜಾರಿಯಾಗಲಿದೆ !

ಬೆಂಗಳೂರು – ಕರ್ನಾಟಕದ ಭಾಜಪ ಸರಕಾರದ ಮಂತ್ರಿಮಂಡಳವು ಮತಾಂತರವಿರೋಧಿ ಮಸೂದೆಯನ್ನು ಅನುಮೋದಿಸಿದೆ. ಈಗ ಈ ಮಸೂದೆ ವಿಧಾನ ಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಅಂಗಿಕರಿಸಿದ ನಂತರ ಅದು ಕಾನೂನಾಗಿ ಜಾರಿಗೆ ಬರುತ್ತದೆ; ಆದರೆ ಅಲ್ಲಿಯವರೆಗೆ ಮಸೂದೆ ಸುಗ್ರೀವಾಜ್ಞೆಯಾಗಿ ಜಾರಿಗೆ ಬರಲಿದೆ.

(ಸೌಜನ್ಯ : News18 Kannada)

ವಿಧಾನಪರಿಷತ್ತಿನಲ್ಲಿ ಸರಕಾರದ ಹೇಳಿಕೆಗೆ ಬಹುಮತ ಇಲ್ಲದ ಕಾರಣ ಸುಗ್ರೀವಾಜ್ಞೆಗೆ ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಜೂನನಲ್ಲಿ ವಿಧಾನಪರಿಷತ ಚುನಾವಣೆ ನಿಗದಿಯಾಗಿದೆ. ಆನಂತರ ಇಲ್ಲಿ ಭಾಜಪಗೆ ಬಹುಮತ ಸಿಗುವ ಸಾಧ್ಯತೆ ಇದೆ.