ಮತಾಂತರ ಆಗಿರುವ ಮುಸಲ್ಮಾನರಿಗೆ ಹಿಂದೂ ಧರ್ಮ ಸ್ವೀಕರಿಸಬೇಕಾಗುವುದು – ಭಾಜಪಾದ ನಾಯಕ ಜ್ಞಾನದೇವ ಆಹುಜಾ

ಅಲವರ್ (ರಾಜಸ್ಥಾನ) – ಮುಸಲ್ಮಾನರು ದೇಶವನ್ನು ಎಂದೂ ಆಳಲಿಲ್ಲ . ಮೊಘಲ್ ಮತ್ತು ಅಪಘಾನಿ ಇವರು ದೇಶ ಆಳಿದವರು. ಈಗಿರುವ ಮುಸಲ್ಮಾನರಿಗೆ ಆ ಕಾಲದಲ್ಲಿ ಹೊಡೆದು ಬಡೆದು ಮುಸಲ್ಮಾನರನ್ನಾಗಿ ಪರಿವರ್ತಿಸಲಾಗಿದೆ. ಮೊಘಲರು ಈ ಮುಸಲ್ಮಾನರ ಮೇಲೆ ಅತ್ಯಾಚಾರ ನಡೆಸಿದ್ದಾರೆ, ಹಾಗೂ ಅವರ ಹೆಣ್ಣುಮಕ್ಕಳ ಮೇಲೆ ಬಲಾತ್ಕಾರ ನಡೆಸಿದ್ದಾರೆ. ಅದರ ನಂತರ ಅವರು ಮುಸಲ್ಮಾನರಾಗಿದ್ದಾರೆ. ಮೊದಲು ಅವರು ಹಿಂದೂಗಳೇ ಆಗಿದ್ದರು, ಅಂದರೆ ಈಗಿರುವ ಮುಸಲ್ಮಾನರು ಮತಾಂತರರಾದವರು. ಅದರಿಂದ ಒಂದು ದಿನ ಅವರಿಗೆ ಹಿಂದೂಧರ್ಮ ಸ್ವೀಕರಿಸ ಬೇಕಾಗುವುದು, ಎಂಬ ಅಭಿಪ್ರಾಯ ಭಾಜಪಾದ ರಾಜಸ್ಥಾನ ಪ್ರದೇಶದ ಉಪಾಧ್ಯಕ್ಷ ಜ್ಞಾನದೇವ ಆಹುಜಾ ಅವರು ವ್ಯಕ್ತಪಡಿಸಿದರು. ಇಲ್ಲಿ ಭಾಜಪಾದಿಂದ ಆಯೋಜಿಸಲಾದ ಹೂಂಕಾರ ಸಭೆಯಲ್ಲಿ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಭಾಜಪದ ಇತರ ನಾಯಕರು ಉಪಸ್ಥಿತರಿದ್ದರು. ರಾಜ್ಯದಲ್ಲಿ ಕಳೆದ ಕೆಲವು ದಿನದಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ಆಘಾತದ ವಿರುದ್ಧ ಈ ಸಭೆ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಮುಂಬರುವ ಚುನಾವಣೆ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರ ಇಳಿಸುವ ಆವಾಹನೆ ನೀಡಿದರು.