ಎಲ್ಲಿಯವರೆಗೆ ಮಂದಿರ ಬೇರೆ ಕಡೆಗೆ ಸ್ಥಳಾಂತರ ವಾಗುವುದಿಲ್ಲವೋ ಮತ್ತು ಮೂರ್ತಿ ವಿಸರ್ಜನೆ ಮಾಡಲಾಗುವುದಿಲ್ಲವೋ ಅಲ್ಲಿಯವರೆಗೆ ಮಂದಿರ ಎಂದಿಗೂ ಮಂದಿರವಾಗಿಯೇ ಇರುತ್ತದೆ!

ಜೇಷ್ಠ ನ್ಯಾಯವಾದಿ ಶ್ರೀ ಅಶ್ವಿನ್ ಉಪಾಧ್ಯಾಯ

ಹಿರಿಯ ನ್ಯಾಯವಾದಿ ಶ್ರೀ ಅಶ್ವಿನಿ ಉಪಾಧ್ಯಾಯ ಇವರಿಂದ ಜ್ಞಾನವಾಪಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪ ಮನವಿ.

ನವದೆಹಲಿ – ಭಾಜಪದ ನಾಯಕ ಮತ್ತು ಜೇಷ್ಠ ನ್ಯಾಯವಾದಿ ಶ್ರೀ ಅಶ್ವಿನ್ ಉಪಾಧ್ಯಾಯ ಅವರು ಜ್ಞಾನ ವಾಪಿ ಮಸೀದಿಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹಸ್ತಕ್ಷೇಪ ಮನವಿ ದಾಖಲಿಸಿದ್ದಾರೆ. ಅವರು ಯಾವುದೇ ದೇವತೆಗಳ ಮೂರ್ತಿಯ ಪ್ರತಿಷ್ಠಾಪನೆ ಆದನಂತರ ಮಂದಿರ ಎಂದಿಗೂ ಮಂದಿರವಾಗಿ ಉಳಿಯುತ್ತದೆ. ಎಲ್ಲಿಯವರೆಗೆ ಮಂದಿರ ಬೇರೆ ಕಡೆಗೆ ಸ್ಥಳಾಂತರವಾಗುವುದಿಲ್ಲವೋ ಅಥವಾ ಮೂರ್ತಿಯ ವಿಧಿವತ್ತಾಗಿ ವಿಸರ್ಜನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಅಲ್ಲಿ ಮಂದಿರ ಶಾಶ್ವತ ಉಳಿಯುತ್ತದೆ ಎಂದು ಹೇಳಿದರು.

ನ್ಯಾಯವಾದಿ ಶ್ರೀ ಅಶ್ವಿನ ಉಪಾಧ್ಯಾಯ ಇವರು ಮನವಿಯಲ್ಲಿ ಹೇಳಿರುವ ಅಂಶಗಳು

೧. ಮಂದಿರ ಮತ್ತು ಮಸೀದಿ ಇದರ ಧಾರ್ಮಿಕ ಸ್ವರೂಪ ಪೂರ್ಣವಾಗಿ ಭಿನ್ನವಾಗಿದೆ. ಅದರಿಂದ ಇಬ್ಬರಿಗೂ ಒಂದೇ ಕಾನೂನು ಜಾರಿ ಮಾಡಲಾಗುವುದಿಲ್ಲ. ಯಾವುದೇ ಮಂದಿರದ ಭೂಮಿಯಲ್ಲಿ ಮಸೀದಿ ಕಟ್ಟಿದ್ದರೆ ಅದನ್ನು ಇಸ್ಲಾಂನ ಪ್ರಕಾರ ಮಸೀದಿ ಎನ್ನಲಾಗುವುದಿಲ್ಲ.

೨. ಮಂದಿರದ ಮೇಲೆ ಅಲ್ಲಿಯ ದೇವತೆಗಳ ಅಧಿಕಾರ ಇರುತ್ತದೆ. ಎಷ್ಟೇ ಕಾಲಾವಧಿಯಿಂದ ಈ ರೀತಿಯ ಕಾನೂನುಬಾಹಿರ ನಿಯಂತ್ರಣ ಸಾಧಿಸಿದ್ದರೂ ದೇವತೆಗಳು ಮತ್ತು ಭಕ್ತರು ಎಂದಿಗೂ ನಾಶವಾಗುವುದಿಲ್ಲ. ಯಾವುದೇ ಮಂದಿರದ ಛಾವಣಿ ನಾಶಮಾಡಿ ಅಥವಾ ಗೋಡೆ ನಾಶಪಡಿಸಿ ಅದರ ಸ್ವರೂಪ ಬದಲಾಯಿಸಲು ಸಾಧ್ಯವಿಲ್ಲ.

೩ . ಸಂವಿಧಾನದ ಕಲಂ ೧೩ ಇದು ಹಿಂದೂ, ಜೈ ನ, ಬೌದ್ಧ ಮತ್ತು ಸಿಕ್ಖ್ ಇವರಿಗೆ ತಮ್ಮ ತಮ್ಮ ಧರ್ಮದ ಪ್ರಸಾರ ಮತ್ತು ಧಾರ್ಮಿಕಸ್ಥಳಗಳ ರಕ್ಷಣೆ ಮಾಡುವ ಅಧಿಕಾರ ನೀಡಲಾಗಿದೆ. ಈ ಕಾಲಂನಲ್ಲಿ ಅವರ ಈ ಅಧಿಕಾರ ಕಸಿದುಕೊಳ್ಳಲು ಯಾವುದೇ ಹೊಸ ಕಾನೂನು ಮಾಡುವುದಕ್ಕೆ ನಿರ್ಬಂಧವಿದೆ. ಅದರ ಜೊತೆಗೆ ಇಸ್ಲಾಮಿ ಕಾನೂನಿನ ವಿರುದ್ಧ ಕಟ್ಟಲಾದ ಧಾರ್ಮಿಕಸ್ಥಳಕ್ಕೆ ಮಸೀದಿ ಎನ್ನಲಾಗುವುದಿಲ್ಲ.