ಹಿಂದುತ್ವ, ಧರ್ಮ, ಅಧ್ಯಾತ್ಮ, ಕ್ರಾಂತಿಕಾರಿ ಹಾಗೂ ರಾಷ್ಟ್ರದ ಬಗ್ಗೆ ಪ್ರಖರವಾಗಿ ಬಿರುಗಾಳಿಯಂತೆ ವಿಶ್ಲೇಷಣೆ ಮಾಡುವ ವ್ಯಾಖ್ಯಾನಕಾರ ಡಾ. ಸಚ್ಚಿದಾನಂದ ಸುರೇಶ ಶೇವಡೆ !

ವಿಶೇಷ ಲೇಖನ ಮಾಲೆ

ಡೊಂಬಿವಲಿಯಲ್ಲಿನ ಡಾ. ಸಚ್ಚಿದಾನಂದ ಸುರೇಶ ಶೇವಡೆ ಇವರು ಭಾರತಾಚಾರ್ಯ ಪೂ. (ಪ್ರಾ.) ಸು.ಗ ಶೇವಡೆ (೮೯ ವರ್ಷ) ಇವರ (ಸದ್ಯ ರಾಮನಾಥಿ ಆಶ್ರಮದಲ್ಲಿದ್ದಾರೆ) ಹಿರಿಯ ಸುಪುತ್ರ ಆಗಿದ್ದಾರೆ. ಡಾ. ಸಚ್ಚಿದಾನಂದ ಶೇವಡೆ ಇವರು ರಾಷ್ಟ್ರ, ಧರ್ಮವನ್ನು ಆಧರಿಸಿ ವಿವಿಧ ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ಅವರು ವಿವಿಧ ವಿಷಯಗಳ ಚರ್ಚಾಕೂಟದಲ್ಲಿ ಭಾಗವಹಿಸುತ್ತಾರೆ. ಇಂದು ನಾವು ಅವರ ಕಾರ್ಯದ ಬಗ್ಗೆ, ಅವರು ಬರೆದಿರುವ ಪುಸ್ತಕಗಳ ಬಗ್ಗೆ ಮತ್ತು ಅವರ ಕಾರ್ಯಪ್ರೇರಣೆಯ ವಿಷಯವನ್ನು ತಿಳಿದುಕೊಳ್ಳಲಿಕ್ಕಿದ್ದೇವೆ.

ಡಾ. ಸಚ್ಚಿದಾನಂದ ಶೇವಡೆ

೧. ಶಿಕ್ಷಣ : ಎಮ್‌.ಫಿಲ್, ಪಿ.ಎಚ್‌.ಡಿ.

೨. ಜನ್ಮ : ೯ ನವಂಬರ ೧೯೬೧ (ಬಲಿಪ್ರತಿಪದೆ)

೩. ಆಧ್ಯಾತ್ಮಿಕ ಗುರು : ಬ್ರಹ್ಮೀಭೂತ ಪ.ಪೂ.ಸ್ವಾಮಿ ವರದಾನಂದ ಭಾರತಿ (ಪೂರ್ವಾಶ್ರಮದ ಪ್ರಾ. ಅನಂತ ದಾ. ಆಠವಲೆ)

೪. ವೈಶಿಷ್ಟ್ಯ : ವ್ಯಾಖ್ಯಾತ (ಉಪನ್ಯಾಸಕ), ಪ್ರವಚನಕಾರ, ನಿರೂಪಕ ಮತ್ತು ಸಾಹಿತಿಯಂತಹ ಅಪರೂಪದ ಸಂಗಮ.

೫. ಇಂದಿನವರೆಗೆ ನೀಡಿರುವ ವ್ಯಾಖ್ಯಾನಗಳು : ರಾಮಾಯಣ, ಭಾಗವತ ಕಥಾ, ಭಗವಾನ ಶ್ರೀಕೃಷ್ಣ, ಮನೋಭೋಧನೆ, ಸ್ವಾಮಿ ವಿವೇಕಾನಂದ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ಪ್ರವಚನ ಹಾಗೂ ಕ್ರಾಂತಿಕಾರಿ, ಶಿವರಾಯರ ಯುದ್ಧನೀತಿ, ಪಾನಿಪತದ ರಣಸಂಗ್ರಾಮ, ಕಾಶ್ಮೀರನಾಮಾ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ವ್ಯಾಖ್ಯಾನ ನೀಡಿದ್ದಾರೆ.

ಈ ವಿಷಯಗಳನ್ನು ಮಂಡಿಸುವಾಗ ಚಿತ್ರವಿಚಿತ್ರ ಶೈಲಿಯಲ್ಲಿ ಮಂಡಿಸಿರುವುದರಿಂದ ಶ್ರೋತೃರ ಮುಂದೆ ಯತಾವತ್ತಾಗಿ ಚರಿತ್ರೆ ನಿರ್ಮಾಣ ಮಾಡುವುದರಲ್ಲಿ ಯಶಸ್ವಿಯಾದರು.


ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

ವ್ಯಾಖ್ಯಾನ ಅಥವಾ ಪ್ರವಚನ ಮಾಡುವಾಗ ಆಗುವ ಸ್ಥಿತಿ

ವ್ಯಾಖ್ಯಾನವೆಂದರೆ ಒಂದು ಪ್ರಖರವಾದ ಬಿರುಗಾಳಿಯೆ ! ಕಥೆಗಳ ರೂಪದಲ್ಲಿ ವಿಷಯವನ್ನು ತೆರೆದಿಡುತ್ತಾ ಮೂಲ ತಿರುಳನ್ನು ವಿವರಿಸುವ ವಿಚಿತ್ರ ಕೌಶಲ್ಯ… ಸ್ಪಷ್ಟ ಶಬ್ದೋಚ್ಚಾರದಿಂದ, ಮಾತನಾಡುವ ವಿಶಿಷ್ಟ ಪದ್ಧತಿಯಿಂದ ಹಾಗೂ ವಿಚಾರಗಳನ್ನು ದೃಢತೆಯಿಂದ ಮಂಡಿಸುತ್ತಾ ವ್ಯಾಖ್ಯಾನವನ್ನು ಉಚ್ಚಮಟ್ಟಕ್ಕೊಯ್ಯುವ ಕೌಶಲ್ಯ. ಆದ್ದರಿಂದ ಸಾವಿರಾರು ಶ್ರೋತೃರು ಕುರ್ಚಿಗೆ ಅಂಟಿಕೊಂಡಿರುತ್ತಾರೆ ಹಾಗೂ ವಿಷಯದಲ್ಲಿ ಮುಳುಗಿಹೋಗುತ್ತಾರೆ. ಶಬ್ದಗಳ ಸುರಿಮಳೆಯಲ್ಲಿ ಮಿಂದು ಹೊರಬರುತ್ತಾರೆ.

ಪ್ರವಚನ ಮಾಡುವಾಗ ಮಾತ್ರ ಅತ್ಯಂತ ಶಾಂತಿಯಿಂದ ಸಂತಸಾಹಿತ್ಯದ ಸಾರಾಂಶವನ್ನು ಸ್ಪಷ್ಟೀಕರಿಸುವಾಗ ಸಂತರ ಚರಿತ್ರೆಯ, ವಚನಗಳ ಅಥವಾ ಕಲಿಕೆಯ ನಿರೂಪಣೆಯು ಅತ್ಯಂತ ಸುಮಧುರ ವಾಣಿಯಿಂದಾಗುತ್ತದೆ. ಯಾವುದೇ ವಿಷಯದಲ್ಲಿ ಆಳವಾದ ಅಭ್ಯಾಸವಾಗಬೇಕಾದರೆ ಅದರಲ್ಲಿನ ಅನೇಕ ಗ್ರಂಥಗಳನ್ನು ಸಂಪೂರ್ಣ ಓದಬೇಕಾಗುತ್ತದೆ. ನಿರೀಕ್ಷಣೆ-ಪರೀಕ್ಷಣೆ ಮಾಡಿ ಅದನ್ನು ಸೂಕ್ಷ್ಮವಾಗಿ ವೈಚಾರಿಕೀಕರಣ ಮಾಡಲಾಗುತ್ತದೆ, ಆವಾಗ ಅದರ ಮೇಲೆ ಹಿಡಿತ ಬರುತ್ತದೆ ಹಾಗೂ ಅದಕ್ಕೆ ವಕ್ತೃತ್ವದ ಜೋಡಣೆಯಾದರೆ, ವ್ಯಾಖ್ಯಾನ, ಪ್ರವಚನ ಆನಂದದಾಯಕವಾಗುತ್ತದೆ. ಅನೇಕ ಸಂಗೀತ ಕಾರ್ಯಕ್ರಮದಲ್ಲಿ ಆನಂದದಾಯಕ ಹಾಗೂ ಅರ್ಥಪೂರ್ಣ ನಿರೂಪಣೆ.

ವ್ಯಾಖ್ಯಾನಗಳನ್ನು ನೀಡುವ ಅಪೂರ್ವ ಕೌಶಲ್ಯ

ಎಡದಿಂದ ಡಾ. ಸಚ್ಚಿದಾನಂದ ಶೇವಡೆ ಹಾಗೂ ವ್ಯಾಖ್ಯಾನ ನೀಡುತ್ತಿರುವವರು ಅವರ ಸುಪುತ್ರ ವೈದ್ಯ ಪರೀಕ್ಷಿತ ಶೇವಡೆ

ಕಳೆದ ೩೮ ವರ್ಷಗಳಿಂದ ಇಂದಿನ ವರೆಗೆ ಭಾರತ ಹಾಗೂ ವಿದೇಶಗಳಲ್ಲಿ ಒಟ್ಟು ೫ ಸಾವಿರಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳನ್ನು ನೇವೇರಿಸಲಾಗಿದೆ. ಮತ್ತು ೫೦ ಪುಸ್ತಕಗಳು ಪ್ರಕಾಶನವಾಗಿವೆ. ಹಡಗು, ವಿಮಾನ ಹಾಗೂ ಬಸ್‌ಗಳಲ್ಲಿ ವ್ಯಾಖ್ಯಾನ ನೀಡುವಂತಹ ಅಪೂರ್ವ ಕಾರ್ಯಗಳು ನಡೆದಿವೆ. ಸೆಲ್ಯುಲರ್‌ ಸೆರೆಮನೆಯಲ್ಲಿ ವ್ಯಾಖ್ಯಾನ ನೀಡುವ ಮೊದಲ ವಕ್ತಾರ…ಕಳೆದ ೧೨ ವರ್ಷಗಳಿಂದ ನಿರಂತರ ಅಲ್ಲಿ ‘ಸಾವರ್ಕರ್‌ ಸ್ಮೃತಿದಿನ’ದಂದು ವ್ಯಾಖ್ಯಾನ ನೀಡಿದರು. ಸ್ವಿಝರ್ಲೇಂಡ್‌ನ ಮೌಂಟ್‌ ಟೀಟಲೀಸ್‌ ಈ ಯುರೋಪ್‌ನಲ್ಲಿನ ಸರ್ವೋಚ್ಚ ಶಿಖರದಲ್ಲಿ ಹಿಮದ ಮೇಲೆ ನಿಂತು ಶ್ರೋತೃರಿಗೆ ‘ಶಿವರಾಯ’ರ ಬಗ್ಗೆ ವಿವರಿಸಿದರು. ಇಟೇಲಿಯಲ್ಲಿನ ವ್ಹೆನೀಸ್‌ ಈ ತೇಲಾಡುವ ನಗರದಲ್ಲಿನ ಸೈಂಟ್‌ ಮಾರ್ಕ್ ಸ್ವ್ಕೆಯರ್‌ನಿಂದ ‘ಸ್ವಾಮಿ ವಿವೇಕಾನಂದ’ರ ಬಗ್ಗೆ ಹೇಳಿದರು. ದುಬಯಿ, ಲಂಡನ್, ಮೊರೀಶಸ್, ಸಿಡ್ಣೀ, ಮೆಲ್ಬರ್ನ್‌, ಕೊಲಂಬೊ, ನುವಾರಾ ಎಲಿಯಾ ಇತ್ಯಾದಿ ಸ್ಥಳಗಳಲ್ಲಿ ಕಾರ್ಯಕ್ರಮ ನೆರವೇರಿತು.

‘ಎಬಿಪಿ ಮಾಝಾ’, ‘ಜಯಮಹಾರಾಷ್ಟ್ರ’, ‘ಮೀ ಮರಾಠಿ’, ‘ಝೀ ೨೪ ತಾಸ್‌’, ಸಾಮ’, ‘ಸುದರ್ಶನ’ ಮುಂತಾದ ವಾರ್ತಾವಾಹಿನಿಗಳಲ್ಲಿ ವಿವಿಧ ವಿಷಯಗಳ ಚರ್ಚೆಯಲ್ಲಿ ನಿಯಮಿತವಾಗಿ ಭಾಗವಹಿಸಿದರು.

ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲಿ ಮಾಡಿದ ಲೇಖನಗಳು

ಅ. ಮಹಾನಾಟ್ಯ : ಕ್ರಾಂತಿಚಕ್ರ (ಹಿಂದಿ)

ಆ. ನಾಟಕ : ಚಾಣಕ್ಯ-ಚಂದ್ರಗುಪ್ತ (ಸಹಲೇಖಕ : ಜನಾರ್ದನ ಓಕ್)

ಇ. ಕಾದಂಬರಿ : ರಕ್ತಲಾಂಚ್ಛನ, ಅಘೋರವಾಡಾ

ಈ. ಲಲಿತ ಚರಿತ್ರೆ : ಪುನರುತ್ಥಾನ (ಆದ್ಯಶಂಕರಾಚಾರ್ಯ), ನರೇಂದ್ರ ತೆ ವಿವೇಕಾನಂದ, ವಾಸುದೇವ ಬಳವಂತ, ಚಾಪೆಕರ ಪರ್ವ, ಕ್ರಾಂತಿಕಾರಕ ರಾಜಗುರು (ಮರಾಠಿ ಹಾಗೂ ಹಿಂದಿ), ಜ್ಞಾನೇಶ್ವರ ಕನ್ಯಾ ಗುಲಾಬರಾವ ಮಹಾರಾಜ, ಭಗವಾನ ಪರಶುರಾಮ

ಉ. ಬಾಲಸಾಹಿತ್ಯ : ಗುರು ಆಣಿ ಶಿಷ್ಯ (ಭಾಗ ೧ ಆಣಿ ೨)

ಊ. ಕುಮಾರ ಸಾಹಿತ್ಯ : ಕಥಾಬೋಧ, ಕಥಾಕುಸುಮ, ವಾಸುದೇವ ಬಳವಂತ ಫಡ್ಕೆ, ಖುದಿರಾಮ ಬೋಸ್, ಮದನಲಾಲ ಧಿಂಗ್ರಾ, ಸರದಾರ ಉಧಮಸಿಂಗ್, ಭಗತಸಿಂಗ್, ಯಶಾಚಿ ಗುರುಕಿಲ್ಲಿ

ಎ. ಐತಿಹಾಸಿಕ : ಕಾಶ್ಮೀರನಾಮಾ, ವಂದ್ಯ ವಂದೇಮಾತರಮ್‌,…ಆಣಿ ಸಾವರ್ಕರ್, ಶೋಧ ಶ್ರೀಲಂಕೇಚಾ

ಏ. : ಸಂಕೀರ್ಣ : ಮುಕ್ತವೇಧ, ನಿವಡಕ ಮುಕ್ತವೇಧ, ವಾಚಾ ಆಣಿ ಗಪ್ಪ ಬಸಾ, ರಾಷ್ಟ್ರಜಾಗರ, ಆತಾ ತರೀ ಜಾಗೇ ವ್ಹಾ, ಡೋಳೆ ಉಘಡಾ, ಅವಘೆ ಧರೂ ಸುಪಂಥ, ಪ್ರಹಾರ, ಮುಕ್ತವೇಧ, ಸೆಕ್ಯುಲರ್ಸ್ ನವ್ಹೆ ಫೆಕ್ಯುಲರ್ಸ್‌, ಸತ್ಯ ಸಾಂಗಾ ನಾ ..! ವಾಟಾ ಆಪ್ಲ್ಯಾ ಸಂಸ್ಕೃತೀಚ್ಯಾ.

ಓ. ಧಾರ್ಮಿಕ : ಶ್ರೀ ಚಿಂತಾಮಣಿ ವಿಜಯ ಕಥಾಕಾರ, ಬಾಪ್ಪಾ ಮೋರಯಾ, ಮನಾಚಿಯೆ ದ್ವಾರೀ

ಔ. ಭಾವಾನುವಾದ : ಅದ್ಭುತ ಶಕ್ತೀಚಾ ಖಜಾನಾ, ಭಾರತೀಯ ಯಾತ್ರಿ, ಮಿಶನ್‌ ವೈಷ್ಣೋದೇವಿ, ಇಸ್ಲಾಮೀ ಆಘಾತಾವರ ಹಿಂದೂಂಚಾ ಪ್ರತ್ಯಾಘಾತ, ಡಾವೀ ವಿಷವಲ್ಲೀ,

ಅಂ. ಸಹಲೇಖನ : ಶ್ರೀ. ದುರ್ಗೇಶ ಪರೂಳಕರ್‌ ಇವರೊಂದಿಗೆ ‘ಶಿವರಾಯಾಂಚೀ ಯುದ್ಧನೀತಿ’, ‘ಪಾನಿಪತಚಾ ರಣಸಂಗ್ರಾಮ’, ‘ಗೋವಾ ಮುಕ್ತಿಸಂಗ್ರಾಮ’, ‘ಸಾವರ್ಕರ-ಜ್ಞಾತ ಆಣಿ ಅಜ್ಞಾತ’; ವೈದ್ಯ ಪರೀಕ್ಷಿತ ಶೇವಡೆ ಇವರೊಂದಿಗೆ ‘ಜಮಾತ ಎ ಪುರೋಗಾಮಿ’, ‘ರಾಮಮಂದಿರಚ್‌ ಕಾ ?’. ಪಾಕಿಸ್ತಾನ-ವಿನಾಶಾಕಡೂನ ವಿನಾಶಾಕಡೆ’, ಭಾರತಾಚಾರ್ಯ ಪೂ. (ಪ್ರಾ.) ಸು.ಗ.ಶೇವಡೆ ಇವರೊಂದಿಗೆ ‘ಮಹಾಭಾರತ-ವ್ಯಾಸಾಂಚೆ ವ ಚೋಪ್ರಾಂಚೆ’ ಈ ಪುಸ್ತಕಗಳ ಲೇಖನ ಮಾಡಿದರು.

ಕ. ಧ್ವನಿಚಿತ್ರಸುರುಳಿ (ಸೀಡಿ) : ಸಮರಗಾಥಾ, ವಿಜಯಗಾಥಾ

ಡಾ. ಶೇವಡೆ ಇವರಿಗೆ ಲಭಿಸಿದ ಪುರಸ್ಕಾರಗಳು

‘ಸೆಲ್ಯುಲರ್‌ ಸೆರೆಮನೆ’ಯ ಆಟದ ಬಯಲಲ್ಲಿ ವ್ಯಾಖ್ಯಾನ ನೀಡುತ್ತಿರುವ ಡಾ. ಸಚ್ಚಿದಾನಂದ ಶೇವಡೆ

ಅ. ‘ವಂದ್ಯ ವಂದೇಮಾತರಮ್’ ಈ ಪುಸ್ತಕಕ್ಕೆ ಮಹಾರಾಷ್ಟ್ರ ಸಾಹಿತ್ಯ ಪರಿಷತ್ತಿನ ಇತಿಹಾಸಕ್ಕೆ ಸಂಬಂಧಿಸಿದ ಗ್ರಂಥಲೇಖನದ ಪುರಸ್ಕಾರ

ಆ. ‘ಕ್ರಾಂತಿಕಾರಕ ರಾಜಗುರು’ ಈ ಪುಸ್ತಕಕ್ಕೆ ವಂದನಾ ಪ್ರಕಾಶನದ ಚರಿತ್ರ ಗ್ರಂಥದ ಪುರಸ್ಕಾರ

ಇ. ‘ಸೆಕ್ಯುಲರ್ಸ್ ನವ್ಹೆ ಫೆಕ್ಯುಲರ್ಸ್‌’, ಈ ಪುಸ್ತಕಕ್ಕೆ ಉತ್ಕೃಷ್ಟ ಸ್ತಂಭಲೇಖನದ ‘ಮ.ಸಾ.ಪ.’ದ ಪುರಸ್ಕಾರ

ಈ. ಪು.ಭಾ. ಭಾವೆ ಸ್ಮೃತಿ ಸಮಿತಿಯ ವತಿಯಿಂದ ಕೊಡಲ್ಪಡುವ ‘ಪು.ಭಾ.ಭಾವೆ ವಕ್ತೃತ್ವ ಪುರಸ್ಕಾರ’ದಿಂದ ಸನ್ಮಾನ, ‘ರತ್ನಗಿರಿ ಕೀರ್ತನ ಕುಲಾ’ದಿಂದ ಸನ್ಮಾನಪತ್ರ ಅರ್ಪಣೆ, ‘ಕಲ್ಯಾಣ-ಡೊಂಬಿವಲಿ ಮಹಾಪೌರ ಪುರಸ್ಕಾರ’ ಪ್ರಾಪ್ತಿ, ‘ಲೋಕಮತ’ ಸಮೂಹ ೨೦೧೩ ರಲ್ಲಿ ‘ಆಯಕಾನ್‌ ಆಫ್‌ ಠಾಣೆ’ ಎಂದು ಸನ್ಮಾನಿಸಲಾಯಿತು. ‘ಉತ್ತುಂಗ ಪರಿವಾರ, ವಿಲೆಪಾರ್ಲೆ ಇವರ ವತಿಯಿಂದ ‘ಸ್ವಾ. ಸಾವರ್ಕರ್‌ ರಾಷ್ಟ್ರವಿಚಾರ ಪ್ರಸಾರಕ ಪುರಸ್ಕಾರ ಪ್ರಾಪ್ತಿ; ಜುಲೈ ೨೦೧೬ ರಲ್ಲಿ ‘ವ್ಯಾಸ ಕ್ರಿಯೇಶನ್ಸ್‌, ಠಾಣೆ’ಇವರಿಂದ ವ್ಯಾಸರತ್ನ ಪುರಸ್ಕಾರ’ದಿಂದ ಸನ್ಮಾನ; ನವಂಬರ ೨೦೧೬ ರಲ್ಲಿ ‘ಮುಂಬಯಿಸಾಹಿತ್ಯ ಸಂಘ’ದ ವತಿಯಿಂದ ‘ಸಂತರ ಹಾಗೂ ಆಧ್ಯಾತ್ಮಿಕ ಲೇಖನಕ್ಕಾಗಿ ಪುರಸ್ಕಾರದಿಂದ ಸನ್ಮಾನ, ೨೦೧೮ ರಲ್ಲಿ ‘ಟಿಳಕನಗರ ಶಿಕ್ಷಣ ಸಂಸ್ಥೆ, ಡೊಂಬಿವಲಿ’ಯ ವತಿಯಿಂದ ‘ಸಾವರ್ಕರ್‌ ಪುರಸ್ಕಾರ’ದಿಂದ ಸನ್ಮಾನ; ೨೦೧೯ ರಲ್ಲಿ ಶ್ರದ್ಧೇಯ ‘ಅಶೋಕಜೀ ಸಿಂಘಲ್‌ ಸ್ಮೃತಿ ರಾಷ್ಟ್ರೀಯ ಪುರಸ್ಕಾರ’ ಪ್ರಾಪ್ತಿ; ‘ಆಮ್ಹೀ ಸಾರೆ ಬ್ರಾಹ್ಮಣ’ ಪಾಕ್ಷಿಕದ ವತಿಯಿಂದ ‘ಬ್ರಾಹ್ಮಣಭೂಷಣ’ ಪುರಸ್ಕಾರ.

ಕೆಲವು ಪುಸ್ತಕಗಳ ವೈಶಿಷ್ಟ್ಯಪೂರ್ಣ ಪ್ರಕಾಶನ

ಅ. ‘..ಆಣಿ ಸಾವರ್ಕರ್‌ ಆಣಿ ಪ್ರಹಾರ’ ಈ ಪುಸ್ತಕದ ಪ್ರಕಾಶನ ಅಂಡಮಾನದಲ್ಲಿನ ‘ಸೆಲ್ಯುಲರ್‌ ಸೆರೆಮನೆ’ಯಲ್ಲಿ ಮಾಡಿದರು.

ಆ. ‘ವಾಚಾ ಆಣಿ ಗಪ್ಪ ಬಸಾ’ ಇದರ ಪ್ರಕಾಶನ ‘ಮೋರಿಶಸ್‌’, ಮತ್ತು ‘ಸಾವರ್ಕರ್‌-ಜ್ಞಾತ ವ ಅಜ್ಞಾತ’ದ ಪ್ರಕಾಶನ ಲಂಡನ್‌ನಲ್ಲಿನ ‘ತೃತೀಯ ಸಾವರ್ಕರ್‌ ವಿಶ್ವ ಸಮ್ಮೇಳನ’ದಲ್ಲಿ ಮಾಡಿದರು. ‘ಸತ್ಯ ಸಾಂಗಾ ನಾ…!’ದ ಪ್ರಕಾಶನ ಸಿಡ್ಣಿಯಲ್ಲಿ ‘ಚತುರ್ಥ ಸಾವರ್ಕರ್‌ ವಿಶ್ವ ಸಮ್ಮೇಳನ’ದಲ್ಲಿ ಮಾಡಿದರು.


ಹಿಂದೂ ವಿರೋಧಿ ವಾತಾವರಣದಲ್ಲಿಯೂ ಸಮಾಜಜಾಗೃತಿ ಮಾಡಲು ಸಿಕ್ಕಿದ ಸ್ಫೂರ್ತಿ ಭಾರತಾಚಾರ್ಯ ಪೂ. ಪ್ರಾ. ಸು.ಗ.ಶೇವಡೆ

ಭಾರತಾಚಾರ್ಯ ಪೂ. ಪ್ರಾ. ಸು.ಗ.ಶೇವಡೆ


೧. ಲೇಖನ ಮತ್ತು ವ್ಯಾಖ್ಯಾನಗಳ ಕ್ಷೇತ್ರಕ್ಕೆ ತಿರುಗುವುದರ ಹಿಂದಿನ ಪ್ರೇರಣೆ

ನನ್ನ ತಂದೆ ಪೂ. ಭಾಗವತಾಚಾರ್ಯ ಸುರೇಶ ಶೇವಡೆ ಇವರು ಇದೇ ಕ್ಷೇತ್ರದಲ್ಲಿದ್ದಾರೆ. ಆದ್ದರಿಂದ ನಾನು ಚಿಕ್ಕಂದಿನಿಂದಲೂ ಅವರ ಕಾರ್ಯಕ್ರಮಗಳನ್ನು ಕೇಳುತ್ತಿದ್ದೆನು. ನಮ್ಮ ಮನೆಯಲ್ಲಿ ಧಾರ್ಮಿಕ, ಆಧ್ಯಾತ್ಮಿಕ ವಿಷಯದ ಸಾವಿರಾರು ಪುಸ್ತಕಗಳಿದ್ದುವು. ಆದ್ದರಿಂದ ಅವುಗಳ ಅಭ್ಯಾಸದ ಜೊತೆಗೆ ನಿರಂತರ ವಾಚನವೂ ದೊಡ್ಡ ಪ್ರಮಾಣದಲ್ಲಾಯಿತು ಹಾಗೂ ವಿಚಾರಗಳ ಅಡಿಪಾಯ ಸುದೃಢವಾಯಿತು. ಮಹಾವಿದ್ಯಾಲಯದ ಕಾಲದಲ್ಲಿ ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಪುಸ್ತಕಗಳನ್ನು ಓದಿದೆನು. ಅದರಿಂದ ನನಗೆ ನನ್ನ ಅಭಿಪ್ರಾಯವನ್ನು ದೃಢವಾಗಿ ಮಂಡಿಸುವ ಸಂಸ್ಕಾರವಾಯಿತು.

೪೪ ವರ್ಷಗಳ ಹಿಂದೆ ಕ್ರಾಂತಿಕಾರರ ವಿಷಯದಲ್ಲಿ ಮಾತನಾಡುವುದು ಮಹಾಪರಾಧವೆನಿಸುತ್ತಿತ್ತು. ಸ್ವಾತಂತ್ರ್ಯವೀರ ಸಾವರ್ಕರರ ವಿಷಯದಲ್ಲಿ ಮಾತನಾಡುವುದಂತೂ ದೂರದ ಮಾತು, ಅವರ ವಿಷಯವನ್ನು ಕೇಳುವವರಿಗೂ ಭಯವಾಗುತ್ತಿತ್ತು, ಆ ಸಮಯದಲ್ಲಿ ಸಮಾಜದಲ್ಲಿ ಅಷ್ಟು ಭಯವಿತ್ತು. ಸ್ವಾತಂತ್ರ್ಯವೀರ ಸಾವರ್ಕರರ ವಿಷಯದಲ್ಲಿ ಮಾತನಾಡಿದರೆ ಸರಕಾರ ನನ್ನನ್ನು ಸೆರೆಮನೆಗೆ ತಳ್ಳುವುದು’, ಎಂದು ಕೆಲವರು ನನಗೆ ಹೇಳುತ್ತಿದ್ದರು. ಪ್ರಜಾಪ್ರಭುತ್ವವಿದ್ದ ಕಾರಣ ಎಲ್ಲರಿಗೂ ಆಚಾರ-ವಿಚಾರ ಸ್ವಾತಂತ್ರ್ಯವಿತ್ತು. ಆದ್ದರಿಂದ ನಾನು ಇದರ ಬಗ್ಗೆ ತಲೆಕಡಿಸಿಕೊಳ್ಳಲಿಲ್ಲ. ಆದರೆ ಕಾಂಗ್ರೆಸ್‌ ಜನರ ಮನಸ್ಸಿನಲ್ಲಿ ಒಂದು ರೀತಿಯ ಭಯ ನಿರ್ಮಾಣ ಮಾಡಿತ್ತು. ಭಾರತಕ್ಕೆ ಕೇವಲ ಕಾಂಗ್ರೆಸ್ಸಿನಿಂದಲೆ ಸ್ವಾತಂತ್ರ್ಯ ಸಿಕ್ಕಿತು, ಎಂದು ಶಾಲೆಯಲ್ಲಿ ಕಲಿಸಲಾಗುತ್ತಿತ್ತು. ಆ ಶಾಲೆಯ ಜೀವನದಲ್ಲಿ ನಾನು ಕ್ರಾಂತಿಕಾರಿಗಳ ಚರಿತ್ರೆಯನ್ನು ಓದಿದೆ. ಆಗ ಈ ವಿಷಯ ಜನರಿಗೆ ತಲಪಬೇಕೆಂದು ನನಗನಿಸಿತು. ಈ ವಿಚಾರದಿಂದ ನಾನು ಸಮಾಜ ಪ್ರಬೋಧನೆಯ ವ್ರತವನ್ನು ಆರಂಭಿಸಿದೆನು. ಅದು ಇಂದಿನವರೆಗೂ ಮುಂದುವರಿದಿದೆ.

೨. ಪ್ರವಾಹದ ವಿರುದ್ಧ ಹೋಗಿ ಸಮಾಜಪ್ರಬೋಧನೆ ಮಾಡುವುದು

೪೦-೫೦ ವರ್ಷಗಳ ಹಿಂದೆ ಇಂದಿನ ಹಾಗೆ ಸಾಮಾಜಿಕ ಮಾಧ್ಯಮಗಳಿರಲಿಲ್ಲ. ಆಗ ವರ್ತಮಾನಪತ್ರಿಕೆಗಳು ಮತ್ತು ಮಾಸಿಕಗಳಿದ್ದುವು. ಅವುಗಳಲ್ಲಿ ನಿರ್ಧಿಷ್ಟ ಜನರಿಗೆ ಮಾತ್ರ ಪ್ರಸಿದ್ಧಿ ನೀಡಲಾಗುತ್ತಿತ್ತು. ಯಾರು ನಿರಂತರ ಬರೆಯುತ್ತಾರೊ, ಅವರ ಪ್ರತಿಷ್ಠೆಯೆ ಹೆಚ್ಚುತ್ತಾ ಹೋಯಿತು. ಈ ದೊಡ್ಡ ಜನರನ್ನು ಸಮಾಜ ಬುದ್ಧಿವಂತರೆಂದು ತಿಳಿಯುತ್ತಿತ್ತು. ಅಂದಿನ ಸರಕಾರ ಅವರಿಗೆ ಪ್ರಸಾದದಂತೆ ವಿವಿಧ ಪುರಸ್ಕಾರಗಳನ್ನು ನೀಡಿ ಅವರನ್ನು ವೈಭವೀಕರಿಸಿತು. ದೇವಿದೇವತೆಗಳನ್ನು ಅವಮಾನಗೊಳಿಸುವ ವ್ಯಕ್ತಿಗಳನ್ನು ದೊಡ್ಡವರೆಂದು ತಿಳಿಯಲಾಗುತ್ತಿತ್ತು. ಆ ಕಾಲದಲ್ಲಿ ಪ್ರವಾಹದ ವಿರುದ್ಧ ಹೋಗಿ ನಾನು ಸಮಾಜಪ್ರಬೋಧನೆ ಮಾಡಿದೆನು.
– ಡಾ. ಸಚ್ಚಿದಾನಂದ ಶೇವಡೆ

ಹಿಂದುತ್ವದ ಕಾರ್ಯವನ್ನು ಹೆಚ್ಚಿಸಲು ಮಾಡಬೇಕಾದ ಪ್ರಯತ್ನ

ಸದ್ಯ ‘ರಾಜಕೀಯ ಹಿಂದುತ್ವ’ ಎನ್ನುವವರು ಹೆಚ್ಚುತ್ತಿದ್ದಾರೆ. ಅಧಿಕಾರದಲ್ಲಿನ ಹಿಂದುತ್ವದ ಪ್ರಮಾಣ ಹೆಚ್ಚಾಗುತ್ತಿದೆ. ಆದ್ದರಿಂದ ನವಹಿಂದುತ್ವವಾದಿಗಳು ಅಲ್ಲಲ್ಲಿ ಒಗ್ಗಟ್ಟಾಗುತ್ತಿದ್ದಾರೆ. ಅವರಿಗೂ ಹಿಂದುತ್ವಕ್ಕೂ ಏನೂ ಸಂಬಂಧವಿಲ್ಲ. ನಾವು ಹಿಂದುತ್ವವಾದಿಗಳಾಗುತ್ತಿದ್ದೇವೆ ಎಂದರೇನು ? ಇಂದು ಕೂಡ ಜಾತಿ ಭೇದಕ್ಕನುಸಾರ ಜನರನ್ನು ಗುರುತಿಸಲಾಗುತ್ತಿದೆ ಹಾಗೂ ಅವರ ವಿಷಯದಲ್ಲಿ ಪೂರ್ವಗ್ರಹ ಇಡಲಾಗುತ್ತದೆ. ಇದಕ್ಕೆ ‘ಹಿಂದುತ್ವವಾದ’ವೆಂದು ಹೇಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದಿನ ದೊಡ್ಡ ಹಿಂದುತ್ವನಿಷ್ಠ ಸಂಘಟನೆಗಳು ಸಮಾಜದಲ್ಲಿ ಅಭ್ಯಾಸವರ್ಗಗಳನ್ನು ಆರಂಭಿಸಬೇಕು. ಅದರಿಂದ ಕಾರ್ಯಕರ್ತರು ನಿರ್ಮಾಣವಾಗುವರು ಹಾಗೂ ಅವರು ಸಮಾಜದಲ್ಲಿ ಹೋಗಿ ಜನಜಾಗೃತಿ ಮಾಡುವರು. ಈ ಅಭ್ಯಾಸವರ್ಗ ‘ಆನ್‌ಲೈನ್’ ತೆಗೆದುಕೊಳ್ಳಬಹುದು ಅಥವಾ ಸಣ್ಣ ಸಣ್ಣ ‘ರೀಲ್ಸ್‌’ (ಸಣ್ಣ ಸಣ್ಣ ಧ್ವನಿಚಿತ್ರಸುರುಳಿ) ಮಾಡಿ ಅವುಗಳನ್ನು ಸಮಾಜಮಾಧ್ಯಗಳಲ್ಲಿ ಪ್ರಸಾರ ಮಾಡಬಹುದು.

– ಡಾ. ಸಚ್ಚಿದಾನಂದ ಶೇವಡೆ