ಡೆಹರಾಡೂನ್‌ನಲ್ಲಿನ ಡಾ. ಕುಲದೀಪ ದತ್ತಾ (ವಯಸ್ಸು ೭೫ ವರ್ಷ) ಇವರು ಸುಪ್ರಸಿದ್ಧ ಹೃದಯರೋಗತಜ್ಞರಾಗಿದ್ದಾರೆ. ಅವರು ೧೯೭೬ ರಿಂದ ೧೯೯೮ ಈ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ ‘ವೈದ್ಯಕೀಯ ಸಂಚಾಲಕ’ ರೆಂದು ಸರಕಾರಿ ನೌಕರಿ ಮಾಡಿದರು. ಅನಂತರ ಸ್ವೇಚ್ಛಾ ನಿವೃತ್ತಿ ತೆಗೆದುಕೊಂಡು ಅವರು ಇಂದ್ರೇಶ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆರ್. ಈ. ಸ್ಟೋನ್ ಇವರ ಜೊತೆಗೆ ಕೆಲಸ ಮಾಡಿದರು. ಅವರು ‘ಶಾಶ್ವತ ಭಾರತ ಟ್ರಸ್ಟ್’ನ ಅಧ್ಯಕ್ಷರಾಗಿದ್ದಾರೆ.
೧. ‘ಶಾಶ್ವತ ಭಾರತ ಟ್ರಸ್ಟ್’ನ ಉದ್ದೇಶ
‘ಶಾಶ್ವತ ಭಾರತ ಟ್ರಸ್ಟ್’ನ ಮೂಲಕ ಸನಾತನ ಸಂಸ್ಕೃತಿಯನ್ನು ಸಕ್ಷಮಗೊಳಿಸುವ ಪ್ರಯತ್ನ ನಡೆಯುತ್ತಿದೆ. ‘ಶಾಶ್ವತ ಭಾರತ ಟ್ರಸ್ಟ್’ನ ವತಿಯಿಂದ ಹಿಂದೂಗಳ ಧಾರ್ಮಿಕ ಪರಂಪರೆ ಹಾಗೂ ಧಾರ್ಮಿಕ ಜೀವನಶೈಲಿಯ ವಿಷಯದಲ್ಲಿ ಮಾರ್ಗದರ್ಶನ ಮಾಡಲಾಗುತ್ತದೆ. ಕಳೆದ ಶತಮಾನದಲ್ಲಿ ಶಾಶ್ವತ ಸನಾತನ ಸಂಸ್ಕೃತಿಯನ್ನು ಧ್ವಂಸ ಮಾಡಲಾಯಿತು. ಆನೇಕ ಆಕ್ರಮಣಗಳಾದರೂ ಸನಾತನ ಧರ್ಮದ ಈ ವಿಶಾಲ ವಟವೃಕ್ಷವು ಎಲ್ಲರಿಗೂ ಅನಾದಿ ಕಾಲದಿಂದ ಆಶ್ರಯ ನೀಡಿದೆ. ‘ಶಾಶ್ವತ ಭಾರತ ಟ್ರಸ್ಟ್’ನ ಮೂಲಕ ಎಲ್ಲ ಆವಶ್ಯಕ ಸಾಧನಗಳನ್ನು ಉಪಯೋಗಿಸಿ ಈ ದಿವ್ಯ ವೃಕ್ಷವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನ ನಡೆಯುತ್ತಿದೆ.
ವಿಶೇಷ ಸರಣಿ
ಛತ್ರಪತಿ ಶಿವಾಜಿ ಮಹಾರಾಜರು ಸ್ಥಾಪಿಸಿದ ಹಿಂದವಿ ಸ್ವರಾಜ್ಯಕ್ಕಾಗಿ ಸೈನಿಕರು ಮತ್ತು ಅಶ್ವಾರೂಢ ಸೈನಿಕರು ಮಾಡಿದ ತ್ಯಾಗ ಎಷ್ಟು ಶ್ರೇಷ್ಠವೋ, ಅದೇ ರೀತಿ ಇಂದಿಗೂ ಅನೇಕ ಹಿಂದುತ್ವನಿಷ್ಠ ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಹಿಂದೂ ಧರ್ಮ ಮತ್ತು ರಾಷ್ಟ್ರಗಳ ರಕ್ಷಣೆಗಾಗಿ ‘ಅಶ್ವಾರೂಢ ಸೈನಿಕ’ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾತ್ಯತೀತ ಸರಕಾರ, ಆಡಳಿತ ಮತ್ತು ಪೊಲೀಸರಿಂದ ಎದುರಾಗುವ ತೊಂದರೆಗಳನ್ನು ಸಹಿಸಿಕೊಂಡು ನಿಸ್ವಾರ್ಥ ಭಾವದಿಂದ ಅವರು ಕೇವಲ ರಾಷ್ಟ್ರ-ಧರ್ಮ ರಕ್ಷಣೆಗಾಗಿ ಹಗಲಿರುಳು ಹೋರಾಡುತ್ತಿದ್ದಾರೆ.
೨. ‘ಶಾಶ್ವತ ಭಾರತ ಸಂವಾದ’ ಪರಿಷತ್ತಿನ ಆಯೋಜನೆ
‘ಶಾಶ್ವತ ಭಾರತ’ದ ವತಿಯಿಂದ ಇಷ್ಟರವರೆಗೆ ೨ ಪರಿಷತ್ತುಗಳನ್ನು ಆಯೋಜಿಸಲಾಗಿದೆ. ‘ಶಾಶ್ವತ ಭಾರತ ಸಂವಾದ’ ಇದು ಒಂದು ದಿನದ ಉಪಕ್ರಮವಾಗಿರುತ್ತದೆ. ಈ ‘ಶಾಶ್ವತ ಭಾರತ ಸಂವಾದ’ದಲ್ಲಿ ರಾಷ್ಟ್ರ ಹಾಗೂ ಧರ್ಮದ ವಿಷಯದಲ್ಲಿನ ಆಘಾತಗಳಿಗೆ ಸಂಬಂಧಿಸಿ ಗಣ್ಯ ವಿದ್ವಾಂಸರೊಂದಿಗೆ ಚರ್ಚೆ ಮಾಡಲಾಗುತ್ತದೆ.
ನಮ್ಮ ಉತ್ತರಾಖಂಡದಲ್ಲಿನ ಜನಸಂಖ್ಯೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಹೆಚ್ಚುತ್ತಿದೆ. ಅವರಿಂದಾಗಿ ಆಂತರಿಕ ಭದ್ರತೆಗೆ ಆಪಾಯವುಂಟಾಗಿದೆ. ಹಿಂದೂಗಳ ಶ್ರದ್ಧಾಸ್ಥಾನಗಳು ಗುಡ್ಡಕಾಡು ಪ್ರದೇಶದಲ್ಲಿವೆ. ಚಾರಧಾಮವೂ ಪರ್ವತಗಳ ಸಾಲಿನಲ್ಲಿದೆ. ಅಲ್ಲಿ ಇಷ್ಟರ ವರೆಗೆ ಯಾವ ಆಕ್ರಮಕರೂ ಆಕ್ರಮಣ ಮಾಡಲು ಪ್ರಯತ್ನಿಸಿರಲಿಲ್ಲ. ಈಗ ಮಾತ್ರ ಈ ಪರ್ವತದ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿಸುವ ಪ್ರಯತ್ನ ಉದ್ದೇಶಪೂರ್ವಕ ಮಾಡಲಾಗುತ್ತಿದೆ. ಆದ್ದರಿಂದ ಈ ಅಪಾಯದ ಬಗ್ಗೆ ಜಾಗರೂಕತೆ ನಿರ್ಮಾಣ ಮಾಡಲು ಹಾಗೂ ಅಪಾಯವನ್ನು ಎದುರಿಸಲು ಸಕ್ರಿಯವಾಗಿ ಭಾಗವಹಿಸುವ ಯೋಜನೆಯನ್ನು ಹಮ್ಮಿಕೊಳ್ಳುವ ವಿಷಯದಲ್ಲಿ ‘ಶಾಶ್ವತ ಭಾರತ ಟ್ರಸ್ಟ್’ನ ವತಿಯಿಂದ ಜಾಗೃತಗೊಳಿಸಲಾಗುತ್ತಿದೆ.
೩. ವ್ಯಾಖ್ಯಾನಗಳ ಮೂಲಕ ಜಾಗೃತಿ
‘ಶಾಶ್ವತ ಭಾರತ ಟ್ರಸ್ಟ್’ನ ಮೂಲಕ ವ್ಯಾಖ್ಯಾನಗಳನ್ನು ಆಯೋಜಿಸಲಾಗುತ್ತದೆ. ಈ ವ್ಯಾಖ್ಯಾನಗಳಲ್ಲಿ ಸನಾತನ ಸಂಸ್ಕೃತಿಯ ಹಾಗೂ ವೈದಿಕ ಪರಂಪರೆಯ ವಿಷಯದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಪಂಜಾಬ್, ಹರ್ಯಾಣಾ, ದೆಹಲಿ ಈ ಪ್ರದೇಶಗಳಲ್ಲಿ ಅನೇಕ ಪರಕೀಯ ಆಕ್ರಮಣಗಳಾಗಿರುವುದರಿಂದ ಅಲ್ಲಿ ೧೦೦ ವರ್ಷಗಳಿಗಿಂತ ಹಳೆಯ ಒಂದು ಮಂದಿರವೂ ಉಳಿದಿಲ್ಲ. ಈಗ ಹಿಮಾಲಯ ಪರ್ವತದ ಸಾಲಿನಲ್ಲಿ ಜನಸಂಖ್ಯೆ ಹೆಚ್ಚಿಸಿ ಹಿಂದೂಗಳ ಚಾರಧಾಮದಂತಹ ಪ್ರಾಚೀನ ಧಾರ್ಮಿಕ ಸ್ಥಳಗಳನ್ನು ವಶಪಡಿಸುವ ಷಡ್ಯಂತ್ರ ನಡೆಯುತ್ತಿದೆ. ‘ಮುಸಲ್ಮಾನರ ಜನನದ ಪ್ರಮಾಣ ಶೇ. ೪.೮ ರಿಂದ ೨.೬ ಕ್ಕೆ ಬಂದಿಯೆಂದು ಹೇಳಲಾಗುತ್ತದೆ, ಹಾಗಾದರೆ ಮುಸಲ್ಮಾನರ ಜನಸಂಖ್ಯೆ ಹೇಗೆ ಹೆಚ್ಚಾಗುತ್ತಿದೆ ? ಹೊರಗಿನಿಂದ ಬರುವ ಮುಸಲ್ಮಾನರಿಂದ ಭಾರತದಲ್ಲಿನ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದೆ. ಈ ವಿಷಯದಲ್ಲಿ ವಾರ್ಷಿಕ ಪರಿಷತ್ತು, ಮಾಸಿಕ ವ್ಯಾಖ್ಯಾನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
೪. ಹಿಂದುತ್ವದ ಕಾರ್ಯದ ಕಡೆಗೆ ತಿರುಗಲು ಕಾರಣವೇನು ?
ಡಾ. ಕುಲದೀಪ ದತ್ತಾ ಇವರ ತಾಯಿಯ ತವರು ಮನೆಯ ಸಂಬಂಧಿಕರು ಪಾಕಿಸ್ತಾನದ ಸಿಯಾಲಕೋಟ್‌ನಲ್ಲಿ ವಾಸಿಸುತ್ತಿದ್ದರು. ೧೯೪೭ ರಲ್ಲಿನ ವಿಭಜನೆಯ ಸಮಯದಲ್ಲಿ ಅನೇಕ ಅತ್ಯಾಚಾರಗಳನ್ನು ಸಹಿಸಿಕೊಂಡು ಅವರು ಜಮ್ಮು-ಕಾಶ್ಮೀರದಲ್ಲಿ ಬಂದು ನೆಲೆಸಿದರು. ೧೯೯೦ ರಲ್ಲಿ ಜಿಹಾದಿ ಭಯೋತ್ಪಾದಕರಿಂದ ಕಾಶ್ಮೀರಿ ಹಿಂದೂಗಳ ವಂಶವಿಚ್ಛೇಧನವಾದಾಗ ಈ ಸಂಬಂಧಿಕರು ಅದರಲ್ಲಿಯೂ ನಲುಗಿ ಹೋದರು. ಅದೇ ರೀತಿ ಅವರ ಚಿಕ್ಕಮ್ಮನ ಸಂಬಂಧಿಕರು ಕೂಡ ಜಮ್ಮು-ಕಾಶ್ಮೀರದಲ್ಲಿಯೆ ನೆಲೆಸಿದ್ದರು. ಡಾ. ದತ್ತಾ ಇವರಿಗೆ ಯಾವಾಗ ‘ತಮ್ಮ ಸಂಬಂಧಿಕರು ಜಿಹಾದಿಗಳಿಂದ ಏನೆಲ್ಲ ಸಹಿಸಿಕೊಳ್ಳಬೇಕಾಯಿತೊ’, ಅದು ತಿಳಿದಾಗ ಅವರು ಹಿಂದೂಗಳ ರಕ್ಷಣೆಯ ವಿಷಯದಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಿದರು.