ಮತಾಂಧ ನ್ಯಾಯಾಧೀಶರಿಂದಾದ ಕೌಟುಂಬಿಕ ಅನ್ಯಾಯ ಪ್ರಕರಣದಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯದ ತೀರ್ಪು !

೧. ಪತ್ನಿ ಮತ್ತು ೪ ಮಕ್ಕಳನ್ನು ಬಿಟ್ಟು ಜಿಲ್ಲಾ ನ್ಯಾಯಾಧೀಶರು ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹ ಮಾಡಿಕೊಳ್ಳುವುದು

‘೨೦೦೨ ರಲ್ಲಿ ಶಬಾನಾ ಬಾನೋ ಎಂಬ ಮುಸ್ಲಿಂ ಮಹಿಳೆಯು ಜಿಲ್ಲಾ ನ್ಯಾಯಾಧೀಶ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ವಿವಾಹವಾದರು. ೨೦೧೩ ರ ವರೆಗೆ ಅವರ ವೈವಾಹಿಕ ಜೀವನ ಸುಗಮವಾಗಿ ನಡೆದಿತ್ತು. ಈ ಅವಧಿಯಲ್ಲಿ ಅವರಿಗೆ ೪ ಜನ ಮಕ್ಕಳಾದರು. ನಂತರ ನ್ಯಾಯಾಧೀಶ ಪತಿಯು ತನ್ನ ಪತ್ನಿ ಮತ್ತು ಆಕೆಯ ೪ ಮಕ್ಕಳನ್ನು ಬಿಟ್ಟು, ತನಗಿಂತ ೨೨ ವರ್ಷ ಕಿರಿಯ ಮಹಿಳೆಯನ್ನು ವಿವಾಹವಾದರು. ಅವರು ಒಬ್ಬ ಮುಫ್ತಿಯಿಂದ ತಲಾಖ್‌ನಾಮಾವನ್ನೂ (ವಿಚ್ಛೇದನ) ಪಡೆದುಕೊಂಡರು. ತದನಂತರ ಕೌಟುಂಬಿಕ ಹಿಂಸೆಯಿಂದ  ಮಹಿಳೆಯರ ಮುಕ್ತಿ ಹಾಗೂ ಭಾರತೀಯ ದಂಡ ಸಂಹಿತೆಯ ಕೆಲವು ಕಲಂ ಮತ್ತು ಕ್ರಿಮಿನಲ್‌ ಕಾರ್ಯವಿಧಾನದ ಸಂಹಿತೆಯ ಕಲಂ ೧೨೫ ರ ಅಡಿಯಲ್ಲಿ ಜೀವನಾಂಶ ಪಡೆಯಲು ನಿರಾಶ್ರಿತಳಾದ ಶಬಾನಾ ೨೦೧೫ ರಲ್ಲಿ ಅರ್ಜಿ ಸಲ್ಲಿಸಿದರು. ಆ ಅರ್ಜಿಗೆ ಆರಂಭದ ೮ ವರ್ಷಗಳು ಕೇವಲ ‘ದಿನಾಂಕದ ಮೇಲೆ ದಿನಾಂಕ’ ನಡೆಯುತ್ತಿತ್ತು.

ಈ ೮ ವರ್ಷಗಳ ಅವಧಿಯಲ್ಲಿ ಈ ಪ್ರಕರಣ ೬೫ ಬಾರಿ ವಿಚಾರಣೆಗೆ ಬಂದಿತು. ಅದರಲ್ಲಿ ೩೫ ಬಾರಿ ಪತಿ-ಪತ್ನಿಯರ ನಡುವೆ ರಾಜಿ ಸಾಧ್ಯವಿದೆಯೇ ?, ಎಂದು ಪರಿಶೀಲಿಸಲು ದಿನಾಂಕಗಳನ್ನು ನೀಡಲಾಯಿತು. ಈ ೩೫ ದಿನಾಂಕಗಳಲ್ಲಿ ಒಂದೇ ಒಂದು ದಿನಾಂಕಕ್ಕೂ ನ್ಯಾಯಾಂಗ ಅಧಿಕಾರಿಯಾಗಿದ್ದ ಆಕೆಯ ಪತಿ ಹಾಜರಿರಲಿಲ್ಲ. ಇದಕ್ಕೆ ವಿರುದ್ಧವಾಗಿ ನಿರಾಶ್ರಿತಳಾದ ಶಬಾನಾಳ ಪ್ರಕರಣವನ್ನು ತಾಂತ್ರಿಕವಾಗಿ ಒಂದು-ಎರಡು ಬಾರಿ ಆಕೆಯ ಗೈರುಹಾಜರಿಯ ಕಾರಣ ನೀಡಿ ತಿರಸ್ಕರಿಸಲಾಯಿತು.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೨. ಜೀವನಾಂಶ ಪಡೆಯಲು ಶಬಾನಾ ಬಾನೋರಿಂದ ರಾಜಸ್ಥಾನ ಉಚ್ಚ ನ್ಯಾಯಾಲಯದ ಮೊರೆ

ಶಬಾನಾರ ೪ ಮಕ್ಕಳು ಶಾಲೆ-ಕಾಲೇಜಿಗೆ ಹೋಗುತ್ತಿದ್ದು ಆಕೆಗೆ ಸ್ವತಂತ್ರ ಆದಾಯ ಇಲ್ಲ. ಆದ್ದರಿಂದ ಜೀವನಾಂಶ ಸಿಗಬೇಕು ಎಂದು ಈ ಪ್ರಕರಣ ರಾಜಸ್ಥಾನ ಉಚ್ಚ ನ್ಯಾಯಾಲಯಕ್ಕೆ ತಲುಪಿತು. ಅಲ್ಲಿ ಶಬಾನಾ, ‘ತನ್ನ ಪತಿಗೆ ೧ ಲಕ್ಷ ೬೦ ಸಾವಿರ ರೂಪಾಯಿ ಮಾಸಿಕ ವೇತನವಿದೆ. ಅವರು ಇತ್ತೀಚೆಗೆ ೨೮ ಲಕ್ಷ ರೂಪಾಯಿಗಳ ಮನೆಯನ್ನು ಖರೀದಿಸಿದ್ದಾರೆ. ಇದರೊಂದಿಗೆ ಅವರು ೨೫ ಲಕ್ಷ ರೂಪಾಯಿಗಳ ಜಾಗವನ್ನು ಸಹ ಖರೀದಿಸಿದ್ದಾರೆ. ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ನ್ಯಾಯಾಂಗ ಅಧಿಕಾರಿಯು ೧೩ ಲಕ್ಷ ರೂಪಾಯಿಗಳ ‘ಇಕ್ವಿಟಿ ಹೆಸರುಗಳನ್ನು’ (ಸಾಮಾನ್ಯ ಹೆಸರುಗಳು) ಖರೀದಿಸಿದ್ದಾರೆ ಹಾಗೂ ತಮಗಿಂತ ೨೨ ವರ್ಷ ಕಿರಿಯ ಮಹಿಳೆಯನ್ನು ವಿವಾಹವಾಗಿದ್ದಾರೆ’ ಎಂದು ಹೇಳಿದರು. ಅವರು ಉಚ್ಚ ನ್ಯಾಯಾಲಯದಲ್ಲಿ, ‘ಈ ಪ್ರಕರಣ ೬೫ ಬಾರಿ ವಿಚಾರಣೆಗೆ ಬಂದಿದೆ; ಆದರೆ ಒಮ್ಮೆಯೂ ಪರಿಣಾಮಕಾರಿ ವಿಚಾರಣೆ ನಡೆದಿಲ್ಲ ಅಥವಾ ಆದೇಶವೂ ಆಗಿಲ್ಲ. ಬದುಕಲು ತನಗೆ ಪತಿ ಒಂದು ರೂಪಾಯಿಯನ್ನು ಸಹ ನೀಡಿಲ್ಲ. ತನ್ನ ಪತಿ ನ್ಯಾಯಾಂಗ ಅಧಿಕಾರಿಯಾಗಿದ್ದು ಕೌಟುಂಬಿಕ ನ್ಯಾಯಾಲಯದಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಸ್ಥಾನ ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯಲ್ಲಿ ಅವರಿಗೆ ಅಧಿಕ ಗೌರವವಿದೆ. ಅದರ ದುಷ್ಟರಿಣಾಮವನ್ನು ಪತ್ನಿಯಾದ ನಾನು ಅನುಭವಿಸಬೇಕಾಯಿತು’ ಎಂದೂ ತಿಳಿಸಿದರು.

೩. ರಾಜಸ್ಥಾನ ಉಚ್ಚ ನ್ಯಾಯಾಲಯದ ಸಂತಾಪ

ರಾಜಸ್ಥಾನ ಉಚ್ಚ ನ್ಯಾಯಾಲಯವು ಈ ಪ್ರಕರಣದ ಕಾಗದಪತ್ರಗಳನ್ನು ಪರಿಶೀಲಿಸಿತು. ತದನಂತರ ನ್ಯಾಯಾಧೀಶರು ಪತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಉಚ್ಚ ನ್ಯಾಯಾಲಯವು, ‘ಸಂವಿಧಾನದ ಕಲಂ ೧೫(೩) ಮತ್ತು ೩೯ ಸ್ಪಷ್ಟವಾಗಿ ಹೇಳುವುದೇನೆಂದರೆ, ‘ಮಹಿಳೆಯರಿಗೆ ಜೀವನೋಪಾಯಕ್ಕಾಗಿ ಧನ ಮತ್ತು ಸಾಧನಗಳು ಸಿಗಬೇಕು. ನ್ಯಾಯಾಂಗ ವ್ಯವಸ್ಥೆಯು ಕಕ್ಷಿದಾರ, ಜನತೆ, ಹಕ್ಕು ಕೇಳುವ ವ್ಯಕ್ತಿಗಳು ಮತ್ತು ಸಂವಿಧಾನಕ್ಕೆ ಬದ್ಧವಾಗಿದೆ.’ ಹೀಗಿರುವಾಗ ನಿರಾಶ್ರಿತ ಮಹಿಳೆ ಮತ್ತು ಆಕೆಯ ೪ ಜನ ಮಕ್ಕಳು ಜೀವನಾಂಶ ಪಡೆಯಲು ೮ ವರ್ಷ ಕಾಯಬೇಕಾಯಿತು ಮತ್ತು ಅದಕ್ಕಾಗಿ ನ್ಯಾಯಾಲಯಕ್ಕೆ ಬರಬೇಕಾಯಿತು. ಅಷ್ಟೇ ಅಲ್ಲ, ೬೫ ದಿನಾಂಕಗಳಾದರೂ ಆಕೆಯ ಕೈಗೆ ಏನೂ ಸಿಗುತ್ತಿಲ್ಲ’, ಎಂದು ಉಚ್ಚ ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ತದನಂತರ ನ್ಯಾಯಾಲಯವು, ‘ಶಬಾನಾ ಮತ್ತು ಆಕೆಯ ೪ ಜನ ಮಕ್ಕಳಿಗೆ ೨೦೧೫ ರಿಂದ ೨೦೧೯ ರ ವರೆಗೆ ಪ್ರತಿ ತಿಂಗಳಿಗೆ ೨೦ ಸಾವಿರ ರೂಪಾಯಿಗಳಂತೆ ಈ ವರ್ಷಗಳ ಮೊತ್ತವನ್ನು ನೀಡಬೇಕು’, ಎಂದು ಆದೇಶಿಸಿತು. ಇದರೊಂದಿಗೆ ‘೧ ಆಗಸ್ಟ್ ೨೦೧೯ ರಿಂದ ಆದೇಶವಾಗುವವರೆಗೆ ಮತ್ತು ನಂತರವೂ ೩೦ ಸಾವಿರ ರೂಪಾಯಿ ಪ್ರತಿ ತಿಂಗಳು ಆಕೆಗೆ ಜೀವನಾಂಶ ನೀಡಬೇಕು’. ಅಷ್ಟೇ ಅಲ್ಲ, ‘ಪ್ರಕರಣದ ವೆಚ್ಚವಾಗಿ ೫೦ ಸಾವಿರ ರೂಪಾಯಿಗಳನ್ನು ದಂಡ ನೀಡಬೇಕು’, ಎಂದು ಆದೇಶಿಸಿತು.

೪. ಮಹಿಳೆಗಾದ ಅನ್ಯಾಯದ ಪ್ರಕರಣದಲ್ಲಿ ವಿಭಾಗೀಯ ತನಿಖೆಗೆ ಆದೇಶಿಸುವುದು ಅವಶ್ಯಕ !

ರಾಜಸ್ಥಾನ ಉಚ್ಚ ನ್ಯಾಯಾಲಯವು ಕೇವಲ ಸಂತಾಪ ವ್ಯಕ್ತಪಡಿಸಿ ಸುಮ್ಮನಾದರೆ ಸಾಕಾಗುವುದಿಲ್ಲ. ಈ ೮ ವರ್ಷಗಳಲ್ಲಿ ನಿರಾಶ್ರಿತ ಮಹಿಳೆಗೆ ನ್ಯಾಯಾಲಯದ ಅಧಿಕಾರಿಯೊಬ್ಬರು ೬೫ ಬಾರಿ ದಿನಾಂಕ ನೀಡಿ ಮಾನಸಿಕ ಹಿಂಸೆ ನೀಡಿದ್ದಾರೆ, ಇದರ ವಿಭಾಗೀಯ ತನಿಖೆಗೆ ಸಹ ಆದೇಶಿಸಬೇಕು. ಈ ಪ್ರಕರಣದಿಂದ ಒಂದು ವಿಷಯವು ಗಮನಕ್ಕೆ ಬರುತ್ತದೆ, ಅದೆಂದರೆ ಮತಾಂಧರು ಸುಶಿಕ್ಷಿತರಾಗಿದ್ದರೂ ಜನಸಂಖ್ಯಾ ನಿಯಂತ್ರಣದ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ. ಅವರು ವಿವಾಹ ಮತ್ತು ವಿಚ್ಛೇದನದ ಕಾನೂನುಗಳನ್ನು ಗಾಳಿಗೆ ತೂರಿ ಮುಫ್ತಿ-ಮೌಲ್ವಿಗಳಿಂದ ತಲಾಕನಾಮಾ ಮಾಡಿಸಿಕೊಂಡು ಒಂದು ಸಮಾನಾಂತರ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ನಡೆಸುತ್ತಾರೆ. ಸಂವಿಧಾನ ಮತ್ತು ಭಾರತದ ಕಾನೂನುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಾರೆ. ಈ ಸುಶಿಕ್ಷಿತ ಜನರಿಂದಲೂ ಇಂತಹ ಉದ್ಧಟತನವಾಗುತ್ತದೆ ?’

|| ಶ್ರೀಕೃಷ್ಣರ್ಪಣಮಸ್ತು ||

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೩.೩.೨೦೨೫)