ಏಪ್ರಿಲ್ ೧೨ ರಂದು ಇರುವ ಹನುಮಾನ ಜಯಂತಿಯ ಪ್ರಯುಕ್ತ ವಿಶೇಷ ಲೇಖನ
ಜ್ಯೇಷ್ಠ ಶುಕ್ಲ ಪಾಡ್ಯದಂದು ಈ ದಿನದಂದು ಪಂಪಾ ಸರೋವರದ ತೀರದಲ್ಲಿ ಪ್ರಭು ರಾಮಚಂದ್ರ ಮತ್ತು ಹನುಮಂತನ ಭೇಟಿಯಾಯಿತು. ಮತಂಗ ಋಷಿಗಳ ಆಶ್ರಮದಲ್ಲಿ ಶಬರಿಯ ಆತಿಥ್ಯವನ್ನು ಸ್ವೀಕರಿಸಿ ರಾಮಚಂದ್ರರು ಪಂಪಾ ಸರೋವರದ ತೀರಕ್ಕೆ ಬಂದರು. ಸರೋವರದ ಸೌಂದರ್ಯವನ್ನು ನೋಡಿ ಶ್ರೀರಾಮರಿಗೆ ಪುನಃ ಸೀತೆಯ ನೆನಪಾಯಿತು ಮತ್ತು ಅವರು ವಿಲಾಪ ಮಾಡಿದ ನಂತರ ಲಕ್ಷ್ಮಣ ಅವರಿಗೆ ಧೈರ್ಯವನ್ನು ಕೊಟ್ಟರು. ರಾಮ-ಲಕ್ಷ್ಮಣರು ಸರೋವರದ ದಡ ದಲ್ಲಿ ಋಷ್ಯಮುಖ ಪರ್ವತದ ಕಡೆಗೆ ಬರುತ್ತಿರುವಾಗ ಸುಗ್ರೀವನು ಅವರನ್ನು ನೋಡಿದನು. ವಾಲಿಯ ಭಯದಿಂದ ಸುಗ್ರೀವನು ಈ ಪರ್ವತದಲ್ಲಿ ಅಡಗಿದ್ದನು. ಇದು ವಾಲಿ ಕಡೆಯವರು ಯಾರಾದರೂ ಬಂದಿದ್ದಾರೆಯೇ ? ಎಂಬ ಸಂಶಯದಿಂದ ಸುಗ್ರೀವನು ಭಯಭೀತನಾದನು. ಅವರನ್ನು ಪರೀಕ್ಷಿಸಲು ಹನುಮಂತನನ್ನು ಕಳುಹಿಸಿದನು. ಹನುಮಂತನು ಪರ್ವತದಿಂದ ಹಾರಿ ಕಪಿರೂಪವನ್ನು ಬಿಟ್ಟು ಭಿಕ್ಷುವಿನ ರೂಪ ದಲ್ಲಿ ರಾಮ-ಲಕ್ಷ್ಮಣರ ಮುಂದೆ ನಿಂತನು. ರಾಮ-ಲಕ್ಷ್ಮಣರಿಗೆ ಅವರು ವಾಲಿಯ ದುರ್ವರ್ತನೆಯ ಸತ್ಯತೆಯನ್ನು ಹೇಳಿ ಸುಗ್ರೀವನೊಂದಿಗೆ ಮೈತ್ರಿ ಮಾಡಿಕೊಳ್ಳಲು ವಿನಂತಿಸಿದನು. ಲಕ್ಷ್ಮಣನು ತನ್ನ ಅಯೋಧ್ಯೆವಿಯೋಗದಿಂದ ಸೀತಾಪಹರಣದ ವರೆಗಿನ ಕಥಾನಕವನ್ನು ನಿವೇದನೆ ಮಾಡಿದನು. ಅವರು ಸುಗ್ರೀವನ ಭೇಟಿಯ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ಹನುಮಂತನು ಅಪಾರ ಪ್ರೀತಿಯಿಂದ ‘ಸುಗ್ರೀವನು ಸೀತೆಯ ಶೋಧದಲ್ಲಿ ನಿಮಗೆ ಖಂಡಿತ ಸಹಾಯವನ್ನು ಮಾಡುವನು’ ಎಂದು ಹೇಳಿದನು.
ನಂತರ ತನ್ನ ಮೂಲ ಕಪಿರೂಪವನ್ನು ಧರಿಸಿ, ರಾಮ-ಲಕ್ಷ್ಮಣರನ್ನು ತನ್ನ ಬೆನ್ನಿನ ಮೇಲೆ ಕುಳಿತು ಹಾರಿ ಋಷ್ಯಮುಖ ಪರ್ವತವನ್ನು ದಾಟಿ ಮಲಯ ಪರ್ವತ ದಲ್ಲಿ ತಂದು ಬಿಟ್ಟನು. ಅಲ್ಲಿ ಅವರು ಮತ್ತು ಸುಗ್ರೀವರ ಭೇಟಿ ಮಾಡಿಸಿದನು. ಇಬ್ಬರಿಗೂ ಬಹಳ ಆನಂದವಾಯಿತು. ಅವರು ಪರಸ್ಪರರಿಗೆ ಪ್ರೀತಿಯಿಂದ ಆಲಿಂಗನ ಮಾಡಿದರು. ಹನುಮಂತನು ಈ ಸಮಯದಲ್ಲಿ ಕಟ್ಟಿಗೆಯನ್ನು ತಂದು ಅಗ್ನಿಯನ್ನು ಹೊತ್ತಿಸಿ, ಅದನ್ನು ಸಾಕ್ಷಿಯಾಗಿಟ್ಟು ರಾಮ-ಸುಗ್ರೀವರ ಮೈತ್ರಿಯನ್ನು ಸ್ಥಾಯಿಗೊಳಿಸಿದನು. ನಂತರ ಸೀತಾಪಹರಣದ ಸಮಯದಲ್ಲಿ ಸೀತೆ ನೆಲದ ಮೇಲೆ ಹಾಕಿದ ಕೆಲವು ಆಭರಣಗಳನ್ನು ಗುರುತಿಸಲು ಸುಗ್ರೀವನು ರಾಮನ ಮುಂದೆ ಇಟ್ಟನು. ಆ ಆಭರಣಗಳನ್ನು ನೋಡಿ ರಾಮನ ಕಣ್ಣಿನಲ್ಲಿ ಕಣ್ಣೀರು ತುಂಬಿತು. ಸೀತೆಯ ಚರಣಸೇವೆಯಲ್ಲಿ ತಲ್ಲೀನನಾಗಿದ್ದ ಲಕ್ಷ್ಮಣನು ಕಾಲುಂಗುರವನ್ನು ಮಾತ್ರ ಗುರುತಿಸಿ ‘ಈ ಆಭರಣ ಸೀತೆಯದೇ’ ಎಂದು ಹೇಳಿದನು.’
(ಕೃಪೆ : ‘ದಿನವಿಶೇಷ’ (ಭಾರತೀಯ ಇತಿಹಾಸದ ತಿಥಿವಾರ ದರ್ಶನ))