ವಿವಿಧ ಯುಗದ ಧರ್ಮಯುದ್ಧಗಳಲ್ಲಿ ಧರ್ಮದ ರಕ್ಷಣೆ ಮಾಡುವ ಹನುಮಾನ್‌ !

೧. ತ್ರೇತಾಯುಗದಲ್ಲಿ ರಾಮ-ರಾವಣರ ಧರ್ಮಯುದ್ಧದಲ್ಲಿ ವಾನರಸೇನೆಯನ್ನು ರಕ್ಷಿಸುವುದು !

ತ್ರೇತಾಯುಗದಲ್ಲಿ ಲಂಕಾದಲ್ಲಿ ನಡೆದ ಧರ್ಮಯುದ್ಧದಲ್ಲಿ ರಾವಣನ ಸೇನೆಯಲ್ಲಿದ್ದ ಶಕ್ತಿಶಾಲಿ, ಮಾಯಾವಿ ಶಕ್ತಿಯುಳ್ಳ ಅತಿಕಾಯ, ನರಾಂತಕ, ದೇವಾಂತಕ, ಪ್ರಹಸ್ತ, ಇಂದ್ರಜಿತ್‌ ಮುಂತಾದ ಮಹಾಬಲಶಾಲಿ ರಾಕ್ಷಸವೀರರು ಇವರೆಲ್ಲರೂ ವಾನರಸೇನೆ, ಹಾಗೆಯೇ ಸುಗ್ರೀವ, ಅಂಗದ, ವಿಭೀಷಣ, ಲಕ್ಷ್ಮಣ ಮೊದಲಾದ ಧರ್ಮಯೋಧರ ಮೇಲೆ ಅನೇಕ ವಿಧ್ವಂಸಕ ಮತ್ತು ಮಾರಕ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿದರು; ಆದರೆ ಹನುಮಂತನು ಇವೆಲ್ಲಾ ಶಸ್ತ್ರಾಸ್ತ್ರಗಳನ್ನು ವಾನರಸೇನೆಯ ತನಕ ತಲುಪುವ ಮೊದಲೇ ತನ್ನ ದೇಹದ ಮೇಲೆ ಸಹಿಸಿಕೊಂಡು ಅವುಗಳನ್ನು ನಿಷ್ಕ್ರಿಯಗೊಳಿಸಿದನು.

೨. ದ್ವಾಪರಯುಗದ ಕೌರವ-ಪಾಂಡವರ ಮಹಾಭಾರತ ಯುದ್ಧದಲ್ಲಿ ಪಾಂಡವರನ್ನು ರಕ್ಷಿಸುವುದು !

ಮಹಾಭಾರತದ ಧರ್ಮಯುದ್ಧವು ಆರಂಭವಾಗುವ ಮೊದಲು, ಭಗವಾನ ಶ್ರೀಕೃಷ್ಣನು ಹನುಮಂತನಿಗೆ ಅರ್ಜುನನ ರಥದ ಮೇಲೆ ಸೂಕ್ಷ್ಮ ರೂಪದಲ್ಲಿ ಉಪಸ್ಥಿತ ಇರುವಂತೆ ಕೇಳಿ ಕೊಂಡನು. ಹಾಗೆಯೇ ಹನುಮಂತನು ಅರ್ಜುನನ ಕಪಿಧ್ವಜದಲ್ಲಿ ಸೂಕ್ಷ್ಮ ರೂಪದಲ್ಲಿ ವಿರಾಜಮಾನನಾದನು. ಮಹಾಭಾರತದ ಧರ್ಮಯುದ್ಧಗಳಲ್ಲಿ, ಭೀಷ್ಮಾಚಾರ್ಯ, ದ್ರೋಣಾಚಾರ್ಯ, ಕರ್ಣ ಮತ್ತು ಅಶ್ವತ್ಥಾಮನಂತಹ ಮಹಾರಥಿಗಳು ಅರ್ಜುನನ ಮೇಲೆ ಮಾರಣಾಂತಿಕ ಹಾಗೆಯೇ ಸೃಷ್ಟಿವಿಧ್ವಂಸಕ ದಿವ್ಯಾಸ್ತ್ರಗಳನ್ನು ಬಿಟ್ಟರು, ಆದರೆ ಶ್ರೀಕೃಷ್ಣನ ಕೃಪೆಯಿಂದ ಅರ್ಜುನನಿಗೆ ಏನೂ ಆಗಲಿಲ್ಲ. ರಥದ ಮೇಲೆ ಸೂಕ್ಷ್ಮರೂಪದಲ್ಲಿ ಕುಳಿತ ಹನುಮಂತನು ಎಲ್ಲಾ ದಿವ್ಯಾಸ್ತ್ರ ಸ್ವಲ್ಪ ಸಮಯ ಹಿಡಿದು ನಿಲ್ಲಿಸಿದನು. ೧೮ ದಿನಗಳ ಯುದ್ಧ ಮುಗಿದ ನಂತರ ಶ್ರೀಕೃಷ್ಣ ಮತ್ತು ಅರ್ಜುನ ರಥದಿಂದ ಇಳಿದಾಗ ಮತ್ತು ಶ್ರೀಕೃಷ್ಣನ ಆಜ್ಞೆಯಂತೆ ಮಾರುತಿಯು ರಥಬಿಟ್ಟು ಅರ್ಜುನನ ಮುಂದೆ ಪ್ರತ್ಯಕ್ಷನಾದಾಗ ಹನುಮಂತನು ಹಿಡಿದಿಟ್ಟಿದ್ದ ದಿವ್ಯಾಸ್ತ್ರಗಳನ್ನು ಮುಕ್ತಗೊಳಿಸಿದನು. ಇದರಿಂದ ಅರ್ಜುನನ ರಥದಲ್ಲಿ ಭಾರಿ ಸ್ಫೋಟ ಸಂಭವಿಸಿತು ಮತ್ತು ಅದರ ಭಾಗಗಳು ಚೆಲ್ಲಾಪಿಲ್ಲಿಯಾದವು.

೩. ಕಲಿಯುಗದ ಸಂತರ ಆರಾಧ್ಯ ದೈವ !

ಅ. ಸಮರ್ಥ ರಾಮದಾಸಸ್ವಾಮಿ : ಛತ್ರಪತಿ ಶಿವಾಜಿ ಮಹಾರಾಜರ ಹಿಂದವಿ ಸ್ವರಾಜ್ಯವನ್ನು ಆಧ್ಯಾತ್ಮಿಕ ಸ್ತರದಲ್ಲಿ ಬಲಿಷ್ಠಗೊಳಿಸಲು ರಾಮದಾಸಸ್ವಾಮಿಯವರು ಮಾರುತಿಯ ೧೧ ಮೂರ್ತಿಗಳನ್ನು ಸ್ಥಾಪಿಸಿದರು.
ಆ. ಸಂತ ತುಳಸಿದಾಸರು : ಸಂತ ತುಳಸಿದಾಸರು ಕೂಡ ಹನುಮಂತನ ಉಪಾಸನೆ ಮಾಡಿದ್ದರು. ಹನುಮಂತನ ಕೃಪೆಯಿಂದಾಗಿ, ಸಂತ ತುಳಸಿದಾಸರಿಗೆ ೩ ಭಾರಿ ಪ್ರಭು ಶ್ರೀರಾಮ, ಲಕ್ಷ್ಮಣ ಮತ್ತು ಸೀತಾಮಾತೆಯ ಪ್ರತ್ಯಕ್ಷ ದರ್ಶನವಾಯಿತು. ಕಾಶಿಯ ಕೆಲವು ಪಂಡಿತರು ಸಂತ ತುಳಸಿದಾಸರ ವಿರೋಧಿಗಳಾಗಿದ್ದರು. ಅವರು ತುಳಸಿದಾಸರನ್ನು ನಾಶಮಾಡಲು ಒಬ್ಬ ತಾಂತ್ರಿಕನ ಸಹಾಯದಿಂದ ಕೃತನನ್ನು (ಅಘೋರಿ ಶಕ್ತಿಯನ್ನು) ಕಳುಹಿಸಿದ್ದನು. ಹನುಮಂತನ ಕೃಪೆಯಿಂದ ಸಂತ ತುಳಸೀದಾಸರ ರಕ್ಷಣೆಯಾಯಿತು.
ಇ. ರಾಷ್ಟ್ರಸಂತ ವಿದ್ಯಾರಣ್ಯಸ್ವಾಮಿ : ಸಾಮ್ರಾಟ ಹಕ್ಕರಾಯ ಮತ್ತು ಬುಕ್ಕರಾಯರನ್ನು ರೂಪಿಸುವ ರಾಷ್ಟ್ರಸಂತ ವಿದ್ಯಾರಣ್ಯಸ್ವಾಮಿಯವರೂ ಹನುಮಂತನನ್ನು ಸ್ತುತಿಸಿ ಆತನ ಪಂಚಮುಖಿ ರೂಪದ ಮಹತ್ವವನ್ನು ವಿವರಿಸಿದ್ದಾರೆ. ಹನುಮಂತನ ಇತರ ಗುಣವೈಶಿಷ್ಟ್ಯಗಳು

೧. ಸಂಗೀತದ ಜ್ಞಾನವುಳ್ಳವನು : ಹನುಮಂತನಿಗೆ ನಾರದಮುನಿಯಿಂದ ಸಂಗೀತ ಜ್ಞಾನ ಪ್ರಾಪ್ತಿಯಾಗಿತ್ತು. ಅವನಿಗೆ ವೀಣೆಯನ್ನು ನುಡಿಸಲು ಬರುತ್ತಿತ್ತು. ಅವನು ತಾಳ ಮತ್ತು ಚಿಪ್ಪಳಿಯನ್ನು ನುಡಿಸಿ ಶ್ರೀರಾಮನ ಭಾವಪೂರ್ಣ ಭಜನೆಯನ್ನು ಮಾಡುತ್ತಾನೆ.

೨. ಸಂಸ್ಕೃತ ಭಾಷೆ ಮತ್ತು ವ್ಯಾಕರಣದಲ್ಲಿ ಪಾಂಡಿತ್ಯ : ಹನುಮಂತನು ಬಹಳ ಪ್ರತಿಭಾವಂತ ಮತ್ತು ಸಂಸ್ಕೃತ ಭಾಷೆಯಲ್ಲಿ ವ್ಯಾಕರಣದ ಆಳವಾದ ಜ್ಞಾನವನ್ನು ಹೊಂದಿದ್ದಾನೆ. ಹನುಮಂತನು ಮೊದಲ ಬಾರಿಗೆ ಶ್ರೀರಾಮ ಮತ್ತು ಲಕ್ಷ್ಮಣರನ್ನು ಪಂಪಾಸರೋವರದ ಬಳಿ ಋಷ್ಯಮುಖ ಪರ್ವತದ ತಪ್ಪಲಿನಲ್ಲಿ ಭೇಟಿಯಾದಾಗ, ಅವನು ಶ್ರೀರಾಮ ಮತ್ತು ಲಕ್ಷ್ಮಣನೊಂದಿಗೆ ಸಂಸ್ಕೃತ ಭಾಷೆಯಲ್ಲಿ ಸ್ವಯಂಪ್ರೇರಿತವಾಗಿ ಸಂಭಾಷಣೆ ಮಾಡಿದನು. ಇದರಿಂದ ಅವನ ಸಂಸ್ಕೃತ ಭಾಷೆಯ ಪ್ರಭುತ್ವವು ಕಂಡುಬರುತ್ತದೆ.

೩. ಅಷ್ಟಮಹಾಸಿದ್ಧಿಗಳ ಸ್ವಾಮಿ : ಹನುಮಂತನು ಗರಿಮಾ, ಲಘಿಮಾ, ಮಹಿಮಾ ಮೊದಲಾದ ಅಷ್ಟಮಹಾಸಿದ್ಧಿಗಳಿಗೆ ಸ್ವಾಮಿಯಾಗಿದ್ದಾನೆ.

– ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ.