ಈ ಸಲದ ಶ್ರೀ ಕೃಷ್ಣಜನ್ಮಾಷ್ಟಮಿಯ ನಿಮಿತ್ತ್ತ ವಿಶ್ವ ಹಿಂದೂ ಪರಿಷತ್ತಿನಿಂದ ದೇಶಾದ್ಯಂತ ಕಾರ್ಯಕ್ರಮದ ಆಯೋಜನೆ

ಈ ವರ್ಷ ವಿಶ್ವ ಹಿಂದೂ ಪರಿಷತ್ತು ಶ್ರೀಕೃಷ್ಣಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾರ್ಯಕ್ರಮದ ಯೋಜನೆ ಮಾಡಲಿದೆ. ಈ ಬಗ್ಗೆ ಯೋಜನೆಯನ್ನು ಮಾಡಲಾಗುತ್ತಿದೆ. ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ ಕುಮಾರ ಇವರು, ಶ್ರೀ ಕೃಷ್ಣಜನ್ಮಾಷ್ಟಮಿಯು ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ದಿನವಾಗಿದೆ.

ಜಯಪುರದಲ್ಲಿ ಕಿವಿಯಲ್ಲಿಟ್ಟ ಬ್ಲೂಟೂತ್ ಇಯರ್ ಫೋನ್ ಸ್ಫೋಟಗೊಂಡು ಯುವಕನ ಸಾವು

ಇಲ್ಲಿಯ ರಾಕೇಶ ನಾಗರ ಎಂಬ ೨೮ ವರ್ಷದ ಯುವಕನು ಹಾಡನ್ನು ಕೇಳುತ್ತಿರುವಾಗ ಬ್ಲೂಟೂತ ಇಯರ್ ಫೋನಿನ ಎರಡೂ ಇಯರ್‌ಬಡ್ಸ್ ನಡುವೆ ಸ್ಫೋಟವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆಯು ಚೋಮು ಎಂಬ ಪ್ರದೇಶದ ಉದಯಪೂರಿಯಾ ಊರಿನಲ್ಲಿ ನಡೆದಿದೆ.

ಗುಪ್ತಚರ ಇಲಾಖೆ ಮತ್ತು ಕೇಂದ್ರ ತನಿಖಾ ದಳ ಇವು ನ್ಯಾಯವ್ಯವಸ್ಥೆಗೆ ಸಹಾಯ ಮಾಡುತ್ತಿಲ್ಲ ! – ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ

ಗುಪ್ತಚರ ಇಲಾಖೆ ಮತ್ತು ಕೇಂದ್ರೀಯ ತನಿಖಾ ದಳ ಇವು ನ್ಯಾಯವ್ಯವಸ್ಥೆಗೆ ಸ್ವಲ್ಪವೂ ಸಹಾಯ ಮಾಡುತ್ತಿಲ್ಲ. ಯಾವಾಗ ನ್ಯಾಯಾಧೀಶರು ದೂರು ನೀಡುತ್ತಾರೆ, ಆಗ ಅವರು ಪ್ರತಿಕ್ರಿಯಿಸುವುದಿಲ್ಲ, ಎಂಬ ಪದಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿತು.

ಅಲಹಾಬಾದ್ ಉಚ್ಚನ್ಯಾಯಾಲಯದಿಂದ ‘ಲಿವ್ ಇನ್ ರಿಲೇಶನ್‌ಶಿಪ್’ ನಲ್ಲಿ ವಾಸಿಸುತ್ತಿರುವ ವಿವಾಹಿತ ಮಹಿಳೆಗೆ ರಕ್ಷಣೆ ನೀಡಲು ನಕಾರ

ತನ್ನ ಪತಿಯನ್ನು ಬಿಟ್ಟು ಇತರ ವ್ಯಕ್ತಿಯೊಂದಿಗೆ ‘ಲಿವ್ – ಇನ್ ರಿಲೇಶನ್ ಶಿಪ್’ ನಲ್ಲಿ ವಾಸಿಸುತ್ತಿರುವ ವಿವಾಹಿತ ಮಹಿಳೆಗೆ ಭದ್ರತೆ ನೀಡಲು ಅಲಾಹಾಬಾದ ಉಚ್ಚನ್ಯಾಯಾಲಯವು ನಿರಾಕರಿಸಿದೆ. ಮಹಿಳೆಯು ಮತ್ತು ಆಕೆಯ ‘ಲಿವ್ ಇನ್’ನಲ್ಲಿರುವ ಸಂಗಾತಿ(ಪ್ರಿಯಕರನೊಂದಿಗೆ ವಾಸಿಸುತ್ತಿದ್ದ)ಯು ಭದ್ರತೆ ನಿಡುವಂತೆ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

ದೇಶಕ್ಕೆ ಇಂದು ಛತ್ರಪತಿ ಶಿವಾಜಿ ಮಹಾರಾಜರ ರಾಷ್ಟ್ರೀಯ ವಿಚಾರಗಳ ಅತ್ಯಂತ ಅವಶ್ಯಕತೆ ಇದೆ !- ಶಿವಶಾಹೀರ ಬಾಬಾಸಾಹೇಬ ಪುರಂದರೆ

ಪುಣೆ ಶ್ರಮಿಕ ಪತ್ರಕಾರ ಸಂಘದಿಂದ ಆಗಸ್ಟ ೪ ರಂದು ಆಯೋಜಿಸಲಾಗಿದ್ದ ಸಂದರ್ಶನದಲ್ಲಿ ಶಿವಶಾಹೀರ ಬಾಬಾಸಾಹೇಬ ಪುರಂದರೆ ಇವರು ಮುಂದಿನಂತೆ ಹೇಳಿದರು. ನಾವು ಇತಿಹಾಸದೊಂದಿಗೆ ಬದುಕುತ್ತಿರುತ್ತೇವೆ. ಆದುದರಿಂದ ಇತಿಹಾಸವು ಎಂದಿಗೂ ಹಳೆಯದಾಗುವುದಿಲ್ಲ,

ಹರಿದ್ವಾರ ಕುಂಭಮೇಳದಲ್ಲಿನ ನಕಲಿ ಕೊರೊನಾ ಪರೀಕ್ಷಣೆ ಪ್ರಕರಣದಲ್ಲಿ ಈಡಿಯಿಂದ ೪ ರಾಜ್ಯಗಳಲ್ಲಿ ಮುತ್ತಿಗೆ

ಉತ್ತರಾಖಂಡದ ಹರಿದ್ವಾರದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ ಕುಂಭಮೇಳದ ಆಯೋಜನೆಯ ಸಮಯದಲ್ಲಿ ಕೊರೋನಾ ಪರೀಕ್ಷಣೆಯ ಬಗ್ಗೆ ನಡೆದ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರ್ಯನಿರ್ವಾಹಕ ನಿರ್ದೇಶನಾಲಯವು ಇಲ್ಲಿಯ ಕೆಲವು ಪೆಥಾಲಾಜಿ ಪ್ರಯೋಗಶಾಲೆಗಳ ಮೇಲೆ ದಾಳಿ ನಡೆಸಿದೆ.

ಗಣಪತಿ ದೇವಸ್ಥಾನದ ಮೇಲೆ ಆಕ್ರಮಣ ಮಾಡಿದವರನ್ನು ತಕ್ಷಣ ಬಂಧಿಸಿ ಹಾಗೂ ಮಂದಿರದ ದುರಸ್ತಿ ಮಾಡಿ ! – ಪಾಕ್ ನ ಸರ್ವೋಚ್ಚ ನ್ಯಾಯಾಲಯದ ಆದೇಶ

ಗಣಪತಿ ದೇವಸ್ಥಾನದ ಮೇಲೆ ಆಕ್ರಮಣ ಮಾಡುವಂತೆ ಯಾರು ಜನರನ್ನು ಉದ್ರೇಕಿಸುವ ಕಾರ್ಯ ಮಾಡಿದ್ದಾರೆಯೋ; ಹಾಗೆಯೇ ಯಾರು ಮಂದಿರದ ಮೇಲೆ ಆಕ್ರಮಣ ಮಾಡಿದ್ದಾರೆಯೋ ಅವರನ್ನೆಲ್ಲ ತಕ್ಷಣ ಬಂಧಿಸಬೇಕು.

ಅನಾಮಿಕ(ಬೇನಾಮಿ) ಕರೆಯ ಮೂಲಕ ಮುಂಬೈಯಲ್ಲಿ ನಾಲ್ಕು ಕಡೆಗಳಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿದ ಇಬ್ಬರು ಯುವಕರ ಬಂಧನ !

ಅಗಸ್ಟ್ ೬ರ ತಡರಾತ್ರಿ ರೈಲ್ವೇ ಪೊಲೀಸರಿಗೆ ಅಜ್ಞಾತ ಕರೆಮಾಡಿ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ, ದಾದರ್, ಭಾಯಖಳಾ ಹಾಗೂ ನಟ ಅಮಿತಾಬ ಬಚ್ಚನ್ ರವರ ಮನೆಯ ಹೊರಗೆ ಬಾಂಬ್ ಇಡಲಾಗಿದೆ ಎಂದು ಸುಳ್ಳು ಹೇಳಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಹಿಂದೂ ರಾಷ್ಟ್ರ ಸ್ಥಾಪನೆಗೆ ‘ಹಿಂದ ಸಾಮ್ರಾಜ್ಯ ಪಾರ್ಟಿ’ ಎಂಬ ರಾಜಕೀಯ ಪಕ್ಷ ಸ್ಥಾಪನೆ!

ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿಶಂಕರ ಜೈನ್ ಅವರ ಅಧ್ಯಕ್ಷತೆಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಹಿಂದ್ ಸಾಮ್ರಾಜ್ಯ ಪಾರ್ಟಿ’ ಎಂಬ ಪಕ್ಷವು ಅಧಿಕೃತವಾಗಿ ಸ್ಥಾಪನೆಯಾಗಿದೆ ಎಂದು ಘೋಷಿಸಲಾಯಿತು.

ಜಾರ್ಖಂಡ್‌ನ ಜಮ್‌ಶೆದಪುರದ ದೇವಸ್ಥಾನದಲ್ಲಿ ಯೇಸು ಕ್ರಿಸ್ತನ ಚಿತ್ರವನ್ನು ಹಾಕಿದ್ದರಿಂದ ಉದ್ವಿಗ್ನ ಸ್ಥಿತಿ!

ಸ್ಥಳೀಯ ಬಿಷ್ಟಪುರ ಗುರುದ್ವಾರ ಪ್ರದೇಶದಲ್ಲಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಏಸು ಕ್ರಿಸ್ತನ ಚಿತ್ರವನ್ನು ಹಾಕಿದ್ದರಿಂದ ಉದ್ವಿಗ್ನತೆ ಉಂಟಾಯಿತು. ಈ ಚಿತ್ರವನ್ನು ದೇವಸ್ಥಾನ ಸಮಿತಿಯ ಓರ್ವ ಸಂಚಾಲಕರು ಹಾಕಿದ್ದರು.