ಅಮೆರಿಕವು ಇರಾನ್‌ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!

  • ಅಮೆರಿಕದ ದಾಳಿಯಲ್ಲಿ ಹಡಗಿನಲ್ಲಿದ್ದ ೩ ಭಾರತೀಯರು ಸಾವನ್ನಪ್ಪಿದ್ದರೂ ಟ್ರಂಪ್ ಅವರ ನಿರ್ಲಜ್ಜ ಹೇಳಿಕೆ

  • ಭಾರತದ ತೀವ್ರ ಪ್ರತಿಭಟನೆ ಮುಂದುವರಿಕೆ

ವಾಷಿಂಗ್ಟನ್ (ಅಮೆರಿಕ) – ಅಮೆರಿಕವು ಇರಾನ್‌ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ, ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಒಮಾನ್ ಸಮೀಪದ ಸಮುದ್ರದಲ್ಲಿದ್ದ ಎಂ.ಟಿ. ಸೆಟೆಬೆಲ್ಲೊ ಹಡಗಿನ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ೩ ಭಾರತೀಯ ನಾಗರಿಕರು ಇತ್ತೀಚೆಗೆ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತವು ಅಮೆರಿಕವನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದೆ. ಇದರ ಮೇಲೆ ಡೊನಾಲ್ಡ್ ಟ್ರಂಪ್ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. ಟ್ರಂಪ್ ಮಾತನಾಡುತ್ತಾ, ಹಾರ್ಮುಜ್ ಮೂಲಕ ಹಾದುಹೋಗುತ್ತಿದ್ದ ಭಾರತೀಯ ಸಿಬ್ಬಂದಿ ಇದ್ದ ಹಡಗುಗಳ ಮೇಲೆ ಇರಾನ್ ಡ್ರೋನ್ ಮೂಲಕ ದಾಳಿ ಮಾಡಲು ಪ್ರಯತ್ನಿಸಿತ್ತು; ಅಮೆರಿಕದ ಸೇನೆಯು ಈ ಪ್ರಯತ್ನವನ್ನು ವಿಫಲಗೊಳಿಸಿತು ಎಂದು ಹೇಳಿದರು. ಇತ್ತೀಚೆಗೆ ಒಮಾನ್ ಕೊಲ್ಲಿಯಲ್ಲಿ ಎಂ.ಟಿ. ಮಾರಿವೆಕ್ಸ್, ಎಂ.ಟಿ. ಸೆಟೆಬೆಲ್ಲೊ ಮತ್ತು ಎಂ.ಟಿ. ಜಲವೀರ್ ಎಂಬ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಗಳಿಂದಾಗಿ ಭಾರತೀಯ ಸಿಬ್ಬಂದಿಗೆ ಭಾರಿ ಸಂಕಷ್ಟ ಎದುರಾಗಿತ್ತು.

ಇರಾನ್‌ನಿಂದ ಟ್ರಂಪ್ ಹೇಳಿಕೆ ನಿರಾಕರಣೆ!

ಇರಾನ್ ಟ್ರಂಪ್ ಅವರ ಹೇಳಿಕೆಯನ್ನು ತಳ್ಳಿಹಾಕಿ, ಭಾರತೀಯ ನಾಗರಿಕರಿದ್ದ ಯಾವುದೇ ಹಡಗಿನ ಮೇಲೆ ತಾವು ಡ್ರೋನ್ ಮೂಲಕ ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಂಪಾದಕೀಯ ನಿಲುವು

ಮೂವರು ಭಾರತೀಯರ ಪ್ರಾಣವನ್ನು ಬಲಿಪಡೆದು, ಮೇಲಾಗಿ ಹಸಿಸುಳ್ಳು ಹೇಳುತ್ತಿರುವ ಟ್ರಂಪ್ ಅವರಿಗೆ ಭಾರತ ಹೇಗೆ ಪಾಠ ಕಲಿಸಲಿದೆ?