ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಬಲವಂತದ ಮತಾಂತರವನ್ನು ತಡೆಗಟ್ಟಲು ರಾಜ್ಯಪಾಲರ ಸಚಿವಾಲಯವು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪಿಸಲು ನಿರ್ದೇಶನ ನೀಡಿದೆ.

ಕುಲಪತಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ. ಸುಧೀರ ಎಮ್. ಬೊಬಡೆ ಅವರು ಹೊರಡಿಸಿರುವ ಪತ್ರದ ಪ್ರಕಾರ, ಆಮಿಷಗಳು ಅಥವಾ ಮಾನಸಿಕ ಒತ್ತಡದ ಮೂಲಕ ವಿದ್ಯಾರ್ಥಿಗಳನ್ನು ಮತಾಂತರಗೊಳಿಸಲಾಗುತ್ತಿದೆ ಎಂಬ ದೂರುಗಳು ಪದೇ ಪದೇ ಬಂದಿವೆ. ಇದು ಸ್ವೀಕಾರಾರ್ಹವಲ್ಲ. ಆದ್ದರಿಂದ ವಿದ್ಯಾರ್ಥಿ ಕಲ್ಯಾಣ ಘಟಕ ಮತ್ತು ಕಟ್ಟರವಾದ ವಿರೋಧಿ ವ್ಯವಸ್ಥೆಯನ್ನು ಹೆಚ್ಚು ಸಕ್ಷಮಗೊಳಿಸುವುದು ಅಗತ್ಯವಾಗಿದೆ. ಈ ಘಟನೆಗಳಲ್ಲಿ ತಪ್ಪಿತಸ್ಥರೆಂದು ಕಂಡುಬರುವವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮಾರ್ಗಸೂಚಿ ಸಭೆಗಳು, ಪೋಷಕರು-ಶಿಕ್ಷಕರ ಸಭೆಗಳು ಮತ್ತು ವಿಚಾರಗೋಷ್ಠಿಗಳನ್ನು ಆಯೋಜಿಸುವಂತೆಯೂ ನಿರ್ದೇಶನ ನೀಡಲಾಗಿದೆ.