ಅಶ್ಲೀಲ ಹಾಸ್ಯಕ್ಕೆ ಪ್ರಚೋದನೆ ನೀಡಿದ ಹಾಸ್ಯನಟ ಪ್ರಣೀತ್ ಮೋರೆ ವಿರುದ್ಧ ಪ್ರಕರಣ ದಾಖಲು !

ಮಹಿಳೆಯರ ಅಪಮಾನ ಮತ್ತು ಶವದ ಅಂಗಾಂಗಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಇಬ್ಬರಿಗೆ ಸಮನ್ಸ್ !

ಹಾಸ್ಯನಟ ಪ್ರಣೀತ್ ಮೋರೆ

ಮುಂಬಯಿ – ಸ್ಟ್ಯಾಂಡ್‌ಅಪ್ ಕಾಮೆಡಿಯನ್ ಪ್ರಣೀತ್ ಮೋರೆ ಅವರ ಕಾರ್ಯಕ್ರಮದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರಲ್ಲಿ ಹಿಮಾಂಶು ಜಾಂಗ್ರಾ ಎಂಬ ಯುವಕ, “ನಾನು ಒಬ್ಬ ಯುವತಿಯೊಂದಿಗೆ ಹೊರಗೆ ಹೋಗಿದ್ದೆ. ಅಲ್ಲಿ ನಾನು ಚಿಕನ್ ಬಿರಿಯಾನಿಗಾಗಿ 370 ರೂಪಾಯಿ ಖರ್ಚು ಮಾಡಿದೆ. ನಂತರ ಆ ಹಣವನ್ನು ನಾನು ವಸೂಲಿ ಮಾಡಲಿದ್ದೇನೆ” ಎಂದು ಹೇಳಿದ್ದನು. ಯುವಕನು ದ್ವಂದ್ವಾರ್ಥದ ಹೇಳಿಕೆ ನೀಡಿ ಮಹಿಳೆಯರನ್ನು ಅಪಮಾನಿಸಿದ್ದನು. ಇದಕ್ಕೆ ಪ್ರಣೀತ್ ಸೇರಿದಂತೆ ಕಾರ್ಯಕ್ರಮದಲ್ಲಿದ್ದ ಜನರು ನಕ್ಕಿದ್ದರು. ಮತ್ತೊಂದು ವಿಡಿಯೋದಲ್ಲಿ ಡಾ. ಸೇಜಲ ಪವಾರ್ ಎಂಬಾಕೆ ಪುರುಷ ರೋಗಿಯ ಮರಣದ ನಂತರ ಅವರ ಶವದ ಅಂಗಾಂಗದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಳು. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಸೈಬರ್ ಪೊಲೀಸರು ಪ್ರಣೀತ್ ಮೋರೆ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಣೀತ್ ಮೋರೆ, ಹಿಮಾಂಶು ಜಾಂಗ್ರಾ ಮತ್ತು ಡಾ. ಸೇಜಲ್ ಪವಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ.

ಎಲ್ಲೆಡೆಯಿಂದ ತೀವ್ರ ಟೀಕೆಗಳು ವ್ಯಕ್ತವಾದ ನಂತರ ಡಾ. ಸೇಜಲ ಪವಾರ್ ಕ್ಷಮೆಯಾಚಿಸಿದ್ದಾರೆ. (ರೋಗಿಯ ಶವದ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಇಂತಹ ಆಧುನಿಕ ವೈದ್ಯರ ಪರವಾನಗಿಯನ್ನೇ ಶಾಶ್ವತವಾಗಿ ರದ್ದುಗೊಳಿಸಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

  • ಮಹಿಳೆಯರನ್ನು ಅವಮಾನಿಸುವ, ಹಾಗೂ ಅಶ್ಲೀಲ ಹೇಳಿಕೆಗಳನ್ನು ನೀಡುವ ಇಂತಹ ಹಾಸ್ಯ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲೇಬೇಕು !
  • ಇಂತಹ ಕಲಾವಿದರ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಯುವ ಪೀಳಿಗೆಯು ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವುದರ ಸಂಕೇತವೇ ಆಗಿದೆ !