ಬಾಂಗ್ಲಾದೇಶದ ಕಟ್ಟರವಾದಿಗಳಿಂದ ನಡೆಯುತ್ತಿರುವ ಅಪಪ್ರಚಾರ
ಬಾಂಗ್ಲಾದೇಶದ ಗಾಯಬಾಂಧಾ ಜಿಲ್ಲೆಯ ಘಟನೆ
53 ಅಡಿ ಎತ್ತರದ ಪ್ರಭು ಶ್ರೀರಾಮನ ಮೂರ್ತಿ ನಿರ್ಮಾಣದೊಂದಿಗೆ 144 ಮೂರ್ತಿಗಳ ಸಿದ್ಧತೆ ನಡೆಯುತ್ತಿತ್ತು
ಭಾರತದ ಗುಪ್ತಚರ ಸಂಸ್ಥೆಯ ಬೆಂಬಲದೊಂದಿಗೆ ನಿರ್ಮಾಣ ಕಾರ್ಯ ನಡೆದಿದೆ ಎಂದು ಆರೋಪ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶ ಹಾಗೂ ಫ್ರಾನ್ಸ್, ಅಮೆರಿಕಾದಿಂದ ಕಟ್ಟರ ಇಸ್ಲಾಮಿಕ್ ಗುಂಪುಗಳು ರಂಗಪುರ ವಿಭಾಗದ ಗಾಯಬಾಂಧಾ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ‘ಸನಾತನ ಧಾರ್ಮಿಕ ಸಂಕುಲ’ವನ್ನು ಧ್ವಂಸಗೊಳಿಸಬೇಕೆಂದು ಒತ್ತಾಯಿಸುತ್ತಿವೆ. ಈ ಒತ್ತಡಕ್ಕೆ ಮಣಿದ ಬಾಂಗ್ಲಾದೇಶ ಸರಕಾರವು ಈ ಸಂಕುಲದ ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ ಆದೇಶಿಸಿದೆ.
ಇಲ್ಲಿನ ಭಗವಾನ ಶ್ರೀರಾಮನ 53 ಅಡಿ ಎತ್ತರದ ಮೂರ್ತಿಯ ಔಪಚಾರಿಕ ಉದ್ಘಾಟನೆಯು ನವೆಂಬರ್ 25, 2025 ರಂದು ರಾಜಶಾಹಿಯಲ್ಲಿರುವ ಭಾರತದ ಸಹಾಯಕ ಹೈಕಮಿಷನರ್ ಮನೋಜ ಕುಮಾರ ಅವರ ಹಸ್ತದಿಂದ ನಡೆದಿತ್ತು. ಇಲ್ಲಿ ಶ್ರೀರಾಮ ಮತ್ತು ಶಿವನ (ಎತ್ತರ 28 ಅಡಿ) ಮೂರ್ತಿಗಳು ಸೇರಿದಂತೆ ದೇವತೆಗಳ 144 ಮೂರ್ತಿಗಳನ್ನು ಸ್ಥಾಪಿಸಲು ಯೋಜಿಸಲಾಗಿತ್ತು. ಇದಕ್ಕೆ ಕಟ್ಟರವಾದಿ ಮುಸ್ಲಿಮರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಕುರಿತು ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ಬಾಂಗ್ಲಾದೇಶದ ಹಿಂದೂಗಳಿಂದ ಮೊದಲೇ ಮಾಹಿತಿ ಸಿಕ್ಕಿತ್ತು.
ಈ ಕುರಿತು ರಾಜಧಾನಿ ಢಾಕಾದ ‘ವೀಕ್ಲಿ ಬ್ಲಿಟ್ಜ್’ನ ಹಿರಿಯ ಸಂಪಾದಕರಾದ ಸಲಾಹುದ್ದೀನ್ ಶೋಯೆಬ್ ಚೌಧರಿ ಅವರು ಈಗಾಗಲೇ ಲೇಖನವೊಂದನ್ನು ಬರೆದು ವಿವರವಾದ ಮಾಹಿತಿ ನೀಡಿದ್ದಾರೆ. ಸ್ಥಳೀಯ ದಾನಿ ಹರಿದಾಸ್ ಬಾಬು ಅವರ ನೇತೃತ್ವದಲ್ಲಿ ಪ್ರಾರಂಭವಾದ ಈ ಯೋಜನೆಯು ಕ್ರಮೇಣ ಒಂದು ದೊಡ್ಡ ಧಾರ್ಮಿಕ ಮತ್ತು ವಾಸ್ತುಶಿಲ್ಪದ ಸಂಕುಲವಾಗಿ ಅಭಿವೃದ್ಧಿಗೊಂಡಿತು ಎಂದು ಅವರು ಹೇಳಿದ್ದಾರೆ.
बांग्लादेश में हिंदू मंदिर के खिलाफ इस्लामी चरमपंथियों के अभियान ने नई चिंताएं खड़ी कर दी हैं: भगवान शिव, भगवान कृष्ण और भगवान राम की मूर्तियों को निशाना बनाया गया है | @DelhiiteMohit | @News18India https://t.co/0pwy14wgnu
— Salah Uddin Shoaib Choudhury (@salah_shoaib) June 9, 2026
ಜೂನ್ 19 ರಂದು ‘ಸನಾತನ ಧರ್ಮ ಸಂಕುಲ’ದ ಮೂರ್ತಿಗಳನ್ನು ನಾಶಪಡಿಸಲು ಭಯೋತ್ಪಾದಕರ ಪ್ರಚೋದನೆ!ಚೌಧರಿ ಅವರು ಭಾರತೀಯ ಮಾಧ್ಯಮಗಳಿಗೆ ಮನವಿ ಮಾಡುತ್ತಾ, ದಯವಿಟ್ಟು ಬಾಂಗ್ಲಾದೇಶದಲ್ಲಿರುವ ಭಗವಾನ್ ಶ್ರೀರಾಮ, ಭಗವಾನ್ ಶಿವ ಮತ್ತು ಭಗವಾನ್ ಶ್ರೀಕೃಷ್ಣನ ಮೂರ್ತಿಗಳನ್ನು ರಕ್ಷಿಸಿ! ಪಾಕಿಸ್ತಾನದ ‘ಐ.ಎಸ್.ಐ.’ನ ನೇರ ಬೆಂಬಲದೊಂದಿಗೆ ಬಾಂಗ್ಲಾದೇಶದ ಇಸ್ಲಾಮಿಗರು ಮತ್ತು ಜಿಹಾದಿಗಳು ‘ಸನಾತನ ಸಂಕುಲ’ದ ನಿರ್ಮಾಣವನ್ನು ತಡೆಯುವಲ್ಲಿ ಈಗಾಗಲೇ ಯಶಸ್ವಿಯಾಗಿದ್ದಾರೆ. ಈಗ ಜೂನ್ 19 ರಂದು ಆ ಸ್ಥಳದ ಮೇಲೆ ಆಕ್ರಮಣ ನಡೆಸಿ ಈ ಮೂರ್ತಿಗಳನ್ನು ಧ್ವಂಸಗೊಳಿಸಲು ಸಂಚು ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶದ ಇಸ್ಲಾಮಿಗರು ಸಾಮಾಜಿಕ ಮಾಧ್ಯಮಗಳ ಮೂಲಕ ಈ ಮೂರ್ತಿಗಳ ‘ಶಿರಚ್ಛೇದ’ ಮಾಡಲು ಕರೆ ನೀಡುತ್ತಿದ್ದಾರೆ. ಕೆಲವರು ಅದಕ್ಕಿಂತಲೂ ಮುಂದೆ ಹೋಗಿ ‘ಮೂರ್ತಿಗಳ ಮೇಲೆ ಹತ್ತುವುದು’ ಮತ್ತು ‘ಧ್ವಂಸಗೊಳಿಸುವ ಮುನ್ನ ಅದರ ಮೇಲೆ ಮೂತ್ರ ವಿಸರ್ಜನೆ ಮಾಡುವುದು’ ಮುಂತಾದ ಕೃತ್ಯಗಳನ್ನು ಎಸಗಲು ತಮ್ಮ ಸಹಚರರಿಗೆ ಪ್ರಚೋದನೆ ನೀಡುತ್ತಿದ್ದಾರೆ. |
ಈ ಕುರಿತು ‘ಸನಾತನ ಪ್ರಭಾತ’ದ ಪ್ರತಿನಿಧಿಯು ಬಾಂಗ್ಲಾದೇಶದ ಗಾಜೀಪುರದ ಕೆಲವು ಹಿಂದುತ್ವನಿಷ್ಠರೊಂದಿಗೆ ಚರ್ಚಿಸಿದಾಗ, ಈ ಸಂಕುಲದ ಮೇಲೆ 4 ಸಾವಿರದಿಂದ 5 ಸಾವಿರ ಮುಸ್ಲಿಮರ ಗುಂಪು ದಾಳಿ ನಡೆಸಿ ಮೂರ್ತಿಗಳನ್ನು ಧ್ವಂಸಗೊಳಿಸಬಹುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಹೇಳಿದರು.
ದೇಶಾದ್ಯಂತ ಲಕ್ಷಾಂತರ ಮಸೀದಿಗಳಿರುವಾಗ ಒಂದು ಹಿಂದೂ ಸಂಕುಲಕ್ಕೆ ವಿರೋಧವೇಕೆ? – ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸ್ರೀನ್

ಸರಕಾರದ ಈ ಆದೇಶದ ವಿರುದ್ಧ ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸ್ರೀನ್ ಧ್ವನಿ ಎತ್ತಿದ್ದಾರೆ. ಅವರು ಮಾತನಾಡಿ, ಬಾಂಗ್ಲಾದೇಶದಲ್ಲಿ ಲಕ್ಷಾಂತರ ಮಸೀದಿಗಳಿವೆ. ದೇಶಾದ್ಯಂತ ಹೊಸ ಮಸೀದಿಗಳ ನಿರ್ಮಾಣ ಕಾರ್ಯವೂ ನಿರಂತರವಾಗಿ ನಡೆಯುತ್ತಿರುತ್ತದೆ. ಹಾಗಿರುವಾಗ ಕೇವಲ ಒಂದು ಶ್ರೀರಾಮ ಮಂದಿರ ಅಥವಾ ಭಗವಾನ್ ಶ್ರೀರಾಮನ ಮೂರ್ತಿಯ ಸ್ಥಾಪನೆಗೆ ಇಷ್ಟೊಂದು ವಿರೋಧವೇಕೆ? ಧಾರ್ಮಿಕ ಸ್ವಾತಂತ್ರ್ಯವು ನಿಜವಾಗಿಯೂ ಎಲ್ಲರಿಗೂ ಇದ್ದರೆ, ಅದು ಕೇವಲ ಬಹುಸಂಖ್ಯಾತರಿಗೆ ಮಾತ್ರವಲ್ಲ, ಅಲ್ಪಸಂಖ್ಯಾತರಿಗೂ ಸಮಾನವಾಗಿ ಅನ್ವಯಿಸಬೇಕು ಎಂದರು.
ಅವರು ಮುಂದುವರಿದು, ರಾಮಮಂದಿರದ ವಿರುದ್ಧ ನೀಡಲಾಗುತ್ತಿರುವ ಬೆದರಿಕೆಗಳು, ಪ್ರಚೋದನಾಕಾರಿ ಹೇಳಿಕೆಗಳು ಮತ್ತು ದ್ವೇಷಪೂರಿತ ಪ್ರಚಾರಗಳು ತೀವ್ರ ಕಳವಳಕಾರಿಯಾಗಿವೆ. ಕೇವಲ ಒಂದು ಪ್ರಾರ್ಥನಾ ಮಂದಿರ ತಮಗೆ ಇಷ್ಟವಿಲ್ಲ ಎಂಬ ಕಾರಣಕ್ಕೆ ಅದನ್ನು ಕೆಡವುವ ಹಕ್ಕು ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ಸಿಗುವುದಿಲ್ಲ. ಕಾನೂನಿನ ಆಡಳಿತವಿರುವ ದೇಶದಲ್ಲಿ ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಹಿಂಸಾಚಾರ ಅಥವಾ ಅನಾಗರಿಕತೆಯಿಂದ ಬಗೆಹರಿಸಲಾಗುವುದಿಲ್ಲ ಎಂದರು.
ಪಲಾಶಬಾರಿಯಲ್ಲಿ ಹಿಂದೂ ದೇವಾಲಯಗಳು ಮತ್ತು ಮೂರ್ತಿಗಳ ಧ್ವಂಸದ ಇತಿಹಾಸವನ್ನು ಗಮನಿಸಿದರೆ ಈ ಪರಿಸ್ಥಿತಿಯು ವಿಶೇಷವಾಗಿ ಆತಂಕಕಾರಿಯಾಗಿದೆ ಎಂದು ನಸ್ರೀನ್ ಒತ್ತಿಹೇಳಿದರು. ಈ ಘಟನೆಗಳಿಂದಾಗಿ ಅಲ್ಲಿನ ಹಿಂದೂ ಅಲ್ಪಸಂಖ್ಯಾತ ಸಮುದಾಯವು ಅಸುರಕ್ಷತೆಯ ಭಾವನೆಯಿಂದ ಬಳಲುತ್ತಿದೆ. ಇಂಡೋನೇಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಮಲೇಷ್ಯಾ ಮತ್ತು ಒಮಾನ್ ನಂತಹ ಪ್ರಪಂಚದ ಹಲವು ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ದೊಡ್ಡ ಹಿಂದೂ ದೇವಾಲಯಗಳಿವೆ. ಆ ದೇಶಗಳಲ್ಲಿ ದೇವಾಲಯಗಳ ಅಸ್ತಿತ್ವವನ್ನು ದೇಶಕ್ಕೆ ಅಪಾಯ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾದರೆ ಬಾಂಗ್ಲಾದೇಶದಲ್ಲಿ ಒಂದು ದೇವಾಲಯದ ನಿರ್ಮಾಣವನ್ನು ಕೆಲವು ಮುಸ್ಲಿಮರು ಅಸ್ತಿತ್ವದ ಸಂಕಟವಾಗಿ ಏಕೆ ನೋಡುತ್ತಿದ್ದಾರೆ? ಎಂದು ತಸ್ಲಿಮಾ ಪ್ರಶ್ನಿಸಿದ್ದಾರೆ.
ಧಾರ್ಮಿಕ ಸಂಕುಲದ ವಿರುದ್ಧ ಕೇಳಿಬರುತ್ತಿರುವ ಗಂಭೀರ ಆರೋಪಗಳು!
೧. ಭಾರತೀಯ ಪ್ರಭಾವದ ತಥಾಕಥಿತ ವಿಸ್ತರಣೆ: ಬಾಂಗ್ಲಾದೇಶ ಸೇರಿದಂತೆ ಪಾಕಿಸ್ತಾನ, ಟರ್ಕಿ, ಫ್ರಾನ್ಸ್, ಅಮೆರಿಕ ಇತ್ಯಾದಿ ದೇಶಗಳ ಮತಾಂಧ ಮುಸ್ಲಿಂ ಗುಂಪುಗಳು ‘ಗಾಯಬಾಂಧಾ ಧಾರ್ಮಿಕ ಸಂಕುಲ’ಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಅಲ್ಲದೆ ಇದನ್ನು ‘ಭಾರತೀಯ ಪ್ರಭಾವದ ತಥಾಕಥಿತ ವಿಸ್ತರಣೆ’ ಎಂದು ಬಿಂಬಿಸುವ ಆನ್ ಲೈನ್ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ.
೨. ಭಾರತದ ಗುಪ್ತಚರ ಸಂಸ್ಥೆ ‘ರಾ’ ಹಣ ಒದಗಿಸಿದೆ: ಯಾವುದೇ ವಿಶ್ವಾಸಾರ್ಹ ಪುರಾವೆಗಳನ್ನು ನೀಡದೆ, ಯೋಜನೆಯ ಉಸ್ತುವಾರಿ ಹರಿಶ್ಚಂದ್ರ ತಾರೋನಿ ದಾಸ್ ಅವರಿಗೆ ಭಾರತೀಯ ಗುಪ್ತಚರ ಸಂಸ್ಥೆಗಳೊಂದಿಗೆ ನಂಟಿದೆ ಎಂದು ಆರೋಪಿಸಲಾಗುತ್ತಿದೆ. ಭಾರತದ ಗುಪ್ತಚರ ಸಂಸ್ಥೆ ‘ರಾ’ ಈ ಯೋಜನೆಗೆ ಧನಸಹಾಯ ನೀಡಿದೆ ಎಂದೂ ಆರೋಪಿಸಲಾಗುತ್ತಿದೆ.
೩. ‘ಇಸ್ಕಾನ್’ ವಿರುದ್ಧ ಅಪಪ್ರಚಾರ ಮಾಡುವ ಗುಂಪುಗಳೇ ಇವು: ವಿಶೇಷವೆಂದರೆ, ಇದೇ ಇಸ್ಲಾಮಿಕ್ ಗುಂಪುಗಳು ಬಾಂಗ್ಲಾದೇಶದಲ್ಲಿ ‘ಇಸ್ಕಾನ್’ ಸಂಸ್ಥೆಯ ವಿರುದ್ಧ ಅಪಪ್ರಚಾರ ಮಾಡುವುದರ ಜೊತೆಗೆ, ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಅವರ ಬಂಧನದಲ್ಲೂ ಪ್ರಮುಖ ಪಾತ್ರ ವಹಿಸಿವೆ ಎಂದು ಆರೋಪಿಸಲಾಗಿದೆ.
೪. ಈ ಗುಂಪುಗಳು ಭಾರತದ ವಿರುದ್ಧ ಜಿಹಾದ್ ಘೋಷಿಸಿ ‘ಗಜ್ವಾ-ಎ-ಹಿಂದ್’ (ಭಾರತದ ಇಸ್ಲಾಮೀಕರಣ) ಅನ್ನು ಸಾಕಾರಗೊಳಿಸಲು ಹಾಗೂ ಬಾಂಗ್ಲಾದೇಶದ ಹಿಂದೂಗಳ ಸಾಮೂಹಿಕ ಮಾರಣಹೋಮವನ್ನು ಪ್ರಾರಂಭಿಸಲು ಕರೆ ನೀಡುತ್ತಿವೆ.
ಚೌಧರಿ ಅವರು ತಮ್ಮ ಲೇಖನದಲ್ಲಿ ಆತಂಕ ವ್ಯಕ್ತಪಡಿಸುತ್ತಾ, ಸಕಾಲದಲ್ಲಿ ಕ್ರಮ ಕೈಗೊಳ್ಳದಿದ್ದರೆ ಬಾಂಗ್ಲಾದೇಶವು ಹಿಂದೂಗಳ ಕಸಾಯಿಖಾನೆಯಾಗಿ ಬದಲಾಗಬಹುದು ಮತ್ತು ಹಿಂಸಾಚಾರದ ಹೊಸ ಅಲೆ ಅಥವಾ ಜನಾಂಗೀಯ ಹತ್ಯೆಯು ಯಾವುದೇ ಕ್ಷಣದಲ್ಲಿ ಪ್ರಾರಂಭವಾಗಬಹುದು. ಬಾಂಗ್ಲಾದೇಶ ಸರಕಾರ ನಿರ್ಮಾಣ ಕಾರ್ಯವನ್ನು ನಿಲ್ಲಿಸಲು ಆದೇಶಿಸಿದ ನಂತರ, ಈಗ ಹಿಂದೂಗಳ ವಿರುದ್ಧ ದಾಳಿಗಳು ಪ್ರಾರಂಭವಾದರೆ ಆಶ್ಚರ್ಯಪಡಬೇಕಾಗಿಲ್ಲ ಎಂದು ಈಗ ಹೇಳಲಾಗುತ್ತಿದೆ.
ದೇವಸ್ಥಾನದ ನಿರ್ಮಾಣವನ್ನು ನೆಪವಾಗಿಸಿಕೊಂಡು ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ!

ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಭಯೋತ್ಪಾದಕರ ಮುಸ್ಲಿಮರು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಹೇಳುತ್ತಿರುವುದೆಂದರೆ,
1. ಹಿಂದುತ್ವನಿಷ್ಠರು ‘ಅಖಂಡ ಭಾರತ’ ನಿರ್ಮಿಸುವ ಕನಸು ಕಾಣುತ್ತಿದ್ದಾರೆ. ಅದನ್ನು ಸಾಧಿಸಲು ಅವರಿಗೆ ಸಾಧ್ಯವಾಗದಿದ್ದರೂ, ಬಾಂಗ್ಲಾದೇಶವನ್ನು ವಶಪಡಿಸಿಕೊಳ್ಳುವ ಕನಸನ್ನು ನನಸಾಗಿಸಲು ಅವರು ಖಂಡಿತವಾಗಿಯೂ ಪ್ರಯತ್ನಿಸುತ್ತಾರೆ. ಸನಾತನ ಸಂಕುಲವು ಉತ್ತರ ಬಂಗಾಳದಲ್ಲಿ ಭಾರತದ ‘ಚಿಕನ್ ನೆಕ್ ಕಾರಿಡಾರ್’ಗೆ ತೀರಾ ಹತ್ತಿರದಲ್ಲಿಯೇ ಏಕೆ ಇರಬೇಕು? 22 ಕೋಟಿ ಟಾಕಾ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಂಕುಲದಲ್ಲಿ, ದೇಶದ ಅತಿ ದೊಡ್ಡ ಶ್ರೀರಾಮನ ಮೂರ್ತಿ (53 ಅಡಿ), ಶಿವನ ಮೂರ್ತಿ (28 ಅಡಿ ಎತ್ತರ) ಮತ್ತು 144 ದೇವತೆಗಳ ಮೂರ್ತಿಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ.
2. ಶೇಕಡಾ 6 ರಷ್ಟಿರುವ ಹಿಂದೂ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುತ್ತಾ ಅವರು ಬಾಂಗ್ಲಾದೇಶದ ಶೇಕಡಾ 93 ರಷ್ಟಿರುವ ಮುಸ್ಲಿಂ ಬಹುಸಂಖ್ಯಾತರಿಗೆ ಸವಾಲು ಹಾಕುತ್ತಿದ್ದಾರೆ. ಆದರೆ ಇಲ್ಲಿ ನಾವು ಮುಸ್ಲಿಮರು ಮಾತ್ರ ಗಾಢ ನಿದ್ರೆಯಲ್ಲಿ ‘ಗಜ್ವಾ-ಎ-ಹಿಂದ್’ ಕನಸು ಕಾಣುತ್ತಿದ್ದೇವೆ! ನಿಜವಾಗಿಯೂ ಈ ದೇಶದ ಮುಸ್ಲಿಮರ ಹಣೆಬರಹದಲ್ಲಿ ದುರಾದೃಷ್ಟವೇ ಬರೆಯಲ್ಪಟ್ಟಿದೆ ಎಂದು ಅನಿಸುತ್ತಿದೆ!!!
3. ಭಾರತದಲ್ಲಿ ಯಾವ ರಾಮನ ಮಂದಿರಕ್ಕಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತೋ, ಅದೇ ರಾಮನ ಮೂರ್ತಿಯನ್ನು ಇಲ್ಲಿ ಮುಕ್ತ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ!
ಶೀಘ್ರದಲ್ಲೇ ಶಾಂತಿ ಒಪ್ಪಂದ: ಇರಾನ್ ಯುದ್ಧ ಅಂತ್ಯ! – ಟ್ರಂಪ್ ಹೇಳಿಕೆ
ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !
ಭಾರತದ ಮಹಾನ್ ಗಣಿತಜ್ಞ ‘ಆರ್ಯಭಟ’ ಅವರ ವಿಡಂಬನೆ; ಹಿಂದೂ ಜನಜಾಗೃತಿ ಸಮಿತಿಯಿಂದ ‘ಅಮೆಜಾನ್ ಇಂಡಿಯಾ’ಗೆ ಕಾನೂನು ನೋಟಿಸ್ !
ಬ್ರಿಟನ್ : ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪಾಕಿಸ್ತಾನಿ ಪ್ರಜೆ ಶೇರಾಜ್ ಮಲಿಕ್ಗೆ 10 ವರ್ಷಗಳ ಜೈಲು ಶಿಕ್ಷೆ!
ಯುವತಿಗೆ ಬಲವಂತವಾಗಿ ಗರ್ಭಪಾತ ಮಾತ್ರೆ ನೀಡಿದ ಮುಸ್ಲಿಂ ಯುವಕ; ಯುವತಿ ಸಾವು!
ರಾವಲಕೋಟ್ (ಪಾಕ್ ಆಕ್ರಮಿತ ಕಾಶ್ಮೀರ) : ಪಾಕ್ ಸೇನೆಯು ಮತ್ತೆ 16 ನಾಗರಿಕರನ್ನು ಕೊಂದಿದೆ !