ಕ್ಷಮೆಯಾಚಿಸುವಂತೆ ಒತ್ತಾಯ
ಮುಸಲ್ಮಾನ್ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ! - ಬಂಗಾಳದ ಶಿಕ್ಷಣಾಧಿಕಾರಿಗಳ ಭರವಸೆ

ಕೊಲಕಾತಾ (ಬಂಗಾಳ) – ರಾಜ್ಯದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿರುವ ಬಾರೂಯಿಪುರ ನಗರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಶಾಲೆಯೊಂದರ ಹತ್ತನೇ ತರಗತಿಯ ಹಿಂದೂ ವಿದ್ಯಾರ್ಥಿಯೊಬ್ಬ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದನೆಂಬ ಕಾರಣಕ್ಕೆ ಆತನ ಮುಸಲ್ಮಾನ ಸಹಪಾಠಿಗಳೇ ಶಾಲೆಯ ಆವರಣದಲ್ಲಿ ಆತನ ಮೇಲೆ ಅಮಾನುಷ ಹಲ್ಲೆ ಮಾಡಿದ್ದಾರೆ. ಜೂನ್ 4 ರಂದು ‘ಮದಾರತ್ ಪಾಪ್ಯುಲರ್ ಅಕಾಡೆಮಿ’ಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಜೂನ್ 10 ರಂದು ಶಾಲೆಯ ಆವರಣದಲ್ಲಿ ಹಿಂದೂಗಳು ತೀವ್ರ ಪ್ರತಿಭಟನೆ ನಡೆಸಿದರು. ಲಭ್ಯವಿರುವ ಮಾಹಿತಿಯ ಪ್ರಕಾರ, ಸಂತ್ರಸ್ತ ವಿದ್ಯಾರ್ಥಿ ದೇಬಾಜಿತ್ ಹಲದಾರನನ್ನು 10 ರಿಂದ 12 ಮುಸಲ್ಮಾನ್ ವಿದ್ಯಾರ್ಥಿಗಳ ಗುಂಪೊಂದು ಶಾಲೆಯ ಶೌಚಾಲಯಕ್ಕೆ ಎಳೆದೊಯ್ಯಿತು.
⚠️ "Punished for Saying 'Jai Shri Ram'?"
🚨 Baruipur, Bengal: A Hindu student was assaulted by Mu$lim classmates and forced to apologise for chanting "Jai Shri Ram."
The victim claims school authorities were informed but failed to act.
Following public outrage and protests,… pic.twitter.com/M64SYE9U3A
— Sanatan Prabhat (@SanatanPrabhat) June 12, 2026
ದೇಬಾಜಿತ್ ಇವರು,
1. ಹಲ್ಲೆ ಮಾಡಿದವರು ತಪ್ಪಾಗಿ ನನ್ನನ್ನು ಬೇರೆ ವಿದ್ಯಾರ್ಥಿ ಎಂದು ಭಾವಿಸಿದ್ದರು. ತರಗತಿಯಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಹುಡುಗನ ಮುಖ ಚಹರೆ ನನ್ನಂತೆಯೇ ಇತ್ತು.
2. ನನ್ನನ್ನು ಶೌಚಾಲಯದಲ್ಲಿ ಕೂಡಿ ಹಾಕಲಾಗಿತ್ತು. ಆ ಹುಡುಗ ನಾನಲ್ಲ ಎಂದು ಹೇಳಲು ಪ್ರಯತ್ನಿಸಿದರೂ, ನನ್ನ ಮಾತನ್ನು ಕಿಂಚಿತ್ತೂ ಕೇಳದೆ ನನ್ನಿಂದ ಬಲವಂತವಾಗಿ ಕ್ಷಮೆಯಾಚಿಸುವಂತೆ ಮಾಡಿದರು.
3. ಒಂದು ಕಡೆ ಕೆಲವರು ನನಗೆ ಹೊಡೆಯುತ್ತಿದ್ದರೆ, ಮತ್ತೊಂದೆಡೆ ಕೆಲವರು ಇದರ ವಿಡಿಯೋ ಮಾಡುತ್ತಿದ್ದರು.
4. ನಾನು ನನ್ನ ಶಿಕ್ಷಕರಿಗೂ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದೆ; ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ದೇಬಾಜಿತ್ ಕುಟುಂಬಸ್ಥರ ಅಳಲು !
ದೇಬಾಜಿತ್ ದೇಹದ ಹಲವು ಭಾಗಗಳಿಗೆ, ವಿಶೇಷವಾಗಿ ಕಿವಿಗೆ ಪೆಟ್ಟಾಗಿದ್ದು, ಆತನಿಗೆ ಕೇಳಿಸಿಕೊಳ್ಳಲು ತೊಂದರೆಯಾಗುತ್ತಿದೆ. ಆತನನ್ನು ಹಲವು ಬಾರಿ ವೈದ್ಯರ ಬಳಿ ಕರೆದೊಯ್ಯಲಾಗಿದ್ದು, ಆತ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾನೆ. ಭಯದಿಂದಾಗಿ ಆತ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾನೆ. ಬಾರೂಯಿಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಅಧಿಕೃತ ದೂರು ದಾಖಲಿಸಲಾಗಿದೆ. ಜೂನ್ 10 ರಂದು ಹಲ್ಲೆಯ ವಿಡಿಯೋ ಪ್ರಸಾರವಾದ ನಂತರ ಅನೇಕ ಹಿಂದೂ ಸಂಘಟನೆಗಳು ಮತ್ತು ಭಾಜಪ ಬೆಂಬಲಿಗರು ಶಾಲೆಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಆರೋಪಿ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಈ ವೇಳೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲೇ ಸಿಲುಕಿಕೊಂಡರು. ಆಕ್ರೋಶಗೊಂಡ ಪ್ರತಿಭಟನಾಕಾರರು ಹಲ್ಲೆಮಾಡಿದವರಲ್ಲಿ ಕೆಲವರನ್ನು ಥಳಿಸಿದ್ದಾರೆ ಎಂದೂ ತಿಳಿದುಬಂದಿದೆ.
ಮುಸಲ್ಮಾನ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲು ಶಾಲಾ ಆಡಳಿತ ಮಂಡಳಿಯಿಂದ ಉನ್ನತಾಧಿಕಾರಿಗಳಿಗೆ ಶಿಫಾರಸು !ಈ ಕುರಿತು ‘ಸನಾತನ ಪ್ರಭಾತ’ದ ಪ್ರತಿನಿಧಿಯು ದಕ್ಷಿಣ 24 ಪರಗಣ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿನಾಕಿ ದತ್ತಾ ಅವರನ್ನು ಸಂಪರ್ಕಿಸಿದಾಗ, ನಾವು ಈ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಏಕೆಂದರೆ ಈ ಪ್ರಕರಣ ಅಪ್ರಾಪ್ತ ವಯಸ್ಕರೊಂದಿಗೆ ಸಂಬಂಧಿಸಿದೆ. ಶಾಲಾ ಆಡಳಿತ ಮಂಡಳಿಯೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯ ಸೈಕತ್ ಪುರಕೈತ ಅವರು ಆರೋಪಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವಂತೆ ಕೋರಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಶಿಫಾರಸು ಮಾಡಿದ್ದಾರೆ. ಈ ಕುರಿತು ಮುಂದಿನ ಕ್ರಮ ಇನ್ನೂ ಆಗಿಲ್ಲ ಎಂದು ಪುರಕೈತ ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ಮಾಹಿತಿ ನೀಡಿದ್ದಾರೆ. ಶಾಲಾ ಆಡಳಿತ ಮಂಡಳಿಯು ಸಂತ್ರಸ್ತ ವಿದ್ಯಾರ್ಥಿಯ ಕುಟುಂಬ, ಆರೋಪಿ ವಿದ್ಯಾರ್ಥಿಗಳ ಪೋಷಕರು ಮತ್ತು ಪೊಲೀಸ್ ಅಧಿಕಾರಿಗಳ ಸಭೆ ಕರೆದಿತ್ತು ಎಂದು ಅವರು ತಿಳಿಸಿದರು. ಸಭೆಯ ವೇಳೆ ಆರೋಪಿಗಳ ಕುಟುಂಬಸ್ಥರು ಕ್ಷಮೆಯಾಚಿಸಿದರು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಹೆಸರು ಹೇಳದ ಷರತ್ತಿನ ಮೇಲೆ, ಮುಸಲ್ಮಾನ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”