ಗಣಪತಿ ದೇವಸ್ಥಾನದ ಮೇಲೆ ಆಕ್ರಮಣ ಮಾಡಿದವರನ್ನು ತಕ್ಷಣ ಬಂಧಿಸಿ ಹಾಗೂ ಮಂದಿರದ ದುರಸ್ತಿ ಮಾಡಿ ! – ಪಾಕ್ ನ ಸರ್ವೋಚ್ಚ ನ್ಯಾಯಾಲಯದ ಆದೇಶ

ಪಾಕಿಸ್ತಾನ ಸರಕಾರವು ಎಷ್ಟು ತತ್ಪರತೆಯಿಂದ ಈ ಆದೇಶವನ್ನು ಕಾರ್ಯಾಚರಣೆಗೆ ತರುತ್ತದೆ ಎಂಬುದರ ಬಗ್ಗೆ ಪಾಕ್ ನಲ್ಲಿನ ಹಿಂದೂಗಳು ಗಮನವಿರಿಸಿ ಈ ಬಗ್ಗೆ ಬೆಂಬೆತ್ತಬೇಕು – ಸಂಪಾದಕರು

ಇಸ್ಲಾಮಾಬಾದ್ (ಪಾಕಿಸ್ತಾನ) – ಗಣಪತಿ ದೇವಸ್ಥಾನದ ಮೇಲೆ ಆಕ್ರಮಣ ಮಾಡುವಂತೆ ಯಾರು ಜನರನ್ನು ಉದ್ರೇಕಿಸುವ ಕಾರ್ಯ ಮಾಡಿದ್ದಾರೆಯೋ; ಹಾಗೆಯೇ ಯಾರು ಮಂದಿರದ ಮೇಲೆ ಆಕ್ರಮಣ ಮಾಡಿದ್ದಾರೆಯೋ ಅವರನ್ನೆಲ್ಲ ತಕ್ಷಣ ಬಂಧಿಸಬೇಕು. ಹಾಗೆಯೇ ಮಂದಿರದ ದುರಸ್ತಿ ಮಾಡಬೇಕು ಎಂದು ಪಾಕಿಸ್ತಾನದಲ್ಲಿನ ಸರ್ವೋಚ್ಚ ನ್ಯಾಯಾಲಯವು ಸರಕಾರಕ್ಕೆ ಆದೇಶ ನೀಡಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಪಂಜಾಬ್ ಪ್ರಾಂತ್ಯದ ಮುಖ್ಯ ಸಚಿವ ಹಾಗೂ ಪೊಲೀಸ್ ಮಹಾನಿರೀಕ್ಷಕರಿಗೆ ೨೪ ಗಂಟೆಗಳ ಒಳಗೆ ನ್ಯಾಯಾಲಯದಲ್ಲಿ ಉಪಸ್ಥಿತರಿರಲು ಆದೇಶಿಸಿತ್ತು. ಪಂಜಾಬಿನ ಭೋಂಗ ನಗರದಲ್ಲಿ ಮತಾಂಧರು ಗಣಪತಿ ಮಂದಿರದ, ಹಾಗೆಯೇ ಶ್ರೀ ಗಣೇಶ ಮತ್ತು ಶಿವ-ಪಾರ್ವತಿಯರ ಮೂರ್ತಿಯನ್ನು ಧ್ವಂಸಗೊಳಿಸಿದ್ದರು. ಈ ಘಟನೆಯ ವಿಡಿಯೋ ಪ್ರಸಾರವಾಗಿತ್ತು.

ಮದರಸಾದಲ್ಲಿ ಮೂತ್ರ ಶಂಕೆ ಮಾಡಿದ ಹಿಂದೂ ಹುಡುಗನಿಗೆ ಜಾಮೀನು ನೀಡಿದ ಸಿಟ್ಟಿನಲ್ಲಿ ಮಂದಿರದ ಮೇಲೆ ಆಕ್ರಮಣ ಮಾಡಲಾಯಿತು ಎಂದು ಹೇಳಲಾಗಿದೆ!

ಸ್ಥಳೀಯ ಮದರಸಾದಲ್ಲಿ ಓರ್ವ ೯ ವರ್ಷದ ಹಿಂದೂ ಹುಡುಗನು ಮೂತ್ರ ಶಂಕೆ ಮಾಡಿದ್ದ ಪ್ರಕರಣದಲ್ಲಿ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆಂದು ಸಿಟ್ಟಿಗೆದ್ದ ಮತಾಂಧರು ಮಂದಿರದ ಮೇಲೆ ಆಕ್ರಮಣ ಮಾಡಿದ್ದೇವೆ ಎಂದು ಹೇಳಿದ್ದಾರೆ. (ಪಾಕಿಸ್ತಾನದಲ್ಲಿ ಈಶ ನಿಂದಾ ಕಾನೂನು ಬಂದಾಗಿನಿಂದ ಹಿಂದೂಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಅವರನ್ನು ಬಂಧಿಸುವ ಪ್ರಮಾಣವು ಹೆಚ್ಚಾಗಿದೆ. ಈ ಪ್ರಕರಣವು ಏಕೆ ಇದರಲ್ಲಿನ ಒಂದು ಪ್ರಕಾರ ವಾಗಿರಬಾರದು ? – ಸಂಪಾದಕರು)