
ನವ ದೆಹಲಿ – ದೇಶದ ಎ.ಟಿ.ಎಮ್.ಗಳಲ್ಲಿ ನಗದು ಲಭ್ಯತೆಯ ಕುರಿತು ಉದ್ಭವಿಸಿರುವ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಎಲ್ಲಾ ಬ್ಯಾಂಕುಗಳಿಂದ ತುರ್ತು ಮಾಹಿತಿಯನ್ನು ಕೋರಿದೆ. ಹಣಕಾಸು ಸೇವೆಗಳ ಇಲಾಖೆಯು ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಸಿ.ಇ.ಒ.) ಎ.ಟಿ.ಎಮ್.ಗಳಲ್ಲಿ ನಗದು ತುಂಬುವ ಪ್ರಕ್ರಿಯೆಯಲ್ಲಿ ಯಾವ ತೊಂದರೆ ಎದುರಾಗುತ್ತಿವೆಯೇ?, ಹಾಗೆಯೇ ಅವುಗಳನ್ನು ನಿವಾರಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ?, ಎಂಬಿತ್ಯಾದಿ ವಿಷಯಗಳ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದೆ.
ಕೆಲವು ಸಂಸ್ಥೆಗಳು ಕೆಲವು ಪ್ರದೇಶಗಳಲ್ಲಿ ನಗದು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದನ್ನು ‘ಭಾರತೀಯ ಬ್ಯಾಂಕ್ ಸಂಘಟನೆ’ಯ ಗಮನಕ್ಕೆ ತಂದ ನಂತರ ಸರಕಾರವು ಪರಿಸ್ಥಿತಿಯ ಪರಿಶೀಲನೆಯನ್ನು ಆರಂಭಿಸಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ನಗದು ವಹಿವಾಟಿನ ಪ್ರಮಾಣವು ಇಂದಿಗೂ ದೊಡ್ಡದಾಗಿರುವುದರಿಂದ ಎ.ಟಿ.ಎಮ್.ಗಳಲ್ಲಿ ನಗದು ಲಭ್ಯತೆಯು ಅತ್ಯಂತ ಮುಖ್ಯವೆಂದು ಪರಿಗಣಿಸಲಾಗಿದೆ. ಸರಕಾರಿ ಯೋಜನೆಗಳ ಫಲಾನುಭವಿಗಳು, ಪಿಂಚಣಿದಾರರು ಮತ್ತು ಸರ್ವಸಾಮಾನ್ಯ ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಎ.ಟಿ.ಎಮ್.ಗಳ ಮೇಲೆಯೇ ಅವಲಂಬಿತರಾಗಿರುವುದರಿಂದ, ಎ.ಟಿ.ಎಮ್.ಗಳಲ್ಲಿ ನಗದು ಕೊರತೆಯಾದರೆ ಅದರ ನೇರ ಪರಿಣಾಮ ಜನಸಾಮಾನ್ಯರ ಮೇಲೆ ಉಂಟಾಗಬಹುದು.
ಎ.ಟಿ.ಎಮ್.ನಲ್ಲಿನ ನಗದು ಕೊರತೆಯನ್ನು ನಿವಾರಿಸಲಾಗುವುದು ! – ಭಾರತೀಯ ರಿಸರ್ವ್ ಬ್ಯಾಂಕ್ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಸಂಜಯ ಮಲ್ಹೋತ್ರಾ ಅವರು ಎ.ಟಿ.ಎಮ್.ಗಳಲ್ಲಿ ನಗದು ಕೊರತೆ ಕಂಡುಬಂದಲ್ಲಿ ಅದನ್ನು ತಕ್ಷಣವೇ ಭರ್ತಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ರಿಸರ್ವ್ ಬ್ಯಾಂಕ್ ನ ನಿಯಮಾವಳಿಗಳ ಪ್ರಕಾರ, ಯಾವುದೇ ಒಂದು ಎ.ಟಿ.ಎಮ್.ನಲ್ಲಿ ತಿಂಗಳಿನಲ್ಲಿ 10 ಗಂಟೆಗಳಿಗಿಂತ ಹೆಚ್ಚು ಕಾಲ ನಗದು ಲಭ್ಯವಿಲ್ಲದಿದ್ದರೆ ಸಂಬಂಧಪಟ್ಟ ಬ್ಯಾಂಕಿನ ವಿರುದ್ಧ ದಂಡನಾತ್ಮಕ ಕ್ರಮ ಜರುಗಿಸಬಹುದಾಗಿದೆ. |
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!