ಈ ಸಲದ ಶ್ರೀ ಕೃಷ್ಣಜನ್ಮಾಷ್ಟಮಿಯ ನಿಮಿತ್ತ್ತ ವಿಶ್ವ ಹಿಂದೂ ಪರಿಷತ್ತಿನಿಂದ ದೇಶಾದ್ಯಂತ ಕಾರ್ಯಕ್ರಮದ ಆಯೋಜನೆ

ನವದೆಹಲಿ – ಈ ವರ್ಷ ವಿಶ್ವ ಹಿಂದೂ ಪರಿಷತ್ತು ಶ್ರೀಕೃಷ್ಣಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾರ್ಯಕ್ರಮದ ಯೋಜನೆ ಮಾಡಲಿದೆ. ಈ ಬಗ್ಗೆ ಯೋಜನೆಯನ್ನು ಮಾಡಲಾಗುತ್ತಿದೆ. ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ ಕುಮಾರ ಇವರು, ಶ್ರೀ ಕೃಷ್ಣಜನ್ಮಾಷ್ಟಮಿಯು ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ದಿನವಾಗಿದೆ. ಆಗಸ್ಟ್ ೩೦, ರಂದು ಶ್ರೀಕೃಷ್ಣಜನ್ಮಾಷ್ಟಮಿ ಇದೆ. ಅದಕ್ಕಿಂತ ಮೊದಲೇ ಆಗಸ್ಟ್ ೨೨ ರಿಂದ ಇಡೀ ದೇಶದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅದಕ್ಕಾಗಿ ಯೋಜನೆಯ ರೂಪುರೇಷೆ ರೂಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.