ಹಿಂದೂ ರಾಷ್ಟ್ರ ಸ್ಥಾಪನೆಗೆ ‘ಹಿಂದ ಸಾಮ್ರಾಜ್ಯ ಪಾರ್ಟಿ’ ಎಂಬ ರಾಜಕೀಯ ಪಕ್ಷ ಸ್ಥಾಪನೆ!

ಪೂ. (ನ್ಯಾಯವಾದಿ) ಹರಿಶಂಕರ ಜೈನ್ ರಾಷ್ಟ್ರೀಯ ಅಧ್ಯಕ್ಷರು, ಹಾಗೂ ನ್ಯಾಯವಾದಿ ರಂಜನಾ ಅಗ್ನಿಹೋತ್ರಿ ಸಂಸ್ಥಾಪಕ ಅಧ್ಯಕ್ಷೆ !

ಹಿಂದ್ ಸಾಮ್ರಾಜ್ಯ ಪಕ್ಷಕ್ಕೆ ಎಲ್ಲಾ ಹಿಂದೂಗಳ ಬೆಂಬಲ ದೊರಕಿ ಅದು ಹಿಂದೂ ರಾಷ್ಟ್ರದ ಗುರಿ ಶೀಘ್ರದಲ್ಲೇ ಸಾಧಿಸಲಿ, ಎಂಬ ಆಶಯ ! – ಸಂಪಾದಕರು

ಎಡಗಡೆಯಿಂದ ಶ್ರೀ. ಸುಬೇಸಿಂಗ್ ಯಾದವ್, ನ್ಯಾಯವಾದಿ ರಂಜನಾ ಅಗ್ನಿಹೋತ್ರಿ, ಪೂ. ನ್ಯಾಯವಾದಿ ಹರಿಶಂಕರ್ ಜೈನ್ ಮತ್ತು ಶ್ರೀ.

ನವದೆಹಲಿ – ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿಶಂಕರ ಜೈನ್ ಅವರ ಅಧ್ಯಕ್ಷತೆಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಹಿಂದ್ ಸಾಮ್ರಾಜ್ಯ ಪಾರ್ಟಿ’ ಎಂಬ ಪಕ್ಷವು ಅಧಿಕೃತವಾಗಿ ಸ್ಥಾಪನೆಯಾಗಿದೆ ಎಂದು ಘೋಷಿಸಲಾಯಿತು. ಇಲ್ಲಿನ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪೂ. (ನ್ಯಾಯವಾದಿ) ಹರಿಶಂಕರ ಜೈನ್‌ರು ಈ ಘೋಷಣೆ ಮಾಡಿದ್ದಾರೆ. ಈ ಸಮಯದಲ್ಲಿ ಸಂಸ್ಥಾಪಕ ಅಧ್ಯಕ್ಷೆ ನ್ಯಾಯವಾದಿ ರಂಜನಾ ಅಗ್ನಿಹೋತ್ರಿ, ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಸಂಚಾಲಕ ಶ್ರೀ. ಜಿತೇಂದ್ರಸಿಂಹ ಬಿಸೆನ ಮತ್ತು ರಾಷ್ಟ್ರೀಯ ಸಹಕಾರ್ಯದರ್ಶಿ ಶ್ರೀ. ಸುಬೇಸಿಂಹ ಯಾದವ ಇವರೆಲ್ಲರೂ ಉಪಸ್ಥಿತರಿದ್ದರು.

ಸೌಜನ್ಯ : ಆಜ್ ತಕ್

ಹಿಂದ್ ಸಾಮ್ರಾಜ್ಯ ಪಕ್ಷದ ಗುರಿಗಳು

೧. ಭಾರತದ ಪವಿತ್ರ ಭೂಮಿಯಲ್ಲಿ ಸನಾತನ ಧರ್ಮಾಧಾರಿತ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮತ್ತು ೮೦೦ ವರ್ಷಗಳ ಗುಲಾಮಗಿರಿಯ ಸಂಕೋಲೆಯನ್ನು ಕಿತ್ತೊಗೆಯಲು ಹಿಂದ್ ಸಾಮ್ರಾಜ್ಯ ಪಕ್ಷವನ್ನು ಸ್ಥಾಪಿಸಲಾಗಿದೆ. ಅದೇ ರೀತಿ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ರಾಜಕೀಯದಲ್ಲಿ ಬದಲಾವಣೆಯನ್ನು ತರಲು ಹಿಂದು ವೀರ ಹಾಗೂ ವೀರಾಂಗನೆಯರು ಪ್ರಸ್ತುತ ರಾಷ್ಟ್ರದ ಸ್ಥಿತಿಯನ್ನು ಆಮೂಲಾಗ್ರವಾಗಿ ಬದಲಾಯಿಸಲು ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಸಾಧಿಸಲು ಪಕ್ಷವನ್ನು ಸ್ಥಾಪಿಸಲಾಗಿದೆ.

೨. ನಮ್ಮ ಸಂಕಲ್ಪವೇನೆಂದರೆ, ಈ ಪಕ್ಷವು ಇಂದಿನ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿರುತ್ತದೆ. ಜನತಾ ಜನಾರ್ದನನಲ್ಲಿ ಪ್ರಖರ ರಾಷ್ಟ್ರವಾದದ ಭಾವನೆಗಳನ್ನು ಮೂಡಿಸಲಾಗುವುದು, ದೇಶದ ಗಡಿಗಳನ್ನು ಭದ್ರಪಡಿಸಲಾಗುವುದು, ದೇಶವು ಕಳೆದುಕೊಂಡ ಭೂಮಿಯನ್ನು ಮತ್ತೆ ತರಲಾಗುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಸ್ವಾಭಿಮಾನವನ್ನು ಉಳಿಸಿಕೊಂಡು ತನ್ನದೇ ಆದ ಅಸ್ತಿತ್ವವನ್ನು ಸ್ವೀಕರಿಸುತ್ತಾ ಇತರ ದೇಶಗಳೊಂದಿಗೆ ಸಂಬಂಧವನ್ನು ಸ್ಥಾಪಿಸಲಾಗುವುದು.

೩. ಇಂದಿನ ಯುವಕರು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯನ್ನು ಕೇಳುತ್ತಿದ್ದಾರೆ. ಅವರಿಗೆ ಉದ್ಯೋಗ ನೀಡುವಂತಹ ಶಿಕ್ಷಣ ಬೇಕು. ಅದರಿಂದ ಅವರು ಜೀವನವನ್ನು ನಡೆಸಬಹುದು. ಆದ್ದರಿಂದ, ಪ್ರಸ್ತುತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯ ಅಗತ್ಯವಿದೆ. ಈ ಬದಲಾವಣೆಯು ಪ್ರತಿಯೊಬ್ಬ ತೆರಿಗೆದಾರನನ್ನು ಗೌರವಿಸಲಾಗುವುದು. ಸಾಮಾನ್ಯ ಜನರಿಗೆ ತೆರಿಗೆಯ ಭಾರವಿರಲಾರದು ಮತ್ತು ಅವರ ಹಣವನ್ನು ಸರಿಯಾಗಿ ಬಳಸಲಾಗುವುದು.

೪. ದೇಶಕ್ಕೆ ಹಸಿರು ಕ್ರಾಂತಿಯ ಅವಶ್ಯಕತೆಯಿದೆ, ಜೊತೆಗೆ ರೈತರಿಗೆ ಉಚಿತ ವಿದ್ಯುತ್, ರಸಗೊಬ್ಬರ, ನೀರು, ಔಷಧ ಮತ್ತು ಆಶ್ರಯದಂತಹ ಮೂಲಭೂತ ಸೌಕರ್ಯಗಳ ಅಗತ್ಯವಿದೆ.

೫. ಯಾವುದೇ ಕ್ಷೇತ್ರದಲ್ಲಿ ನೌಕರರ ಮತ್ತು ಕಾರ್ಮಿಕರ ಶೋಷಣೆ ಆಗಬಾರದು. ಪಕ್ಷವು ಅವರಿಗೆ ಸರಿಯಾದ ಸಂಬಳ ಮತ್ತು ಪಿಂಚಣಿ, ಭದ್ರತೆ ಸಿಗಲು ಹೋರಾಡಲಿದೆ.

೬. ಬಹುಸಂಖ್ಯಾತ ಹಿಂದೂಗಳು ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪುನಃಸ್ಥಾಪಿಸಲು ಇಚ್ಛಿಸುತ್ತಿದ್ದಾರೆ. ೧೯೯೨ ರ ನಂತರ ಕೆಡವಲಾದ ಅಥವಾ ನಾಶವಾದ ದೇವಸ್ಥಾನಗಳು, ಧಾರ್ಮಿಕ ಸ್ಥಳಗಳು ಮತ್ತು ಮಠಗಳನ್ನು ಪುನಃಸ್ಥಾಪಿಸುವ ಗುರಿಯಿದೆ. ಬಹುಸಂಖ್ಯಾತ ಹಿಂದುಗಳಿಗೆ ನ್ಯಾಯ ಸಿಗಬೇಕು. ಹಿಂದೂಗಳಿಗೆ ಹಾನಿಯಾಗುವಂತಹ ಕಾನೂನುಗಳನ್ನು ರದ್ದುಗೊಳಿಸಲು ಇದು ಆದ್ಯತೆಯಾಗಿರುತ್ತದೆ.

೭. ಎಲ್ಲಿಯವರೆಗೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹೊಸ ಸಂವಿಧಾನವನ್ನು ರಚಿಸುವುದಿಲ್ಲವೋ, ಅಲ್ಲಿಯವರೆಗೆ ಪ್ರಸ್ತುತ ಸಂವಿಧಾನದ ಅಡಿಯಲ್ಲಿ ಜನರಿಗೆ ನ್ಯಾಯ ಸಿಗಲು ಹೋರಾಡಬೇಕಾಗುತ್ತದೆ.

೮. ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂವಿಧಾನ ವಿರೋಧಿ ಪದ್ಧತಿಯಿಂದ ನೀಡಲಾಗುವ ಸೌಲಭ್ಯಗಳನ್ನು ಕೊನೆಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ.

೯. ಸಂವಿಧಾನದ ೩೦ ನೇ ವಿಧಿಯನ್ನು, ವಕ್ಫ್ ಕಾಯಿದೆ, ವಕ್ಫ್ ಕೌನ್ಸಿಲ್, ಅಲ್ಪಸಂಖ್ಯಾತರ ಸಚಿವಾಲಯ, ಪೂಜಾ ಸ್ಥಳಗಳ (ವಿಶೇಷ) ಕಾಯಿದೆ ೧೯೯೧ ಇತ್ಯಾದಿಗಳನ್ನು ರದ್ದುಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

೧೦. ಶ್ರೀರಾಮಜನ್ಮಭೂಮಿಯಂತೆಯೇ ಮಥುರಾ, ಕಾಶಿ ಮತ್ತು ಭೋಜಶಾಲಾ (ಧಾರ, ಮಧ್ಯಪ್ರದೇಶ) ಗಳಲ್ಲಿನ ದೇವಾಲಯಗಳನ್ನು ಮುಕ್ತಗೊಳಿಸುವುದು ಪಕ್ಷದ ಆದ್ಯತೆಯಾಗಿರಲಿದೆ.

೧೧. ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂವಿಧಾನದ ಆಧಾರದ ಮೇಲೆ ಮೀಸಲಾತಿಯ ಲಾಭವನ್ನು ನೀಡಲಾಗುವುದಿಲ್ಲ. ಇದರಿಂದ ಧಾರ್ಮಿಕ ಅಲ್ಪಸಂಖ್ಯಾತರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ಮೀಸಲಾತಿಯ ಸೌಲಭ್ಯಗಳನ್ನು ನೀಡಲಾಗುವುದು.

೧೨. ನ್ಯಾಯಾಂಗ ಕುಂಠಿತಗೊಳ್ಳುತ್ತಿದೆ. ಬಡವರು ನ್ಯಾಯದಿಂದ ವಂಚಿತರಾಗುತ್ತಿದ್ದಾರೆ. ನ್ಯಾಯಾಧೀಶರ ನೇಮಕಾತಿ, ಸರಕಾರಿ ನ್ಯಾಯವಾದಿಗಳ ನೇಮಕಾತಿ, ಹಾಗೂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಮಾಡಿ ಅದು ನಿಷ್ಪಕ್ಷವನ್ನಾಗಿಸಬೇಕಾಗಲಿದೆ. ಆದ್ದರಿಂದ ಜನರಿಗೆ ನಿಷ್ಪ್ಪಕ್ಷಪಾತ ನ್ಯಾಯವು ಸಿಗುತ್ತದೆ.

ನಮ್ಮ ಈ ಕಾರ್ಯದಲ್ಲಿ ಭಾಗವಹಿಸಿ ಮತ್ತು ಮಹಾನ್ ರಕ್ತರಹಿತ ಕ್ರಾಂತಿಯಲ್ಲಿ ಸಹಭಾಗಿಯಾಗಿ ಹಾಗೂ ದೇಶದ ಜನರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ನೀಡಲು ಹಾಗೆಯೇ ನ್ಯಾಯಾಂಗ ಪ್ರಕ್ರಿಯೆಯನ್ನು ಜನಾಭಿಮುಖವಾಗಿ ಮಾಡಲು ನಮಗೆ ಸಹಾಯ ಮಾಡಿ, ಎಂದು ಪಕ್ಷವು ಮನವಿ ಮಾಡಿದೆ.

ಹಿಂದುಗಳ ಅಭಿವೃದ್ಧಿಯೇ ಹಿಂದೂ ರಾಷ್ಟ್ರದ ಉದ್ದೇಶವಾಗಿದೆ ! – ಪೂ. (ನ್ಯಾಯವಾದಿ) ಹರಿಶಂಕರ ಜೈನ್

ಯಾರು ಹಿಂದು ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ, ಅವರು ನಮ್ಮೊಂದಿಗೆ ಇರುತ್ತಾರೆ. ಚುನಾವಣೆಗಳಲ್ಲಿ ಸ್ಪರ್ಧಿಸಲಾಗುವುದು; ಆದರೆ ಯಾವುದೇ ಪಕ್ಷವನ್ನು ಬೆಂಬಲಿಸಿ ಮಂತ್ರಿಯಾಗುವುದಿಲ್ಲ. ಹಿಂದೂ ರಾಷ್ಟ್ರ ಸ್ಥಾಪನೆಯ ನಂತರ ಸರಕಾರವನ್ನು ನಡೆಸಲಾಗುವುದು. ಹಿಂದುಗಳ ಅಭಿವೃದ್ಧಿಯೇ ಇದರ ಉದ್ದೇಶವಾಗಿದೆ. ಹಿಂದುತ್ವದ ಅಂಶಗಳಿರುವುವು. ಸರಕಾರವು ಬಂದನಂತರ, ‘ಘರವಾಪಸಿ’ಯ (ಮತಾಂತರಗೊಂಡ ಹಿಂದೂಗಳನ್ನು ಹಿಂದೂ ಧರ್ಮಕ್ಕೆ ಮರು ಪ್ರವೇಶ) ಕಾರ್ಯಕ್ರಮವನ್ನು ಕೇರಳದಿಂದ ಆರಂಭಿಸಲಾಗುವುದು. ರಾಜಕೀಯ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲಾಗುವುದು ಎಂದು ಪೂ. (ನ್ಯಾಯವಾದಿ) ಹರಿಶಂಕರ ಜೈನ್‌ರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ಹಿಂದ್ ಸಾಮ್ರಾಜ್ಯ ಪಕ್ಷ’ದ ಮಾರ್ಗಕ್ರಮಣಕ್ಕೆ ಅಭಿನಂದನೆಗಳು ! – ಸನಾತನ ಸಂಸ್ಥೆ

ಅಧ್ಯಾತ್ಮಪ್ರಸಾರ ಮಾಡುವ ಸನಾತನ ಸಂಸ್ಥೆಯ ಸಮಷ್ಟಿ ಗುರಿ ಹಿಂದೂ ರಾಷ್ಟ್ರ ಸ್ಥಾಪನೆ ಆಗಿದ್ದು ಇದಕ್ಕಾಗಿ ಸಂಸ್ಥೆಯು ಆಧ್ಯಾತ್ಮಿಕ ಮಟ್ಟದಲ್ಲಿ ಕೆಲಸ ಮಾಡಲಿದೆ. ‘ಹಿಂದ್ ಸಾಮ್ರಾಜ್ಯ ಪಾರ್ಟಿ’ ಹಿಂದೂ ಹಿತಾಸಕ್ತಿಗಾಗಿ ಹಿಂದುಗಳ ಸಂಘಟನೆ ಮಾಡಲಿದೆ. ಹಿಂದೂ ರಾಷ್ಟ್ರದೆಡೆಗೆ ಮಾರ್ಗಕ್ರಮಿಸುತ್ತಿರುವ ಪಕ್ಷದ ದೇವಸ್ಥಾನಗಳ ರಕ್ಷಣೆ, ಸಂಸ್ಕೃತಿಯ ರಕ್ಷಣೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿ, ಎಂದು ಈಶ್ವರನ ಚರಣಗಳಲ್ಲಿ ಪ್ತಾರ್ಥನೆ ಹಾಗೂ ‘ಹಿಂದ್ ಸಾಮ್ರಾಜ್ಯ ಪಾರ್ಟಿ’ಯ ಮಾರ್ಗಕ್ರಮಣಕ್ಕೆ ಶುಭೇಚ್ಛೆಗಳು! – ಕು. ಕೃತಿಕಾ ಖತ್ರಿ, ವಕ್ತಾರರು, ಸನಾತನ ಸಂಸ್ಥೆ