
ಲಂಡನ್ (ಬ್ರಿಟನ್) – ಬ್ರಿಟನ್ ನಲ್ಲಿ ‘ಗ್ರೂಮಿಂಗ್ ಗ್ಯಾಂಗ್ಸ್’ ನಿಂದ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ಕುರಿತು ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಮೂಲದ ಶೇರಾಜ್ ಮಲಿಕ್‌ಗೆ 18 ವರ್ಷದ ಬ್ರಿಟಿಷ್ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ನ್ಯಾಯಾಲಯವು ಆರೋಪಿಯನ್ನು ‘ಸಮಾಜಕ್ಕೆ ಅಪಾಯಕಾರಿ’ ಎಂದು ಪರಿಗಣಿಸಿದ್ದು, ಶಿಕ್ಷೆ ಪೂರ್ಣಗೊಂಡ ನಂತರವೂ ಆತ 4 ವರ್ಷಗಳ ಕಾಲ ನಿಗಾದಲ್ಲಿ ಇರಬೇಕಾಗುತ್ತದೆ ಎಂಬ ಷರತ್ತನ್ನು ವಿಧಿಸಿದೆ. (ಬ್ರಿಟನ್ ಇಸ್ಲಾಮೀಕರಣಗೊಳ್ಳುವುದನ್ನು ತಡೆಯಲು ಈ ರೀತಿಯಾಗಿ ‘ಪಾಕಿಸ್ತಾನಿ ಮುಸಲ್ಮಾನ್ ಮತ್ತು ಅಪರಾಧಿ’ ಎಂಬ ಸಮೀಕರಣವಾಗಬೇಕು ಎಂದು ಯಾರಾದರೂ ಬ್ರಿಟಿಷ್ ರಾಷ್ಟ್ರವಾದಿಗಳು ಆಗ್ರಹಿಸಿದರೆ, ಅದರಲ್ಲಿ ತಪ್ಪೇನಿದೆ? – ಸಂಪಾದಕರು)
1. ಈ ಘಟನೆಯು ಜೂನ್ 2025 ರಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ನ ‘ಸಟನ್ ಲಾನ್ ಪಾರ್ಕ್’ನಲ್ಲಿ ನಡೆದಿತ್ತು. ಸಂತ್ರಸ್ತೆಯು ತನ್ನ ಸ್ನೇಹಿತೆಯೊಂದಿಗೆ ಉದ್ಯಾನವನಕ್ಕೆ ಬಂದಿದ್ದಳು. ಕೆಲ ಸಮಯದ ನಂತರ ಅವಳ ಸ್ನೇಹಿತೆ ಹೊರಟುಹೋದಾಗ ಯುವತಿ ಅಲ್ಲಿ ಒಬ್ಬಳೇ ಉಳಿದಿದ್ದಳು. ಶೇರಾಜ್ ಮಲಿಕ್ ಆ ಯುವತಿಯನ್ನು ಪಾರ್ಕ್‌ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು.
2. ತಾನು ಹಲವು ಬಾರಿ ಪ್ರತಿರೋಧಿಸಲು ಪ್ರಯತ್ನಿಸಿದೆ; ಆದರೆ ಆರೋಪಿಯು ತನ್ನ ಮುಖ ಮತ್ತು ತಲೆಯ ಮೇಲೆ ಹಲ್ಲೆ ಮಾಡಿದನು ಎಂದು ಸಂತ್ರಸ್ತೆಯು ನ್ಯಾಯಾಲಯಕ್ಕೆ ತಿಳಿಸಿದ್ದಾಳೆ.
3. ಈ ಮೊಕದ್ದಮೆಯ ವಿಚಾರಣೆಯ ವೇಳೆ, ಅದೇ ರಾತ್ರಿ ಮತ್ತೊಬ್ಬ ಮತಾಂಧನೂ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದನು ಎಂಬ ವಿಷಯವೂ ಬೆಳಕಿಗೆ ಬಂದಿದೆ; ಆದರೆ ಆತನ ಗುರುತು ಇನ್ನೂ ಪತ್ತೆಯಾಗಿಲ್ಲ.
4. ಆರೋಪಿಯು ಮಾದಕ ದ್ರವ್ಯಗಳ ಪ್ರಭಾವದಲ್ಲಿದ್ದಾಗ ಒಬ್ಬಂಟಿ ಮತ್ತು ಅಸಹಾಯಕ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆತ ತನ್ನ ಅಪರಾಧದ ಬಗ್ಗೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ನ್ಯಾಯಾಧೀಶ ಸೈಮನ್ ಆಶ್ ಕೇಸಿ ಅವರು ಉಲ್ಲೇಖಿಸಿದ್ದಾರೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape