
ಭರೂಚ್ (ಗುಜರಾತ್) – ಇಲ್ಲಿನ 700 ವರ್ಷ ಹಳೆಯದಾದ ಜಾಮಾ ಮಸೀದಿಯ ಮುಚ್ಚಲಾದ (ಸೀಲ್ ಮಾಡಿದ) ನೆಲಗೃಹದಲ್ಲಿ ಹಿಂದೂ ದೇವತೆಗಳ ಪ್ರಾಚೀನ ಮೂರ್ತಿಗಳು ಮತ್ತು ಜೈನ ತೀರ್ಥಂಕರರಿಗೆ ಸಂಬಂಧಿಸಿದ ಮೂರ್ತಿಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ವಿಡಿಯೋವೊಂದು ಹರಿದಾಡುತ್ತಿತ್ತು. ಇದರಲ್ಲಿ ಮಸೀದಿಯ ನೆಲಗೃಹದಲ್ಲಿ ಹಿಂದೂ ದೇವತೆಗಳ ಹಲವು ಪ್ರಾಚೀನ ಮೂರ್ತಿಗಳು ಹಾಗೂ ಭಗವಾನ್ ಮಲ್ಲಿನಾಥರ (ಜೈನ ಧರ್ಮದ 19 ನೇ ತೀರ್ಥಂಕರ) ಮೂರ್ತಿ ಇರುವುದಾಗಿ ದಾವೆ ಮಾಡಲಾಗಿತ್ತು. ಈ ವಿಡಿಯೋ ವ್ಯಾಪಕವಾಗಿ ಹರಡಿದ ನಂತರ ವಿವಿಧ ಹಿಂದೂ ಮತ್ತು ಜೈನ ಸಂಘಟನೆಗಳು ಈ ವಿಷಯದ ಕುರಿತು ತನಿಖೆಗೆ ಒತ್ತಾಯಿಸಿವೆ.
🚩 Another Hidden Chapter of History Emerging from Beneath a Mosque?
Idols of Deities Found in the Basement of a 700-Year-Old Jama Masjid in Bharuch, Gujarat!
According to Mahant Muktanand Swami, the discovery strengthens long-standing claims that the site was once "Jain Samari… pic.twitter.com/bIX5LBNKkH
— Sanatan Prabhat (@SanatanPrabhat) June 12, 2026
ಪುರಾತತ್ವ ಇಲಾಖೆಯಿಂದ ಮಸೀದಿಯ ಪರಿಶೀಲನೆ!
ಇದರ ನಂತರ ಪುರಾತತ್ವ ಇಲಾಖೆಯ ತಂಡವು ಕಟ್ಟುನಿಟ್ಟಿನ ಭದ್ರತೆಯಲ್ಲಿ ಮಸೀದಿಯ ಆವರಣವನ್ನು ಪರಿಶೀಲಿಸಿತು. ಪರಿಶೀಲನೆಯ ಸಮಯದಲ್ಲಿ ನೆಲಗೃಹದ ವಿಡಿಯೋ ಚಿತ್ರೀಕರಣವನ್ನು ಮಾಡಲಾಯಿತು. ಅಲ್ಲಿ ‘ಸಂವತ್ 1213’ ಎಂದು ಕೆತ್ತಲಾದ ಪ್ರಾಚೀನ ಮೂರ್ತಿ ಮತ್ತು ಹಲವಾರು ಕಂಬಗಳ ಮೇಲೆ ಸಾಂಪ್ರದಾಯಿಕ ಕೆತ್ತನೆ ಕೆಲಸದ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ದಾವೆಗಳಿಗೆ ಇನ್ನೂ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ಆದ್ದರಿಂದ ಪುರಾತತ್ವ ಇಲಾಖೆಯ ಅಂತಿಮ ಅಧಿಕೃತ ವರದಿಯ ಆಧಾರದ ಮೇಲೆಯೇ ಭವಿಷ್ಯದಲ್ಲಿ ಕಾನೂನು ಕ್ರಮವನ್ನು ನಿರ್ಧರಿಸಲಾಗುವುದು ಎಂದು ನಂಬಲಾಗಿದೆ.
ಜಮಾ ಮಸೀದಿ ಟ್ರಸ್ಟ್‌ನಿಂದ ದಾವೆಗಳ ನಿರಾಕರಣೆ!
ಜಾಮಾ ಮಸೀದಿ ಟ್ರಸ್ಟ್‌ನ ಪದಾಧಿಕಾರಿಗಳು ಈ ಎಲ್ಲಾ ಹಕ್ಕುಗಳನ್ನು ತಳ್ಳಿಹಾಕಿದ್ದಾರೆ. ಸರಕಾರಿ ದಾಖಲೆಗಳು, 1907 ರ ‘ಗೆಜೆಟಿಯರ್’ ಮತ್ತು ವಕ್ಫ್ ಮಂಡಳಿಯ ದಾಖಲೆಗಳಲ್ಲಿ ಮಸೀದಿಯ ಇತಿಹಾಸವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಅನಗತ್ಯ ವಿವಾದಗಳನ್ನು ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪರಿಶೀಲಿಸುತ್ತಿರುವುದಾಗಿ ಟ್ರಸ್ಟ್ ತಿಳಿಸಿದೆ.
ಪುರಾತತ್ವ ಇಲಾಖೆಯು ಅಕ್ರಮ ವಜುಖಾನಾವನ್ನು (ನಮಾಜ್‌ಗೆ ಮುನ್ನ ಕೈಕಾಲು ತೊಳೆಯುವ ಸ್ಥಳ) ತೆರವುಗೊಳಿಸಿದೆ!
ಇದೇ ಅವಧಿಯಲ್ಲಿ ಪುರಾತತ್ವ ಇಲಾಖೆಯು ಮಸೀದಿಯ ಆವರಣದಲ್ಲಿ ಅನುಮತಿಯಿಲ್ಲದೆ ನಿರ್ಮಿಸಲಾಗಿದ್ದ ಹೆಚ್ಚುವರಿ ‘ವಜುಖಾನಾ’ವನ್ನು ತೆರವುಗೊಳಿಸಿದೆ. ಅಲ್ಲದೆ, ಒಂದು ವಿವಾದಿತ ಪ್ರವೇಶದ್ವಾರವನ್ನು ಮುಚ್ಚಲಾಗಿದೆ (ಸೀಲ್ ಮಾಡಲಾಗಿದೆ). ಸಂರಕ್ಷಿತ ಸ್ಮಾರಕಗಳಿಗೆ ಸಂಬಂಧಿಸಿದ ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇದು ಶ್ರೀ ಚಕ್ರಧರ ಸ್ವಾಮಿಗಳ ಜನ್ಮಸ್ಥಳ! – ಮಹಂತ್ ಮುಕ್ತಾನಂದ ಸ್ವಾಮಿಈ ವಿಷಯದ ಕುರಿತು ಶಂಕರಾಚಾರ್ಯ ಮಠದ ಮಹಂತ್ ಮುಕ್ತಾನಂದ ಸ್ವಾಮಿಗಳು ಮಾತನಾಡಿ, ಈ ಶೋಧದಿಂದ ನಾನು ಹಿಂದೆ ಮಾಡಿದ್ದ ವಾದಗಳಿಗೆ ಬಲ ಬಂದಿದೆ. ಈ ಸ್ಥಳವನ್ನು ಒಂದು ಕಾಲದಲ್ಲಿ ಜೈನ ಧರ್ಮದ ‘ಜೈನ ಸಮರಿ ವಿಹಾರ’ ಎಂದು ಕರೆಯಲಾಗುತ್ತಿತ್ತು ಮತ್ತು ಇದು ಶ್ರೀ ಚಕ್ರಧರ ಸ್ವಾಮಿಗಳ ಜನ್ಮಸ್ಥಳ ಎಂದೂ ನಂಬಲಾಗಿದೆ ಎಂದು ಹೇಳಿದ್ದಾರೆ. |
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !
ಸಲ್ಮಾನ್ ಖಾನ್ ಅವರಿಂದ ಪರಿಸರ ನಿಯಮಗಳ ಉಲ್ಲಂಘನೆ! – ವಿಡಿಯೋ ಮೂಲಕ ನೆರೆಹೊರೆಯವರ ಆರೋಪ