ಪುಣೆ – ಪುಣೆ ಶ್ರಮಿಕ ಪತ್ರಕಾರ ಸಂಘದಿಂದ ಆಗಸ್ಟ ೪ ರಂದು ಆಯೋಜಿಸಲಾಗಿದ್ದ ಸಂದರ್ಶನದಲ್ಲಿ ಶಿವಶಾಹೀರ ಬಾಬಾಸಾಹೇಬ ಪುರಂದರೆ ಇವರು ಮುಂದಿನಂತೆ ಹೇಳಿದರು. ನಾವು ಇತಿಹಾಸದೊಂದಿಗೆ ಬದುಕುತ್ತಿರುತ್ತೇವೆ. ಆದುದರಿಂದ ಇತಿಹಾಸವು ಎಂದಿಗೂ ಹಳೆಯದಾಗುವುದಿಲ್ಲ, ಅದು ಯಾವಾಗಲೂ ಹಸಿರಾಗಿರುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಮೊದಲು ರಾಷ್ಟ್ರೀಯ ವಿಚಾರವನ್ನು ಮಂಡಿಸಿದರು. ದೇಶಕ್ಕೆ ಇಂದು ರಾಷ್ಟ್ರೀಯ ವಿಚಾರಗಳ ಅತ್ಯಂತ ಅವಶ್ಯಕತೆ ಇದೆ. ಛತ್ರಪತಿ ಶಿವಾಜಿ ಮಹಾರಾಜರ ರಾಷ್ಟ್ರೀಯತ್ವವು ಶಾಶ್ವತವಾಗಿರಬೇಕು.
ಶಿವಶಾಹೀರ ಬಾಬಾಸಾಹೇಬ ಪುರಂದರೆಯವರು ಮಾತನಾಡುವಾಗ, ಸದ್ಯದ ಕಾಲದಲ್ಲಿ “ ಛತ್ರಪತಿ ಶಿವಾಜಿ ಮಹಾರಾಜರ ಕಾರ್ಯದ ಸಂದರ್ಭದ ಎಲ್ಲ ಲೇಖನವನ್ನು ವರ್ತಮಾನಕಾಲದಲ್ಲಿ ಉಪಯೋಗಿಸಬೇಕು. ಛತ್ರಪತಿ ಶಿವಾಜಿ ಮಹಾರಾಜರ ಸಂದರ್ಭದಲ್ಲಿ ವಿವಿಧ ಸ್ತರದಲ್ಲಿ ಸಂಶೋಧನೆ ನಡೆಯುತ್ತಿದೆ. ನೂತನ ಲೇಖಕರು ಸಂಶೋಧನೆಗಾಗಿ ಅಭ್ಯಾಸ ಮಹತ್ವದ್ದಾಗಿರುತ್ತದೆ ಎಂಬ ಅರಿವನ್ನು ಇಟ್ಟುಕೊಳ್ಳಬೇಕು. ಶಿವಸೃಷ್ಟಿಯಿಂದ ಮುಂಬರುವ ಪೀಳಿಗೆಗೆ ಛತ್ರಪತಿ ಶಿವಾಜಿಯವರ ಬಗ್ಗೆ ತಿಳಿದಿರಬೇಕು, ಎಂಬ ಉದ್ದೇಶದಿಂದ ಶಿವಸೃಷ್ಟಿಯು ಒಂದು ಮಹತ್ವದ ಹಂತವಾಗಿದೆ. ನಮ್ಮಲ್ಲಿ (ಮಹಾರಾಷ್ಟ್ರದಲ್ಲಿ) ಬೆಟ್ಟ, ಕಡಲುತೀರ, ಸಾಗರ, ಕೋಟೆಗಳು ಹೀಗೆ ೩೫೨ ಕೋಟೆಗಳಿವೆ. ಅದರಲ್ಲಿ ೨೯೨ ಕೋಟೆಗಳನ್ನು ನಾನು ನೋಡಿದ್ದೇನೆ. ಇಂದು ಕೋಟೆಗಳ ಸ್ಥಿತಿಯು ಹದಗೆಟ್ಟಿದೆ; ಆದರೆ ಅಭಿವೃದ್ಧಿಗಾಗಿ ಏನು ಮಾಡಲು ಸಾಧ್ಯವಿದೆ ಅದನ್ನು ಮಾಡಬೇಕು. ಶಿವಕಾರ್ಯಕ್ಕಾಗಿ ನನಗೆ ಇನ್ನೂ ಕೆಲ ವರ್ಷಗಳ ಕಾಲ ಬದುಕಲಿಕ್ಕಿದೆ. ನನ್ನ ತಾಯಿ ಎಂದರೆ ಸಂಸ್ಕಾರಗಳ ಗೂಡಾಗಿದ್ದಳು. ಆದ್ದರಿಂದ ನನ್ನ ತಂದೆ- ತಾಯಿ ಮತ್ತು ನನ್ನನ್ನು ಪ್ರೀತಿಸುವ ಜನರನ್ನು ನಾನು ಎಂದಿಗೂ ಮರೆಯಲಾರೆನು. ಎಂದು ಹೇಳಿದರು.