ಯುವತಿಗೆ ಬಲವಂತವಾಗಿ ಗರ್ಭಪಾತ ಮಾತ್ರೆ ನೀಡಿದ ಮುಸ್ಲಿಂ ಯುವಕ; ಯುವತಿ ಸಾವು!

೩ ತಿಂಗಳ ಗರ್ಭಿಣಿಯಾಗಿದ್ದ ಸಂತ್ರಸ್ತೆ!

ವಾರಾಣಸಿ (ಉತ್ತರ ಪ್ರದೇಶ) – ಇಲ್ಲಿ ನರ್ಸಿಂಗ್ ಕಲಿಯುತ್ತಿದ್ದ ೧೯ ವರ್ಷದ ವಿದ್ಯಾರ್ಥಿನಿಯೊಬ್ಬಳು ಇತ್ತೀಚೆಗೆ ಸಾವನ್ನಪ್ಪಿದ್ದಾಳೆ. ಗರ್ಭಪಾತದ ಹಲವು ಮಾತ್ರೆಗಳನ್ನು ಸೇವಿಸಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆಕೆ ೩ ತಿಂಗಳ ಗರ್ಭಿಣಿಯಾಗಿದ್ದಳು ಮತ್ತು ಆಕೆಯ ಪ್ರಿಯಕರ ಮಹಮ್ಮದ್ ಸಮೀರ್ ಆಕೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್‌ನನ್ನು ಬಂಧಿಸಲಾಗಿದೆ.

ಜೂನ್ ೧೦ ರಂದು ಬೆಳಗ್ಗೆ ವಿದ್ಯಾರ್ಥಿನಿ ಹಾಸ್ಟೆಲ್ ಮೆಟ್ಟಿಲುಗಳ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ವಿದ್ಯಾರ್ಥಿನಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ವಿದ್ಯಾರ್ಥಿನಿಯು ಮೀರ್‌ಗಂಜ್ (ಜೌನ್‌ಪುರ) ನ ಕರಿಯಾವ್ ಗ್ರಾಮದ ನಿವಾಸಿಯಾದ ಮಹಮ್ಮದ್ ಸಮೀರ್‌ನನ್ನು ಭೇಟಿಯಾಗಲು ಹುಡುಗರ ಹಾಸ್ಟೆಲ್‌ಗೆ ಪದೇ ಪದೇ ಹೋಗುತ್ತಿದ್ದಳು ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಪೊಲೀಸರು ಸಮೀರ್‌ನನ್ನು ಆತನ ಮನೆಯಿಂದ ಬಂಧಿಸಿದ್ದಾರೆ.

ಸಮೀರ್‌ನಿಂದ ಅಪರಾಧದ ಒಪ್ಪಿಗೆ!

ತಾವು ಕಳೆದ ಎರಡು ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದೆವು ಎಂದು ಸಮೀರ್ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ. ಕೆಲವು ದಿನಗಳ ಹಿಂದೆ ಆ ವಿದ್ಯಾರ್ಥಿನಿ ತಾನು ಗರ್ಭಿಣಿಯಾಗಿರುವುದಾಗಿ ತನಗೆ ತಿಳಿಸಿದ್ದಳು ಎಂದು ಆತ ಹೇಳಿದ್ದಾನೆ. “ನಾನು ಆಕೆಗೆ ಔಷಧ ತೆಗೆದುಕೊಳ್ಳಲು ಹೇಳಿದಾಗ ಆಕೆ ನಿರಾಕರಿಸಿದಳು. ನಾನು ಆಕೆಯ ಮೇಲೆ ಒತ್ತಡ ಹೇರಿದೆ. ಆಕೆ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟಾಗ ನಾನು ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಕೊನೆಗೆ ಆಕೆಯ ಇಚ್ಛೆಗೆ ವಿರುದ್ಧವಾಗಿ ನಾನು ಆಕೆಗೆ ಆ ಔಷಧವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ” ಎಂದು ಆತ ಹೇಳಿದ್ದಾನೆ.

ಸಂಪಾದಕೀಯ ನಿಲುವು

ದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ಅಪರಾಧದ ಪ್ರತಿಯೊಂದು ಕ್ಷೇತ್ರದಲ್ಲಿ ಮಾತ್ರ ಬಹುಸಂಖ್ಯಾತರಾಗಿದ್ದಾರೆ! ಇಂತಹ ಕಾಮಾಂಧರನ್ನು ಷರಿಯತ್ ಕಾನೂನಿನ ಪ್ರಕಾರ ಭೂಮಿಯಲ್ಲಿ ಗುಂಡಿ ತೋಡಿ, ಸೊಂಟದವರೆಗೆ ಹೂತು, ಕಲ್ಲುಗಳಿಂದ ಹೊಡೆದು ಸಾಯಿಸಬೇಕೆಂಬ ಬೇಡಿಕೆಯನ್ನು ಷರಿಯತ್ ಬೆಂಬಲಿಗರು ಎಂದಿಗೂ ಯಾಕೆ ಮಾಡುವುದಿಲ್ಲ?