ಮುಸಲ್ಮಾನರನ್ನು ಹಿಂದೂಗಳ ವಿರುದ್ಧ ಪ್ರಚೋದಿಸಿದ ಪ್ರಕರಣ

ಕೊಲಕಾತಾ (ಬಂಗಾಳ) – ರಾಜ್ಯದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಲಾಗಿದೆ. ಮಾರ್ಚ್ 2026 ರಲ್ಲಿ ಬ್ಯಾನರ್ಜಿ ಅವರು ಭಾಷಣವೊಂದರಲ್ಲಿ ಮುಸಲ್ಮಾನರನ್ನು ಹಿಂದೂಗಳ ವಿರುದ್ಧ ಪ್ರಚೋದಿಸಿದ್ದರು. ಮೇ 20 ರಂದು ಕೊಲಕಾತಾ ನಿವಾಸಿ ತುಷಾರ್ ಕಾಂತಿ ದಾಸ್ ಅವರು ಬ್ಯಾನರ್ಜಿ ವಿರುದ್ಧ ದೂರು ನೀಡಿದ್ದರು. ದೂರುದಾರರ ಆರೋಪದಂತೆ, ಬ್ಯಾನರ್ಜಿ ಅವರ ಭಾಷಣದಿಂದಾಗಿ ಆ ಸಮಯದಲ್ಲಿ ಚುನಾವಣೆ ನಡೆಯುತ್ತಿದ್ದ ರಾಜ್ಯದಲ್ಲಿ ಭಯ, ತಪ್ಪು ತಿಳುವಳಿಕೆ ಮತ್ತು ಉದ್ವಿಗ್ನತೆ ಉಂಟಾಗುವ ಸಾಧ್ಯತೆಯಿತ್ತು. ಈ ದೂರಿನ ಆಧಾರದ ಮೇಲೆ ಕೊಲಕಾತಾ ಪೊಲೀಸರು ಜೂನ್ 12 ರಂದು ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಮತಾ ಬ್ಯಾನರ್ಜಿ ಏನು ಹೇಳಿದ್ದರು?
ಮಮತಾ ಬ್ಯಾನರ್ಜಿಯವರು, ‘ನಮ್ಮಿಂದಲೇ (ತೃಣಮೂಲ ಕಾಂಗ್ರೆಸ್‌ನಿಂದಲೇ) ನೀವೆಲ್ಲರೂ (ಹಿಂದೂಗಳು) ಸುರಕ್ಷಿತವಾಗಿದ್ದೀರಿ. ಒಂದು ವೇಳೆ ನಾವು ಇಲ್ಲಿ (ಅಧಿಕಾರದಲ್ಲಿ) ಇಲ್ಲದ ದಿನ ಬಂದರೆ ಮತ್ತು ಒಂದು ನಿರ್ದಿಷ್ಟ ಸಮುದಾಯ (ಮುಸಲ್ಮಾನರು) ಒಗ್ಗೂಡಿ ನಿಮಗೆ ಮುತ್ತಿಗೆ ಹಾಕಿದರೆ, ಅವರು ನಿಮ್ಮನ್ನು ಮುಗಿಸಲು ಕೇವಲ ಒಂದು ಕ್ಷಣ ಸಾಕು’ ಎಂದು ಹೇಳಿದ್ದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ