ಜಾರ್ಖಂಡ್‌ನ ಜಮ್‌ಶೆದಪುರದ ದೇವಸ್ಥಾನದಲ್ಲಿ ಯೇಸು ಕ್ರಿಸ್ತನ ಚಿತ್ರವನ್ನು ಹಾಕಿದ್ದರಿಂದ ಉದ್ವಿಗ್ನ ಸ್ಥಿತಿ!

ವಿವಾದದ ನಂತರ, ಚಿತ್ರವನ್ನು ತೆಗೆದ ದೇವಾಲಯದ ಸಂಚಾಲಕರು

ದೇಶದ ಯಾವುದೇ ಚರ್ಚ್ ಅಥವಾ ಮಸೀದಿಯಲ್ಲಿ ಹಿಂದೂ ದೇವತೆಗಳ ವಿಗ್ರಹಗಳನ್ನು ಅಥವಾ ಚಿತ್ರಗಳನ್ನು ಹಾಕಿರುವುದನ್ನು ಯಾರಾದರೂ ನೋಡಿದ್ದಾರೆಯೇ ? ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಅವರು ಇತರ ಪಂಥಗಳ ದೇವತೆಗಳ ಚಿತ್ರಗಳನ್ನು ದೇವಸ್ಥಾನಗಳಲ್ಲಿ ಹಾಕುವಂತಹ ಕೃತಿಯನ್ನು ಮಾಡುತ್ತಾರೆ !

ಜಮ್‌ಶೆದಪುರ – ಸ್ಥಳೀಯ ಬಿಷ್ಟಪುರ ಗುರುದ್ವಾರ ಪ್ರದೇಶದಲ್ಲಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಏಸು ಕ್ರಿಸ್ತನ ಚಿತ್ರವನ್ನು ಹಾಕಿದ್ದರಿಂದ ಉದ್ವಿಗ್ನತೆ ಉಂಟಾಯಿತು. ಈ ಚಿತ್ರವನ್ನು ದೇವಸ್ಥಾನ ಸಮಿತಿಯ ಓರ್ವ ಸಂಚಾಲಕರು ಹಾಕಿದ್ದರು. (ಇಂತಹ ಸಂಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ! – ಸಂಪಾದಕ) ವಾದವಿವಾದದ ನಂತರ ಈ ಚಿತ್ರವನ್ನು ತೆಗೆದುಹಾಕಲಾಗಿದೆ.

ದೇವಸ್ಥಾನದಲ್ಲಿ ಯೇಸುವಿನ ಚಿತ್ರವನ್ನು ಹಾಕಿರುವುದನ್ನು ಗಮನಕ್ಕೆ ಬಂದ ಕೂಡಲೇ ಹಿಂದೂಗಳು ಆಕ್ರೋಶಿತರಾದರು. ಪೊಲೀಸರನ್ನು ಕರೆಸಲಾಯಿತು. ಮರುದಿನ ಏಸು ಕ್ರಿಸ್ತನ ಚಿತ್ರವನ್ನು ಹಾಕಿದ ವ್ಯಕ್ತಿಯನ್ನು ಹುಡುಕಲು ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ, ಭಾರತೀಯ ಜನತಾ ಯುವ ಮೋರ್ಚಾ ನಾಯಕ ಮತ್ತು ಭಜರಂಗ ದಳದ ಮಾಜಿ ಸಂಚಾಲಕ ಗೌತಮ್ ಪ್ರಸಾದ್ ಇವರು ದೇವಸ್ಥಾನದ ಸಂಚಾಲಕರೊಂದಿಗೆ ಚರ್ಚೆ ನಡೆಸಿದರು. ಆಗ ಓರ್ವ ಸಂಚಾಲಕರೇ ಈ ಚಿತ್ರವನ್ನು ಹಾಕಿದ್ದಾಗಿ ಒಪ್ಪಿಕೊಂಡರು. ನಂತರ ಅವರು ತಕ್ಷಣ ಚಿತ್ರವನ್ನು ತೆಗೆದರು. ಇದರ ಹಿಂದೆ ಪಿತೂರಿಯಿರಬಹುದು ಎಂದು ಹೇಳಲಾಗುತ್ತಿದೆ.