ಅನಾಮಿಕ(ಬೇನಾಮಿ) ಕರೆಯ ಮೂಲಕ ಮುಂಬೈಯಲ್ಲಿ ನಾಲ್ಕು ಕಡೆಗಳಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿದ ಇಬ್ಬರು ಯುವಕರ ಬಂಧನ !

ಪೊಲೀಸರಿಂದ ರಾತ್ರಿ ಇಡೀ ಶೋಧಕಾರ್ಯ!

ಮುಂಬೈ ಪೊಲೀಸರ ಸಮಯವನ್ನು ವ್ಯರ್ಥ ಮಾಡುವವರ ಮೇಲೆ ಕಠೋರ ಕಾರ್ಯಾಚರಣೆಯಾಗಬೇಕು ! – ಸಂಪಾದಕರು

ಪ್ರಾತಿನಿಧಿಕ ಚಿತ್ರ

ಮುಂಬೈ – ಅಗಸ್ಟ್ ೬ರ ತಡರಾತ್ರಿ ರೈಲ್ವೇ ಪೊಲೀಸರಿಗೆ ಅಜ್ಞಾತ ಕರೆಮಾಡಿ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ, ದಾದರ್, ಭಾಯಖಳಾ ಹಾಗೂ ನಟ ಅಮಿತಾಬ ಬಚ್ಚನ್ ರವರ ಮನೆಯ ಹೊರಗೆ ಬಾಂಬ್ ಇಡಲಾಗಿದೆ ಎಂದು ಸುಳ್ಳು ಹೇಳಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಯುವಕರ ಹೆಸರು ರಾಜು ಅಂಗಾರೆ ಮತ್ತು ರಮೇಶ ಶಿರಸಾಟ ಎಂದಾಗಿದೆ. ಇವರ ದೂರವಾಣ ಕರೆಯ ಅನ್ವಯ ಪೊಲೀಸರು ರಾತ್ರಿಯಿಡೀ ಬಾಂಬ್ ಶೋಧಕ ದಳದ ಸಹಾಯದಿಂದ ಶೋಧಕಾರ್ಯವನ್ನು ನಡೆಸಿದರು. ಆದರೆ ಇದರಲ್ಲಿ ಪೊಲೀಸರಿಗೆ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ.

ಇಬ್ಬರು ಯುವಕರನ್ನು ಪೊಲೀಸರು ಠಾಣೆ ನಗರದಿಂದ ಬಂಧಿಸಿದ್ದಾರೆ. ಯುವಕರು ಮದ್ಯದ ನಶೆಯಲ್ಲಿ ಪೊಲೀಸರಿಗೆ ಕರೆ ಮಾಡಿರುವುದು ಕಂಡುಬಂದಿದೆ. ಇವರು ಜಾಲ್ನಾದ ನಿವಾಸಿಯಾಗಿದ್ದಾರೆ. ಕರೆಯ ಮೂಲಕ ಸುಳ್ಳು ಮಾಹಿತಿಯನ್ನು ನೀಡಿ ಅವರು ದೂರವಾಣಿಯನ್ನು ಬಂದ್ ಮಾಡಿ ಇಟ್ಟಿದ್ದರು. ಯುವಕರು ಪೊಲೀಸರು ಅನ್ವೇಷಣೆ ಮಾಡಿದಾಗ ತಮಾಷೆಗೆಂದು ದೂರವಾಣಿ ಮಾಡಿದ್ದೇವೆಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರಿಂದ ಮುಂದಿನ ಅನ್ವೇಷಣೆಯು ನಡೆಯುತ್ತಿದೆ.