ಹರಿದ್ವಾರ ಕುಂಭಮೇಳದಲ್ಲಿನ ನಕಲಿ ಕೊರೊನಾ ಪರೀಕ್ಷಣೆ ಪ್ರಕರಣದಲ್ಲಿ ಈಡಿಯಿಂದ ೪ ರಾಜ್ಯಗಳಲ್ಲಿ ಮುತ್ತಿಗೆ

ಜನತೆಯ ಆರೋಗ್ಯದೊಂದಿಗೆ ಆಟವಾಡುವ ಇಂತಹ ಭ್ರಷ್ಟಾಚಾರಿಗಳಿಗೆ ಆಜೀವ ಸೆರೆಮನೆಗೆ ತಳ್ಳಿರಿ !

ನವದೆಹಲಿ – ಉತ್ತರಾಖಂಡದ ಹರಿದ್ವಾರದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ ಕುಂಭಮೇಳದ ಆಯೋಜನೆಯ ಸಮಯದಲ್ಲಿ ಕೊರೋನಾ ಪರೀಕ್ಷಣೆಯ ಬಗ್ಗೆ ನಡೆದ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರ್ಯನಿರ್ವಾಹಕ ನಿರ್ದೇಶನಾಲಯವು (‘ಈಡಿಯು) ಉತ್ತರಾಖಂಡ, ಹರಿಯಾಣಾ, ಉತ್ತರಪ್ರದೇಶ ಮತ್ತು ದೆಹಲಿ ಇಲ್ಲಿಯ ಕೆಲವು ಪೆಥಾಲಾಜಿ ಪ್ರಯೋಗಶಾಲೆಗಳ ಮೇಲೆ ದಾಳಿ ನಡೆಸಿದೆ. ನಕಲಿ ಪರೀಕ್ಷಣೆಗಳ ಮೂಲಕ ಭಾರೀ ಮಟ್ಟದಲ್ಲಿ ಆರ್ಥಿಕ ಭ್ರಷ್ಟಾಚಾರ ನಡೆದಿರುವ ಅಪರಾಧಗಳನ್ನು ಉತ್ತರಾಖಂಡ ಪೊಲೀಸರು ದಾಖಲಿಸಿದ್ದರು.

ಕಾರ್ಯನಿರ್ವಾಹಕ ಅಧಿಕಾರಿಗಳು ನೀಡಿದ ಮಾಹಿತಿಗನುಸಾರ, ಕೇಂದ್ರ ಸರಕಾರದಿಂದ ಈ ಪ್ರಯೋಗಶಾಲೆಗಳಿಗೆ ಕುಂಭಮೇಳದ ಸಮಯದಲ್ಲಿ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಮತ್ತು ಆರ್.ಟಿ.ಪಿ.ಸಿ.ಆರ್. ಪರೀಕ್ಷಣೆಯನ್ನು ಮಾಡಲು ಗುತ್ತಿಗೆ ಕೊಡಲಾಗಿತ್ತು; ಆದರೆ ಈ ಪ್ರಯೋಗಶಾಲೆಗಳು ಪ್ರತ್ಯಕ್ಷವಾಗಿ ಅತ್ಯಂತ ಕಡಿಮೆ ಮಟ್ಟದಲ್ಲಿ ಕೊರೊನಾ ಪರೀಕ್ಷಣೆ ಮಾಡಿದವು. ಹಾಗೆಯೇ ಪರೀಕ್ಷಣೆ ಮಾಡಿರುವುದಾಗಿ ಸುಳ್ಳು ನೋಂದಣಿಗಳನ್ನು ಮಾಡಿದವು. ಅವರು ನಕಲಿ ರಸೀದಿಗಳನ್ನು ಸಹ ಮಾಡಿದರು. ಅದರ ಮೂಲಕ ಆರ್ಥಿಕ ಲಾಭ ಪಡೆದುಕೊಳ್ಳಬೇಕೆಂಬ ಉದ್ದೇಶ ಅವುಗಳದ್ದಾಗಿತ್ತು. ಈ ವರದಿಗಳಲ್ಲಿ ಯಾರು ಕುಂಭಮೇಳಕ್ಕೆ ಹೋಗಲೇ ಇಲ್ಲವೋ ಅಂತಹವರ ಪರೀಕ್ಷಣೆ ಮಾಡಿರುವುದಾಗಿ ತೋರಿಸಲಾಗಿದೆ. ಈ ಪ್ರಯೋಗ ಶಾಲೆಗಳು ಮಾಡಿದ ಸುಳ್ಳು ಪರೀಕ್ಷಣೆಗಳಿಂದ ಕುಂಭಮೇಳದ ಸಮಯದಲ್ಲಿ ಹರಿದ್ವಾರದಲ್ಲಿನ ಕೊರೊನಾ ಪೀಡಿತರ ಶೇಕಡಾವಾರು ೦.೧೮ ರಷ್ಟು ಇದೆ ಎಂದು ತೋರಿಸಲಾಯಿತು; ಮಾತ್ರ ಪ್ರತ್ಯಕ್ಷದಲ್ಲಿ ಅದು ಶೇ. ೫.೫ ರಷ್ಟು ಇತ್ತು ಎಂಬ ಅಂದಾಜನ್ನು ಈಡಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡದ ಕಂದಾಯ ಇಲಾಖೆಯಿಂದ ಈ ಪರೀಕ್ಷಣೆಗಳಿಗಾಗಿ ಸಂಬಂಧಪಟ್ಟ ಇಲಾಖೆಗೆ ೩ ಕೋಟಿ ೪ ಲಕ್ಷ ರೂಪಾಯಿಗಳ ಹಣ ನೀಡಲಾಗಿತ್ತು.