
ಜಯಪುರ(ರಾಜಸ್ಥಾನ) – ಇಲ್ಲಿಯ ರಾಕೇಶ ನಾಗರ ಎಂಬ ೨೮ ವರ್ಷದ ಯುವಕನು ಹಾಡನ್ನು ಕೇಳುತ್ತಿರುವಾಗ ಬ್ಲೂಟೂತ ಇಯರ್ ಫೋನಿನ ಎರಡೂ ಇಯರ್‌ಬಡ್ಸ್ ನಡುವೆ ಸ್ಫೋಟವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆಯು ಚೋಮು ಎಂಬ ಪ್ರದೇಶದ ಉದಯಪೂರಿಯಾ ಊರಿನಲ್ಲಿ ನಡೆದಿದೆ. ದೇಶದಲ್ಲಿ ಈ ರೀತಿಯ ಘಟನೆ ಇದೇ ಮೊದಲ ಬಾರಿ ನಡೆದಿದೆ. ಇಲ್ಲಿಯವರೆಗೆ ಸಂಚಾರವಾಣಿ ಅಥವಾ ಪವರ್ ಬ್ಯಾಂಕ್ ಇಂತಹವುಗಳ ಸ್ಫೋಟವಾಗಿ ಸಾವಿನ ಘಟನೆಗಳು ಅಥವಾ ಗಾಯಗೊಂಡಿರುವ ಘಟನೆಗಳು ನಡೆದಿದ್ದವು.
Bluetooth कान में लगाने से पहले हो जाओ सावधानhttps://t.co/Qm3j2jzXFj#Bluetooth #wireless #earphone
— ZEE Rajasthan (@zeerajasthan_) August 6, 2021
ಸ್ಪೋಟದಿಂದ ರಾಕೇಶ ನಾಗರನು ಗಂಭೀರವಾಗಿ ಗಾಯಗೊಂಡು ಆತನ ಕಿವಿಯಿಂದ ರಕ್ತ ಸುರಿಯಲಾರಂಭಿಸಿತು ಆತ ಪ್ರಜ್ಞೆ ತಪ್ಪಿ ನೆಲಕ್ಕೆ ಕುಸಿದುಬಿದ್ದನು. ಆತನನ್ನು ಹತ್ತಿರದ ಆಸ್ಪತ್ರೆಗೆ ಉಪಚಾರಕ್ಕಾಗಿ ದಾಖಲಿಸಲಾಯಿತು. ಆದರೆ ವೈದ್ಯರ ತಪಾಸಣೆಯ ನಂತರ ಯುವಕನು ಮೃತಪಟ್ಟಿದ್ದಾನೆಂದು ಹೇಳಿದರು. ರಾಕೇಶನಿಗೆ ಚಿಕಿತ್ಸೆ ನೀಡಿದ ವೈದ್ಯರ ಪ್ರಕಾರ ಇಯರ್ ಬಡ್ಸ್‌ನ ಸ್ಫೋಟದ ನಂತರ ಬಹುಶಃ ಹೃದಯಾಘಾತದಿಂದ ರಾಕೇಶನ ಮೃತ್ಯುವಾಗಿರಬಹುದು ಎಂದು ಹೇಳಿದರು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ