ಅಜಿತ ಡೊವಲ ಇವರ ಮನೆಗೆ ನುಗ್ಗುವ ಪ್ರಯತ್ನ ಮಾಡುವ ಯುವಕನ ಬಂಧನ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೊವಲರವರ ಇಲ್ಲಿಯ ಮನೆಯಲ್ಲಿ ಒಬ್ಬ ಅಪರಿಚಿತ ಯುವಕ ನುಸುಳಲು ಪ್ರಯತ್ನಿಸುತ್ತಿರುವ ಘಟನೆ ನಡೆದಿದೆ. ಈ ಯುವಕನು ಡೊವಾಲ ಇವರ ಮನೆಯಲ್ಲಿ ಚತುಶ್ಚಕ್ರ ವಾಹನದಿಂದ ನುಗ್ಗುವ ಪ್ರಯತ್ನಿಸಿದನು; ಆದರೆ ಅಲ್ಲಿಯ ಭದ್ರತಾ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಆ ವ್ಯಕ್ತಿಯನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ.