ಕೇರಳ ಉಚ್ಚ ನ್ಯಾಯಾಲಯದ ತೀರ್ಪು

ತಿರುವನಂತಪುರಂ (ಕೇರಳಮ್) – ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಪ್ರಮಾಣವಚನ ಸ್ವೀಕರಿಸುವಾಗ ಕಾನೂನಿನಲ್ಲಿ ನಿಗದಿಪಡಿಸಿದ ಪದಗಳನ್ನು ಮೀರುವಂತಿಲ್ಲ; ಅಂದರೆ ಪ್ರಮಾಣವಚನವನ್ನು ದೇವರ ಹೆಸರಿನಲ್ಲಿ ಸ್ವೀಕರಿಸಬಹುದು ಅಥವಾ ದೇವರ ಹೆಸರನ್ನು ತೆಗೆದುಕೊಳ್ಳದೆ ಗಾಂಭೀರ್ಯಪೂರ್ವಕವಾಗಿ (ನಿಷ್ಠೆಯ ಮೂಲಕ) ಪ್ರತಿಜ್ಞೆ ಮಾಡಬಹುದು. ದೇವತೆ, ಭಾರತಮಾತೆ, ಯಾವುದೇ ಸಂಘಟನೆ, ರಾಜಕೀಯ ಹುತಾತ್ಮ ಅಥವಾ ಯಾವುದೇ ವ್ಯಕ್ತಿಯ ಹೆಸರು ಹೇಳುವುದನ್ನು ಅಂಗೀಕರಿಸಲಾಗುವುದಿಲ್ಲ. ಖುದ್ದಾಗಿ ಯಾವುದೇ ಹೊಸ ಪದ ಸೇರಿಸುವುದು ಸಂಪೂರ್ಣವಾಗಿ ತಪ್ಪು ಎಂದು ಪರಿಗಣಿಸಲಾಗುವುದು ಎಂದು ಕೇರಳಮ್ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಕೇರಳಮ್ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆ ಮತ್ತು ಕೇರಳಮ್ ಪಂಚಾಯತ್ ರಾಜ್ ಕಾಯಿದೆಯನ್ನು ತೀರ್ಪಿನ ವೇಳೆ ನ್ಯಾಯಾಲಯ ಉಲ್ಲೇಖಿಸಿದೆ.
೧. ತಿರುವನಂತಪುರಂ ಮಹಾನಗರ ಪಾಲಿಕೆಯ 20 ನಗರಸಭೆ ಕೌನ್ಸಿಲರ್ ಗಳು ಪ್ರಮಾಣವಚನ ಸ್ವೀಕರಿಸುವಾಗ ಹಿಂದೂ ದೇವತೆಗಳು, ‘ಭಾರತಾಂಬೆ’, ‘ಭಾರತಮಾತೆ’, ‘ಗುರುದೇವ’, ತಮ್ಮ ರಾಜಕೀಯ ಚಳವಳಿಯ ಹುತಾತ್ಮರ ಹೆಸರುಗಳನ್ನು ಉಲ್ಲೇಖಿಸಿದ್ದರು. ಹಾಗೆಯೇ ಪಾಲಕ್ಕಾಡ್ ಜಿಲ್ಲೆಯ ವಡಕ್ಕನಚೇರಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ‘ದೇವರ ಕೃಪೆಯಿಂದ ಉಮ್ಮನ್ ಚಾಂಡಿ’ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಎರಡೂ ಪ್ರಕರಣಗಳನ್ನು ಪರಿಗಣಿಸಿದ ಉಚ್ಚ ನ್ಯಾಯಾಲಯ, ಕಾನೂನು ಪ್ರತಿಜ್ಞಾವಿಧಿ ನಿಗದಿತ ನಮೂನೆ ಮೀರಿ ಹೋಗಲು ಅನುಮತಿ ನೀಡುತ್ತದೆಯೇ? ಎಂದು ಪ್ರಶ್ನಿಸಿತು.
೨. ಪ್ರತಿಜ್ಞಾವಿಧಿ ಎಂಬುದು ಕೇವಲ ಒಂದು ಔಪಚಾರಿಕತೆಯಲ್ಲ. ಚುನಾಯಿತ ಪ್ರತಿನಿಧಿಯು ಸಂವಿಧಾನವನ್ನು ಪಾಲಿಸುವನು, ಕಾನೂನಿನ ಪ್ರಕಾರ ಕೆಲಸ ಮಾಡುವನು ಮತ್ತು ಪ್ರಾಮಾಣಿಕವಾಗಿ ಜನಸೇವೆ ಮಾಡುವನು ಎಂದು ಜನರಿಗೆ ನೀಡುವ ಗಂಭೀರ ಪ್ರತಿಜ್ಞೆಯಾಗಿದೆ. ಹಾಗಾಗಿ ಕಾನೂನಿನಲ್ಲಿ ಬರೆದಿರುವ ರೀತಿಯಲ್ಲಿ ಮಾಡಿದ ಪ್ರತಿಜ್ಞಾವಿಧಿಯನ್ನು ಮಾತ್ರ ಸಿಂಧು ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಜನರು ಭಗವಂತನನ್ನು ಬೇರೆ ಬೇರೆ ಹೆಸರುಗಳಿಂದ ಕರೆದರೂ ಕೂಡ, ಕಾನೂನುಬದ್ಧವಾಗಿ ಪ್ರತಿಜ್ಞಾವಿಧಿಯನ್ನು ಕೇವಲ ದೇವರ ಹೆಸರಿನಲ್ಲಿ ಅಥವಾ ಗಾಂಭೀರ್ಯಪೂರ್ವಕ ಪ್ರತಿಜ್ಞೆಯ ಮೂಲಕವೇ ಸ್ವೀಕರಿಸಬಹುದು. ಖುದ್ದಾಗಿ ಯಾವುದೇ ಹೆಸರನ್ನು ಸೇರಿಸುವುದು ಸರಿಯಲ್ಲ ಎಂದು ಕೋರ್ಟ್ ಹೇಳಿತು.
ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಬೇಕಾಗುವುದು !
ಪ್ರಮಾಣವಚನವನ್ನು ತಪ್ಪು ರೀತಿಯಲ್ಲಿ ಸ್ವೀಕರಿಸಲಾಗಿತ್ತು, ಆದ್ದರಿಂದ ಅದನ್ನು ಸಿಂಧು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಉಚ್ಚ ನ್ಯಾಯಾಲಯ ತಿಳಿಸಿದೆ; ಆದರೆ ಕೇವಲ ಇದೇ ಕಾರಣಕ್ಕಾಗಿ ಚುನಾಯಿತ ಪ್ರತಿನಿಧಿಗಳ ಜನಾದೇಶವನ್ನು ರದ್ದುಗೊಳಿಸಲಾಗುವುದಿಲ್ಲ. ತಿರುವನಂತಪುರಮ್ ಮಹಾನಗರ ಪಾಲಿಕೆಯ ಕೌನ್ಸಿಲರ್ ಗಳು ಮತ್ತು ವಡಕ್ಕನಚೇರಿ ಪಂಚಾಯತ ಸದಸ್ಯರು ನಾಲ್ಕು ವಾರಗಳ ಒಳಗಾಗಿ ಮತ್ತೊಮ್ಮೆ ಯೋಗ್ಯ ರೀತಿಯಲ್ಲಿ ಪ್ರಮಾಣವಚನ ಸ್ವೀಕರಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಬಹುಶಃ ತಮ್ಮ ವಿಧಾನ ಕಾನೂನುಬದ್ಧವಾಗಿ ಸರಿಯಾಗಿದೆ ಎಂದು ಭಾವಿಸಿ ಅವರು ಹಾಗೆ ಮಾಡಿರಬಹುದು. ಆದ್ದರಿಂದ ಅವರಿಗೆ ಯಾವುದೇ ಶಿಕ್ಷೆ ಅಥವಾ ದಂಡ ವಿಧಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿತು.
ಪಂಚಾಯತ್ ಸದಸ್ಯರು ಮಾಡಿದ ಕೆಲಸಗಳು ರದ್ದಾಗಲಿವೆ !
ತಿರುವನಂತಪುರಮ್ ಮಹಾನಗರ ಪಾಲಿಕೆಯ ಕೌನ್ಸಿಲರ್ ಗಳ ವಿಷಯದಲ್ಲಿ ನ್ಯಾಯಾಲಯವು ಸಮಾಧಾನಕರ ತೀರ್ಪು ನೀಡಿದೆ. ಇದುವರೆಗೆ ಅವರು ಮಾಡಿದ ಕೆಲಸಗಳು ಕೇರಳಮ್ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಕಲಂ 531 ರ ಅಡಿಯಲ್ಲಿ ಸುರಕ್ಷಿತವಾಗಿರಲಿವೆ ಎಂದು ನ್ಯಾಯಾಲಯ ಹೇಳಿದೆ. ಅಂದರೆ, ಕೇವಲ ತಪ್ಪಾದ ಪ್ರತಿಜ್ಞಾವಿಧಿಯ ಆಧಾರದ ಮೇಲೆ ಅವರ ಇದುವರೆಗಿನ ನಿರ್ಣಯಗಳು ರದ್ದಾಗುವುದಿಲ್ಲ; ಆದರೆ ವಡಕ್ಕನಚೇರಿ ಗ್ರಾಮ ಪಂಚಾಯತ ಸದಸ್ಯನ ವಿಷಯದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಪಂಚಾಯತ ರಾಜ ಕಾಯಿದೆಯಲ್ಲಿ ಅಂತಹ ಸುರಕ್ಷತೆಯ ಸೌಲಭ್ಯವಿಲ್ಲ. ಹಾಗಾಗಿ ಇದುವರೆಗೆ ಆ ಸದಸ್ಯ ಮಾಡಿದ ಕೆಲಸಗಳನ್ನು ಅಸಿಂಧು ಎಂದು ಪರಿಗಣಿಸಲಾಗುವುದು; ಆದರೆ ಆತನಿಗೂ ಕೂಡ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಲಾಗಿದೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ಆಷಾಢಿ ವಾರಿಯಲ್ಲಿ ಭಕ್ತರಿಗೆ ಯಾವುದೇ ಅನಾನುಕೂಲತೆಯಾಗದಂತೆ ಜಾಗ್ರತೆ ವಹಿಸಿ! – ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ, ಮಹಾರಾಷ್ಟ್ರ ರಾಜ್ಯ