ಶರಿಯಾದಲ್ಲಿ ಮಹಿಳೆಯರಿಗೆ ಸಾರ್ವಜನಿಕವಾಗಿ ಮಾತನಾಡಲು ಅವಕಾಶವಿಲ್ಲದಿರುವಾಗ ಹುಡುಗಿಯು ‘ಅಲ್ಲಾ ಹು ಅಕ್ಬರ್’ ಎಂದು ಹೇಗೆ ಘೋಷಣೆ ಕೂಗಿದಳು ?

ಕರ್ನಾಟಕದಲ್ಲಿ ಹಿಜಾಬ್ ವಿಷಯದ ಬಗ್ಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಂದ ಪ್ರಶ್ನೆ.

ಆರಿಫ್ ಮೊಹಮ್ಮದ್ ಖಾನ್ ಮುಸ್ಲಿಂ ಚಿಂತಕ ಮತ್ತು ವಿದ್ವಾಂಸ. ಭಾರತದಲ್ಲಿನ ಕಪಟ ಜಾತ್ಯತಿತರು ಮತ್ತು ಪ್ರಗತಿ(ಅಧೋಗತಿ)ಪರರು ಅವರ ಆಲೋಚನೆಗಳನ್ನು ಅರಗಿಸಿಕೊಳ್ಳಲು ಅಸಾಧ್ಯವೆಂದು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು

ಹೊಸ ದೆಹಲಿ : ಹಿಜಾಬ್(ಮುಸ್ಲಿಂ ಮಹಿಳೆಯರು ತಮ್ಮ ತಲೆ ಮತ್ತು ಮುಖವನ್ನು ಮುಚ್ಚಿಕೊಳ್ಳಲು ಬಳಸುವ ಉಡುಪು) ಹೆಸರಿನ ಮೆಲೆ ವಾದಿಸುವ ಕೆಲವರು ನಿರಂತರವಾಗಿ ಶರಿಯಾವನ್ನು ಉಲ್ಲೇಖಿಸಿದ್ದಾರೆ. ಶರಿಯಾ ಅನ್ವಯವಾಗದ ದೇಶದಲ್ಲಿ ಮುಸ್ಲಿಮರು ವಾಸಿಸುವಂತಿಲ್ಲ ಎಂದು ಶರಿಯಾ ಕಾನೂನು ಹೇಳುತ್ತದೆ. ಇಸ್ಲಾಮ ಧರ್ಮವು ಮಹಿಳೆಯರ ಧ್ವನಿಯ ಮೇಲೆ ನಿರ್ಬಂಧಗಳು ಇವೆ. ಎಂದು ಶರಿಯಾ ಹೇಳುತ್ತದೆ. ಒಂದು ಹುಡುಗಿಗೆ ಸಾರ್ವಜನಿಕವಾಗಿ ತನ್ನ ಧ್ವನಿಯನ್ನು ತೆಗೆಯುವ ಹಕ್ಕು ಇಲ್ಲ.’ ಇದಕ್ಕಾಗಿಯೆ ಕರ್ನಾಟಕದ ಕಾಲೇಜಿನಲ್ಲಿ ಹುಡುಗಿಯೊಬ್ಬಳು ‘ಅಲ್ಲಾಹು ಅಕ್ಬರ್’ (ಅಲ್ಲಾ ಮಹಾನ್) ಎಂದು ಘೋಷಿಸುವುದು ತಪ್ಪಾಗಿದೆ. ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು, ” ನಿಮಗೆ ನಿಜವಾಗಿಯು ಶರಿಯಾವನ್ನು ಪಾಲಿಸಲು ಬಯಸಿದರೆ, ಅದನ್ನು ಸಂಪೂರ್ಣವಾಗಿ ಪಾಲಿಸಿ ಅಥವಾ ಬಿಟ್ಟು ಬಿಡಿ” ಎಂದು ಹೇಳಿದ್ದಾರೆ. ಕರ್ನಾಟಕದ ಕಾಲೆಜೊಂದರಲ್ಲಿ ಬುರ್ಖಾ ಧರಿಸಿದ್ದ ಹುಡುಗಿಯೊಬ್ಬಳಿಗೆ ಹಿಂದೂ ಹುಡುಗರು ನ್ಯಾಯಸಮ್ಮತವಾಗಿ ವಿರೊಧಿಸಿದಾಗ ಅವಳು ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದಳು. ಈ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯವಲ್ಲ ಎಂದು ಇಸ್ಲಾಂ ತನ್ನ ಪುಸ್ತಕಗಳಲ್ಲಿ ಹೇಳಿದೆ. ಈ ಕಾರಣದಿಂದಾಗಿ ಹಿಜಾಬ್ ಅನ್ನು ಸಿಖ್ಖರ ಕೂದಲಿಗೆ, ಕೃಪಾನ್(ಸಣ್ಣ ಚಾಕು)ಗೆ ಹೋಲಿಸಲಾಗುವದಿಲ್ಲ. ದೇಶ ಮೂರು ವಿಚ್ಛೇದನ ಪದ್ದತಿಯಿಂದ ಮುಕ್ತವಾಗಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಇಂತಹ ವಿವಾದವನ್ನು ಸೃಷ್ಟಿಸಲು ಪಿತೂರಿ ಮಾಡುತ್ತಿದ್ದಾರೆ.

೨. ಮುಸ್ಲಿಮ ಹೆಣ್ಣುಮಕ್ಕಳು ಶಿಕ್ಷಣ ಪಡೆಯುತ್ತಾರೋ ಇಲ್ಲವೋ? ಎಂದು ಏಕೆ ನೋಡುವದಿಲ್ಲ. ಎಷ್ಟು ಮುಸ್ಲಿಮ ಹುಡುಗಿಯರು ಶಾಲೆಗೆ ಹೋಗುತ್ತಿದ್ದಾರೆ? ಎಷ್ಟು ಹುಡುಗಿಯರು ಐ ಎ ಎಸ್ ಮತ್ತು ಐ ಪಿ ಎಸ್ ಉದ್ಯೋಗದಲ್ಲಿ ಆಯ್ಕೆಯಾಗಿದ್ದಾರೆ? ದೇಶದ ಜನಸಂಖ್ಯೆ ೧೨೫ ಕೋಟಿ. ಅವರಲ್ಲಿ ಬೆರಳೆಣಿಕೆಯಷ್ಟು ಜನರು ಹಿಜಾಬ್ ಬಗ್ಗೆ ಮಾತನಾಡುತ್ತಿದ್ದಾರೆ. ಅದನ್ನು ಎಲ್ಲರ ಧ್ವನಿ ಎಂದು ಹೇಳಲು ಸಾದ್ಯವಿಲ್ಲ.

೩. ಎಂ ಐ ಎಂ ಅಧ್ಯಕ್ಷ ಮತ್ತು ಸಂಸದ ಅಸಾದುದ್ದಿನ್ ಓವೈಸಿ ಅವರು “ಮುಂದೊಂದು ದಿನ ಹಿಜಾಬ್ ಧರಿಸಿದ ಮಹಿಳೆ ದೇಶದ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಇದು ಕೇವಲ ವದಂತಿ. ದೇಶ ಯಾರನ್ನು ಆಯ್ಕೆ ಮಾಡುತ್ತಾರೋ ಅವರೇ ದೇಶದ ಪ್ರಧಾನಿಯಾಗುತ್ತಾರೆ.