ತಾಲಿಬಾನ್‌ತನ್ನ ಸೈನ್ಯದ ತುಕಡಿಯ ಹೆಸರು ‘ಪಾಣಿಪತ’ ಎಂದು ಹೆಸರಿಟ್ಟು ಭಾರತಕ್ಕೆ ಕೆರಳಿಸುವ ಪ್ರಯತ್ನ

ಪಾಣಿಪತ್‌ನಲ್ಲಿ ಮರಾಠರು ಸೋಲನ್ನಪ್ಪಿದರು, ಆದರೆ ನಂತರ ಯಾವುದೇ ಮುಸಲ್ಮಾನ್ ಆಕ್ರಮಣಕಾರರು ಮತ್ತೆ ಭಾರತದ ಮೇಲೆ ಆಕ್ರಮಣ ನಡೆಸುವ ಧೈರ್ಯ ಮಾಡಿರಲಿಲ್ಲ, ಈ ಇತಿಹಾಸವನ್ನು ತಾಲಿಬಾನಿಗಳು ಗಮನದಲ್ಲಿಡಬೇಕು !

ನವದೆಹಲಿ : ತಾಲಿಬಾನ್ ಭಾರತವನ್ನು ಕೆರಳಿಸಲು ತನ್ನ ಒಂದು ಸೈನ್ಯದ ತುಕಡಿಗೆ ‘ಪಾಣಿಪತ’ ಎಂದು ಇಡಲು ನಿಶ್ಚಯಿಸಿದೆ. ಪಾಣಿಪತ ಇದು ಹರಿಯಾಣಾದ ಒಂದು ಜಿಲ್ಲೆಯಾಗಿದೆ. ಇದೇ ಸ್ಥಳದಲ್ಲಿ ೧೭೬೧ ರಲ್ಲಿ ಪಾಣಿಪತನ ಮೂರನೇ ಯುದ್ಧ ನಡೆದಿತ್ತು.

ಈ ಯುದ್ಧದಲ್ಲಿ ಆಗಿನ ಅಫಗಾಣ ಆಡಳಿಗಾರ ಅಹಮದಶಾಹ ಅಬ್ದಾಲಿಯಿಂದ ಮರಾಠರು ಪರಾಭವಗೊಂಡಿದ್ದರು, ಆದ್ದರಿಂದ ತಾಲಿಬಾನರು ಭಾರತವನ್ನು ಕೆರಳಿಸಲು ಪ್ರಯತ್ನಿಸಿದೆ. ಈ ತುಕಡಿ ಅಫಗಾನಿಸ್ತಾನದ ಪೂರ್ವ ಭಾಗದಲ್ಲಿ ಇರುವ ‘ನಾಂಗರಹಾರ’ ಪ್ರಾಂತದಲ್ಲಿ ನೇಮಿಸಲಾಗಿದೆ. ಈ ಪ್ರಾಂತದ ಗಡಿ ಪಾಕಿಸ್ತಾನಕ್ಕೆ ಹೊಂದಿಕೊಂಡಿದೆ.