ಎನ್‌ಸಿಇಆರ್‌ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ

  • ವಿಧಾನಪರಿಷತ್ ಕಲಾಪದ ಚುಕ್ಕೆ ಗುರುತಿನ ಪ್ರಶ್ನೆ

  • ಅಗತ್ಯವಿರುವ ಪಠ್ಯ ಸಾಮಗ್ರಿಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ!

(ಎನ್‌ಸಿಇಆರ್‌ಟಿ ಎಂದರೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ)

ಶಾಲಾ ಶಿಕ್ಷಣ ಸಚಿವ ದಾದಾಜಿ ಭೂಸೆ

ಮುಂಬಯಿ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (‘ಎನ್‌ಸಿಇಆರ್‌ಟಿ’ಯ) 8 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಮರಾಠಾ ಸಾಮ್ರಾಜ್ಯದ ನಕ್ಷೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರಿಗೆ ಸಂಬಂಧಿಸಿದ ಐತಿಹಾಸಿಕ ಉಲ್ಲೇಖಗಳನ್ನು ಕೈಬಿಡಲಾಗಿತ್ತು. ಈ ಹೆಮ್ಮೆಯ ಇತಿಹಾಸವನ್ನು ಪಠ್ಯದಲ್ಲಿ ಮರುಸೇರ್ಪಡೆ ಮಾಡಲು ರಾಜ್ಯ ಸರಕಾರವು ಕೇಂದ್ರ ಸರಕಾರದೊಂದಿಗೆ ನಿರಂತರವಾಗಿ ಬೆಂಬೆತ್ತುವಿಕೆ ಮಾಡುತ್ತಿದೆ, ಎಂದು ಶಾಲಾ ಶಿಕ್ಷಣ ಸಚಿವ ದಾದಾ ಭುಸೆ ಅವರು ವಿಧಾನಪರಿಷತ್ತಿನಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಸಚಿವ ಭುಸೆ ಅವರು, “ಎನ್‌ಸಿಇಆರ್‌ಟಿ ಜುಲೈ 2025 ರಲ್ಲಿ ಪ್ರಕಟಿಸಿದ ಇಂಗ್ಲಿಷ್ ಮಾಧ್ಯಮದ ಪಠ್ಯಪುಸ್ತಕದಿಂದ ಮರಾಠಾ ಸಾಮ್ರಾಜ್ಯದ ವಿಸ್ತರಣೆಯನ್ನು ತೋರಿಸುವ ನಕ್ಷೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ಉಲ್ಲೇಖಗಳನ್ನು ಕೈಬಿಟ್ಟಿರುವುದು ಗಮನಕ್ಕೆ ಬಂದಿದೆ. ಇದಕ್ಕೂ ಮುನ್ನ ಹಿಂದಿ ಮತ್ತು ಉರ್ದು ಮಾಧ್ಯಮದ ಪುಸ್ತಕಗಳಿಂದಲೂ ಈ ನಕ್ಷೆಯನ್ನು ತೆಗೆದುಹಾಕಲಾಗಿತ್ತು.

ಈ ನಡವಳಿಕೆಯಿಂದಾಗಿ ಛತ್ರಪತಿ ಶಿವಾಜಿ ಮಹಾರಾಜ ಪ್ರೇಮಿಗಳು ಮತ್ತು ಇತಿಹಾಸ ಪ್ರೇಮಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾತಾರಾದಲ್ಲಿ ಇದರ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಸಹ ನಡೆಸಲಾಗಿತ್ತು” ಎಂದರು.

ಹಿಂದೂ ಜನಜಾಗೃತಿ ಸಮಿತಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು!

ಶಾಲಾ ಶಿಕ್ಷಣ ಸಚಿವ ದಾದಾಜಿ ಭುಸೆ ಅವರಿಗೆ ಮನವಿ ಸಲ್ಲಿಸುತ್ತಿರುವ ಶ್ರೀ. ರವೀಂದ್ರ ನಲವಡೆ ಮತ್ತು ಶ್ರೀ. ಸುನೀಲ್ ಘನವಟ್ (ಎಡದಿಂದ)