ಅಜಿತ ಡೊವಲ ಇವರ ಮನೆಗೆ ನುಗ್ಗುವ ಪ್ರಯತ್ನ ಮಾಡುವ ಯುವಕನ ಬಂಧನ

‘ನನ್ನ ಶರೀರದಲ್ಲಿ ‘ಚಿಪ್’ (ಎಲೆಕ್ಟ್ರಾನಿಕ್ ಯಂತ್ರ) ಇದ್ದು ನನ್ನನ್ನು ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತಿದೆ ! – ಯುವಕನ ಹೇಳಿಕೆ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೊವಲ

ನವ ದೆಹಲಿ – ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೊವಲರವರ ಇಲ್ಲಿಯ ಮನೆಯಲ್ಲಿ ಒಬ್ಬ ಅಪರಿಚಿತ ಯುವಕ ನುಸುಳಲು ಪ್ರಯತ್ನಿಸುತ್ತಿರುವ ಘಟನೆ ನಡೆದಿದೆ. ಈ ಯುವಕನು ಡೊವಾಲ ಇವರ ಮನೆಯಲ್ಲಿ ಚತುಶ್ಚಕ್ರ ವಾಹನದಿಂದ ನುಗ್ಗುವ ಪ್ರಯತ್ನಿಸಿದನು; ಆದರೆ ಅಲ್ಲಿಯ ಭದ್ರತಾ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಆ ವ್ಯಕ್ತಿಯನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ. ಹಿಡಿದ ನಂತರ ಅವನು ವಿಚಿತ್ರ ಪದ್ಧತಿಯಲ್ಲಿ ಮಾತನಾಡುತ್ತಿರುವುದು ಕಂಡಿತು. ಆತ ‘ನನ್ನ ಶರೀರದಲ್ಲಿ ಯಾರೋ ‘ಚಿಪ್’ ಅಳವಡಿಸಿದ್ದಾರೆ ಮತ್ತು ನನ್ನನ್ನು ರಿಮೋಟ್ ಮೂಲಕ ನಿಯಂತ್ರಿಸುತ್ತಿದ್ದಾರೆ’, ಎಂದು ಹೇಳಿದನು. ಪೊಲೀಸರು ಅವನ ಸಂಪೂರ್ಣ ಶರೀರದ ತಪಾಸಣೆ ನಡೆಸಿದರು; ಆದರೆ ಪೊಲೀಸರಿಗೆ ಅವನ ಹತ್ತಿರ ಯಾವುದೇ ಚಿಪ್ ಸಿಗಲಿಲ್ಲ. ಈ ಯುವಕ ಬೆಂಗಳೂರು ನಿವಾಸಿಯಾಗಿದ್ದಾನೆ. ಅವನು ದೆಹಲಿ ಪೊಲೀಸರ ಉಗ್ರ ನಿಗ್ರಹ ದಳದ ಹಾಗೂ ವಿಶೇಷ ವಿಭಾಗದಿಂದ ವಿಚಾರಣೆ ನಡೆಸಲಾಗುತ್ತಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಜೈಶ್-ಎ-ಮೊಹಮ್ಮದ್‌ನ ಓರ್ವ ಭಯೋತ್ಪಾದಕನಿಂದ ಡೊವಾಲ ಇವರ ಕಾರ್ಯಾಲಯದಲ್ಲಿ ಗೌಪ್ಯತೆಯ ರೀತಿಯಲ್ಲಿ ನಿರೀಕ್ಷಣೆ ಮಾಡುತ್ತಿದ್ದನು. ಇದರ ವಿಡಿಯೋ ಬೆಳಕಿಗೆ ಬಂದಿತ್ತು. ಸಂಬಂಧಿತ ಉಗ್ರನು ಈ ವಿಡಿಯೋ ಪಾಕಿಸ್ತಾನಿ ಉಗ್ರರಿಗೆ ಕಳುಹಿಸಿದ್ದ. ಇದರ ನಂತರ ಡೋವಾಲ್ ಇವರ ಭದ್ರತೆಯನ್ನು ಹೆಚ್ಚಿಸಲಾಗಿತ್ತು.