ಭಾರತೀಯ ಪ್ರಜೆಗಳು ಯುಕ್ರೇನ್ ತೊರೆಯಬೇಕು ! – ಭಾರತೀಯ ರಾಯಭಾರ ಕಚೇರಿಯಿಂದ ಸಲಹೆ

ಯುಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧದ ಸಾಧ್ಯತೆ

ನವದೆಹಲಿ : ಯುಕ್ರೇನ್ ಮತ್ತು ರಷ್ಯಾ ನಡುವೆ ಯಾವಾಗ ಬೇಕಾದರೂ ಯುದ್ಧ ನಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ಯುಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿಯು ನಾಗರಿಕರಿಗೆ ವಿಶೇಷವಾಗಿ ವಿದ್ಯಾಥಿಗಳಿಗೆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವಂತೆ ಸೂಚಿಸಿದೆ.

ರಾಯಭಾರಿಯು ಪ್ರಕಟಿಸಿದ ಪತ್ರಿಕಾ ಪ್ರಕಟಣೆಯಲ್ಲಿ, ‘ಅತ್ಯಂತ ಅಗತ್ಯವಿದ್ದಲ್ಲಿ ಮಾತ್ರ ಯುಕ್ರೇನ್‌ನಲ್ಲಿ ಉಳಿಯಿರಿ. ಯುಕ್ರೇನ್‌ನಲ್ಲಿ ಇರುವವರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು. ಅವರು ಎಲ್ಲಿದ್ದಾರೆ ಎಂಬುದನ್ನು ರಾಯಭಾರ ಕಚೇರಿಗೆ ವರದಿ ಮಾಡಬೇಕು.’ ಭಾರತೀಯ ರಾಯಭಾರಿ ಕಚೇರಿಯು ಎಂದಿನಂತೆ ಕೆಲಸ ಮುಂದುವರಿಯುತ್ತಿದ್ದುದರ ಮಾಹಿತಿಯನ್ನು ಪತ್ರಿಕಾ ಪ್ರಕಟಣೆಯಲ್ಲಿ ನೀಡಿದೆ. ಅಮೇರಿಕಾವು ಈ ಮೊದಲೇ ತನ್ನ ನಾಗರಿಕರಿಗೆ ಯುಕ್ರೇನ್ ತೊರೆಯುವಂತೆ ಸಲಹೆ ನೀಡಿದೆ.