ಕಾಂಗ್ರೆಸ ವಿಭಜನೆಯ ಸಮಯದಲ್ಲಿ ಹಾಗೂ ೧೯೬೫ ಹಾಗೂ ೧೯೭೧ ರ ಯುದ್ಧದ ಸಮಯದಲ್ಲಿ ಗುರುನಾನಕರ ತಪೋಭೂಮಿಯನ್ನು ಭಾರತದೊಳಗೆ ತರುವ ಅವಕಾಶವನ್ನು ಕಳೆದುಕೊಂಡಿತು ! – ಪ್ರಧಾನಮಂತ್ರಿ ಮೋದಿ

ಕಾಂಗ್ರೆಸ ಕಳೆದುಕೊಂಡ ಅವಕಾಶವನ್ನು ಈಗಿನ ಕೇಂದ್ರ ಸರಕಾರವು ಸಾಧಿಸಬೇಕು, ಎಂದು ಹಿಂದೂಗಳಿಗೆ ಹಾಗೂ ಸಿಕ್ಖರಿಗೆ ಅನಿಸುತ್ತದೆ !

ಪಾಠಾಣಕೋಟ (ಪಂಜಾಬ) – ೧೯೪೭ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿ ಕಾಂಗ್ರೆಸ್ಸಿನ ಕೈಯ್ಯಲ್ಲಿ ದೇಶವಿದ್ದಾಗ ಪಂಜಾಬಿನ ಗಡಿಯಿಂದ ಕೇವಲ ೬ ಕಿಲೋಮೀಟರ ಅಂತರದಲ್ಲಿ ಪಾಕಿಸ್ತಾನದಲ್ಲಿರುವ ‘ಗುರುನಾನಕ’ರ ತಪೋಭೂಮಿಯನ್ನು ಭಾರತಕ್ಕೆ ಇರಬೇಕು ಎಂಬುದು ಅವರ ಗಮನಕ್ಕೆ ಬರಲಿಲ್ಲ. ಕಾಂಗ್ರೆಸ್ಸಿಗರು ಪಾಪ ಮಾಡಿದ್ದಾರೆ. ನಮ್ಮ ಭಾವನೆಗಳನ್ನು ಚಿಂದಿಗೊಳಿಸಿದ್ದಾರೆ.

೧೯೬೫ ರ ಯುದ್ಧದಲ್ಲಿ ಭಾರತೀಯ ಸೈನ್ಯವು ಲಾಹೋರಿನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ತಯಾರಿಯಲ್ಲಿರುವಾಗ ಈ ತಪೋಭೂಮಿಯನ್ನು ಭಾರತಕ್ಕೆ ಸೇರಿಸುವ ಅವಕಾಶವಿತ್ತು. ೧೯೭೧ ರ ಬಾಂಗ್ಲಾದೇಶದ ಯುದ್ಧದ ಸಮಯದಲ್ಲಿ ೯೦ ಸಾವಿರ ಪಾಕಿಸ್ತಾನಿ ಸೈನಿಕರು ಭಾರತದ ವಶದಲ್ಲಿದ್ದರು. ಪಾಕಿಸ್ತಾನ ತನ್ನ ಮಂಡಿಯೂರಿತ್ತು. ಆಗ ಕಾಂಗ್ರೆಸ ಸರಕರವು ‘ಗುರುನಾನಕರ ತಪೋಭೂಮಿಯ ಬದಲು ಆ ಸೈನಿಕರನ್ನು ಬಿಡುವೆವು’, ಎಂದು ಹೇಳಬೇಕಾಗಿತ್ತು. ಈ ರೀತಿ ಕಾಂಗ್ರೆಸ ತನ್ನ ೩ ಅವಕಾಶವನ್ನು ಕಳೆದುಕೊಂಡಿತು, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಟೀಕಿಸಿದರು.