ಭಾರತದ ವತಿಯಿಂದ ಇಸ್ಲಾಮೀ ದೇಶಗಳ ಸಂಘಟನೆಯಾದ ‘ಆರ್ಗನಾಯಝೇಶನ ಆಫ್ ಇಸ್ಲಾಮಿಕ ಕೋಆಪರೇಶನ’ (ಒ.ಐ.ಸಿ.) ಈ ಸಂಘಟನೆಗೆ ಪ್ರತ್ಯುತ್ತರ !

ಒ.ಐ.ಸಿ. ಸಂಘಟನೆಯು ಕೆಲವು ಸ್ವಾರ್ಥ ಮತ್ತು ಪ್ರಚಾರಕರ ಸ್ವಾಧೀನ !

ನವ ದೆಹಲಿ – ನಾವು ‘ಆರ್ಗನಾಯಝೇಶನ ಆಫ್ ಇಸ್ಲಾಮಿಕ ಕೋಆಪರೇಶನ’ (‘ಓ.ಐ.ಸಿ.’ಯ)ನ ಪ್ರಧಾನ ಕಾರ್ಯದರ್ಶಿಗಳ ಮತ್ತೊಂದು ದಾರಿತಪ್ಪಿಸುವ ಹೇಳಿಕೆಯನ್ನು ನೋಡಿದ್ದೇವೆ. ಸಚಿವಾಲಯದಿಂದ ಬಂದ ಹೇಳಿಕೆಯಿಂದ, ಈ ಸಂಘಟನೆಯು ಕೆಲವು ಸ್ವಾರ್ಥ ಹಾಗೂ ಪ್ರಚಾರಕರ ಸ್ವಾಧೀನದಲ್ಲಿದೆ. ನಮ್ಮ ದೇಶದಲ್ಲಿರುವ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ವಿಚಾರ ಮಾಡಲಾಗುತ್ತದೆ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅನುಸಾರವಾಗಿ ಅದನ್ನು ಪರಿಹರಿಸಲಾಗುತ್ತದೆ.

ಒ.ಐ.ಸಿ. ಸಚಿವಾಲಯದ ಮತಾಂಧ ಮಾನಸಿಕತೆಯು ಈ ವಾಸ್ತವವನ್ನು ಸರಿಯಾಗಿ ಶ್ಲಾಘಿಸಲು ಬಿಡುತ್ತಿಲ್ಲ. ಒ.ಐ.ಸಿ.ಯು ಕೇವಲ ಭಾರತದ ವಿರುದ್ಧ ತಪ್ಪಾದ ಭಾವನೆಯನ್ನು ಹಬ್ಬಿ ಅದರ ಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ, ಎಂಬ ಶಬ್ಧಗಳಲ್ಲಿ ಕಿವಿಹಿಂಡಿದೆ. ಒ.ಐ.ಸಿ. ಎಂಬ ಇಸ್ಲಾಮಿ ದೇಶಗಳ ಸಂಘಟನೆಯು ಭಾರತದ ಕರ್ನಾಟಕದಲ್ಲಿ ಹಿಜಾಬ್ ಪ್ರಕರಣದ ಮೇರಿಗೆ ‘ಮುಸಲ್ಮಾನರಿಗೆ ಹಾಗೂ ಮಹಿಳೆಯರಿಗೆ ಸಂರಕ್ಷಣೆ ನೀಡಲಿ’, ಎಂಬ ಬೇಡಿಕೆ ಮಾಡಿತ್ತು. ಅದಕ್ಕೆ ಭಾರತವು ಪ್ರತ್ಯುತ್ತರ ನೀಡಿದೆ.