‘ಬಾಜಿರಾವ್ ಮಸ್ತಾನಿ’ ಚಲನಚಿತ್ರದ ವೇದಿಕೆಯಲ್ಲಿ ಭೂತವನ್ನು ನೋಡಿದ್ದೇನೆ – ನಟ ರಣವೀರ್ ಸಿಂಗ್ !

ಈ ಬಗ್ಗೆ ಅಂಧಶ್ರದ್ಧೆ ನಿರ್ಮೂಲನೆಯವರು ಏನು ಹೇಳಲಿಕ್ಕಿದೆ ? ಈಗ ಯಾರನ್ನು ‘ವಿಜ್ಞಾನವಾದಿ’ ಎಂದು ಕರೆಯಬೇಕು ? ಈ ಘಟನೆಯನ್ನು ‘ಮೂಢನಂಬಿಕೆ’ ಎಂದು ಕರೆದು ಕೈ ಚೆಲ್ಲುವವರನ್ನೋ ಅಥವಾ ಈ ಸೂಕ್ಷ್ಮ ಶಕ್ತಿಗಳನ್ನು ಸಂಶೋಧಿಸುವ ಮೂಲಕ ಅದರ ಹಿಂದಿನ ಸತ್ಯವನ್ನು ತಿಳಿದಿರುವವರನ್ನೋ ? ಎಂದು ಜನರಿಗೆ ಗೊತ್ತಾಗಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಇವರು ತಿರುಪತಿ ದೇವಸ್ಥಾನದಲ್ಲಿ ಭಗವಾನ ಶ್ರೀ ವೆಂಕಟೇಶ್ವರ ದರ್ಶನವನ್ನು ಪಡೆದರು !

ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಇವರು ಇಲ್ಲಿನ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಾನ್ ವೆಂಕಟೇಶ್ವರನ ದರ್ಶನವನ್ನು ಪಡೆದರು. ಜೊತೆಗೆ ಅವರು ಭಗವಾನ ವೆಂಕಟೇಶ್ವರನ ಪೂಜೆ ಮಾಡಿದರು ಮತ್ತು ಏಕಾಂತ ಸೇವೆಯಲ್ಲಿಯೂ ಸಹ ಭಾಗವಹಿಸಿದರು.

ಜಮ್ಮು – ಕಾಶ್ಮೀರದಲ್ಲಿ ಇಂದು ಶ್ರೀ ವೆಂಕಟೇಶ್ವರ ದೇವಸ್ಥಾನದ ಭೂಮಿ ಪೂಜೆ ಸಮಾರಂಭ !

ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ವತಿಯಿಂದ ಜಮ್ಮು – ಕಾಶ್ಮೀರದಲ್ಲಿ ನಿರ್ಮಿಸಲಾಗುತ್ತಿರುವ ಭಗವಾನ ವೆಂಕಟೇಶ್ವರ ದೇವಾಲಯದ ಭೂಮಿಪೂಜೆಯ ಸಮಾರಂಭವು ಜೂನ್ ೧೩, ೨೦೨೧ ರಂದು ರಾಜ್ಯಪಾಲ ಮನೋಜ್ ಸಿನ್ಹಾ ಅವರ ಹಸ್ತದಿಂದ ನಡೆಯಲಿದೆ.

ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಹರಕೆ ಮುಡಿ ವಿವಾದ ಪ್ರಕರಣ

ಕಳೆದ ೨೫ ವರ್ಷಗಳಿಂದ ನಡೆಯುತ್ತಿರುವ ಹರಕೆ ಮುಡಿ ಕೂದಲು ಪ್ರಕರಣದ ವಿವಾದ ಅಂತಿಮ ತೆರೆ ಬಿದ್ದಿದ್ದು ಕ್ಷೌರದ ಉತ್ಪನ್ನದ ಸಂಪೂರ್ಣ ಹಕ್ಕನ್ನು ದೇವಸ್ಥಾನಕ್ಕೆ ನೀಡಲಾಗಿದ್ದು, ಕ್ಷೌರವನ್ನು ಮಾತ್ರ ನಯನಜ ಕ್ಷತ್ರಿಯ ಸಂಘಕ್ಕೆ ನೀಡಲಾಗಿದೆ. ಇಲ್ಲಿನ ಸಿವಿಲ್ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.

ಬೆಂಗಳೂರಿನಲ್ಲಿ ಬೇಹುಗಾರಿಕೆಗಾಗಿ ನಡೆಯುತ್ತಿದ್ದ ಅಕ್ರಮ ದೂರವಾಣಿ ಕೇಂದ್ರದ ಮೇಲೆ ಪೊಲೀಸರ ದಾಳಿ !

ಕರ್ನಾಟಕ ಪೊಲೀಸರು ಮತ್ತು ಸೇನಾ ಗುಪ್ತಚರ ಇಲಾಖೆಯು ಇಲ್ಲಿ ಅಕ್ರಮವಾಗಿ ನಡೆಸಲಾಗುುತ್ತಿದ್ದ ದೂರವಾಣಿ ಕೇಂದ್ರದ ಮೇಲೆ ದಾಳಿ ನಡೆಸಿ ಮುಚ್ಚಿದೆ. ಈ ಕೇಂದ್ರಕ್ಕೆ ಅಂತರರಾಷ್ಟ್ರೀಯ ಕರೆ ಬಂದಾಗ, ಅದನ್ನು ಸ್ಥಳೀಯ ಕರೆಯಾಗಿ ಬದಲಾಯಿಸಲಾಗುತ್ತಿತ್ತು. ಕರ್ನಾಟಕ ಪೊಲೀಸರು ಮತ್ತು ಸೇನಾ ಗುಪ್ತಚರ ಇಲಾಖೆಯು ಇಲ್ಲಿ ಅಕ್ರಮವಾಗಿ ನಡೆಸಲಾಗುುತ್ತಿದ್ದ ದೂರವಾಣಿ ಕೇಂದ್ರದ ಮೇಲೆ ದಾಳಿ ನಡೆಸಿ ಮುಚ್ಚಿದೆ. ಈ ಕೇಂದ್ರಕ್ಕೆ ಅಂತರರಾಷ್ಟ್ರೀಯ ಕರೆ ಬಂದಾಗ, ಅದನ್ನು ಸ್ಥಳೀಯ ಕರೆಯಾಗಿ ಬದಲಾಯಿಸಲಾಗುತ್ತಿತ್ತು. ಜೊತೆಗೆ ವಿದೇಶದಿಂದ ದೂರವಾಣಿ ಕರೆ ಬರುತ್ತಿದೆ ಎಂದು ಯಾರಿಗೂ ತಿಳಿಯಬಾರದು ಮತ್ತು ಈ ಮೂಲಕ ಬೇಹುಗಾರಿಕೆ ನಡೆಸಲು ಆಗಬೇಕು ಎಂದು ಪ್ರಯತ್ನಿಸಲಾಗುತ್ತಿತ್ತು.

ಲಡಾಖ್ ಗಡಿಯಲ್ಲಿ ಭಾರತವೇ ಹಿಂದೆ ಸಾಗುತ್ತಿದ್ದು ಚೀನಾವು ಮುಂದೆ ಸರಿಯುತ್ತಿದೆ ! – ಡಾ. ಸುಬ್ರಹ್ಮಣ್ಯಂ ಸ್ವಾಮಿಯ ಹೇಳಿಕೆ

ಲಡಾಖ್‍ನಲ್ಲಿ ಸಂಘರ್ಷ ನಡೆದ ಸ್ಥಳದಿಂದ ಭಾರತೀಯ ಸೇನೆಯು ಮಾತ್ರ ಹಿಂದೆ ಸರಿದಿದೆ ಆದರೆ, ಚೀನಾ ಸೇನೆ ಇನ್ನೂ ಇದೆ ಮತ್ತು ಅದು ಮುಂದೆ ಬಂದಿದೆ ಎಂದು ಬಿಜೆಪಿ ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿಯವರು ಟ್ವೀಟ್ ಮಾಡಿದ್ದಾರೆ.

ವಿವಾಹಿತ ಮತ್ತು ಅವಿವಾಹಿತ ಜೋಡಿಗಳು ‘ಲಿವ್ ಇನ್ ರಿಲೇಶನ್’ನಲ್ಲಿ ಒಟ್ಟಿಗೆ ಇರಲು ಸಾಧ್ಯವಿಲ್ಲ ! – ರಾಜಸ್ಥಾನ ಉಚ್ಚನ್ಯಾಯಾಲಯ

‘ಲಿವ್ ಇನ ರಿಲೇಶನ್’ ಎಂಬುದು ಪಾಶ್ಚಿಮಾತ್ಯರ ಸಂಸ್ಕೃತಿಯಾಗಿದೆ. ಭಾರತದಲ್ಲಿ ಯಾರಾದರೂ ಅದನ್ನು ಅನುಕರಿಸುತ್ತಿದ್ದರೆ, ಅದನ್ನು ಅಪರಾಧವೆಂದು ಪರಿಗಣಿಸಬೇಕು. ಭಾರತೀಯ ಸಂಸ್ಕೃತಿಯನ್ನು ರಕ್ಷಿಸಲು ಸರಕಾರವು ಪ್ರಯತ್ನಿಸಬೇಕು !

ಕುಲಭೂಷಣ ಜಾಧವ ಅವರಿಗೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಪಾಕಿಸ್ತಾನ ಸಂಸತ್ತಿನಿಂದ ಮಾನ್ಯತೆ

ಅಂತರರಾಷ್ಟ್ರೀಯ ನ್ಯಾಯಾಲಯದ ಒತ್ತಡಕ್ಕೆ ಮಣಿದ ಪಾಕಿಸ್ತಾನದ ‘ನ್ಯಾಶನಲ್ ಅಸೆಂಬ್ಲಿ’ಯು ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ ಜಾಧವ ಅವರಿಗೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಅನುಮೋದನೆ ನೀಡಿದೆ. ಇದರಿಂದ ಕುಲಭೂಷಣ್ ಜಾಧವ ಅವರಿಗೆ ದೊಡ್ಡ ಸಾಂತ್ವನ (ಸಮಾಧಾನ) ಸಿಕ್ಕಿದೆ.

ಹಿಂದೂಗಳು ೫ ರಿಂದ ೬ ಮಕ್ಕಳನ್ನು ಹಡೆಯಿರಿ ! – ಮಹಂತ ನರಸಿಂಹಾನಂದ

ಮುಸಲ್ಮಾನ ಜನಸಂಖ್ಯೆಯು ಬೆಳೆಯುತ್ತಿರುವ ಪದ್ಧತಿಯನ್ನು ಗಮನಿಸಿದರೆ, ಇದರಿಂದ ದೊಡ್ಡ ಬಿಕ್ಕಟ್ಟು ಬರಲಿದೆ. ಇದಕ್ಕಾಗಿ ಪ್ರತಿಯೊಬ್ಬ ಹಿಂದೂವು ಕನಿಷ್ಠ ೫ ರಿಂದ ೬ ಮಕ್ಕಳಿಗೆ ಜನ್ಮ ನೀಡಬೇಕು ಮತ್ತು ಪ್ರತಿಯೊಬ್ಬ ಹಿಂದೂಗಳು ಶಸ್ತ್ರಸಜ್ಜಿತರಾಗಿರಬೇಕು ಎಂದು ಇಲ್ಲಿನ ಡಾಸನಾ ದೇವಸ್ಥಾನದ ಮಹಂತ ನರಸಿಂಹಾನಂದ ಇವರು ಹೇಳಿದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಏಷ್ಯಾದ ಶ್ರೇಷ್ಠ ನಾಯಕ ಪ್ರಶಸ್ತಿ

ಪದ್ಮವಿಭೂಷಣ, ಕರ್ನಾಟಕ ರತ್ನ ಪುರಸ್ಕೃತರಾದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಪ್ರತಿಷ್ಠಿತ ‘ಏಷ್ಯಾದ ಶ್ರೇಷ್ಠ ನಾಯಕ’ ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ಡಾ. ಹೆಗ್ಗಡೆಯವರ ಮುಂದಾಳತ್ವದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ‘ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯವು ‘ಏಷ್ಯಾದ ಹೆಮ್ಮೆ’ (ಪ್ರೈಡ್ ಆಫ್ ಏಷ್ಯಾ) ಪ್ರಶಸ್ತಿ ಲಭಿಸಿದೆ