ಲಡಾಖ್ ಗಡಿಯಲ್ಲಿ ಭಾರತವೇ ಹಿಂದೆ ಸಾಗುತ್ತಿದ್ದು ಚೀನಾವು ಮುಂದೆ ಸರಿಯುತ್ತಿದೆ ! – ಡಾ. ಸುಬ್ರಹ್ಮಣ್ಯಂ ಸ್ವಾಮಿಯ ಹೇಳಿಕೆ

ಬಿಜೆಪಿ ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿ

ನವ ದೆಹಲಿ – ಲಡಾಖ್‍ನಲ್ಲಿ ಸಂಘರ್ಷ ನಡೆದ ಸ್ಥಳದಿಂದ ಭಾರತೀಯ ಸೇನೆಯು ಮಾತ್ರ ಹಿಂದೆ ಸರಿದಿದೆ ಆದರೆ, ಚೀನಾ ಸೇನೆ ಇನ್ನೂ ಇದೆ ಮತ್ತು ಅದು ಮುಂದೆ ಬಂದಿದೆ ಎಂದು ಬಿಜೆಪಿ ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿಯವರು ಟ್ವೀಟ್ ಮಾಡಿದ್ದಾರೆ.

ಡಾ. ಸ್ವಾಮಿ ಇವರನ್ನು ‘ಮೇನ್ಷನ್'(ಉದ್ದೇಶಿಸಿ) ಮಾಡಲಾದ ಓರ್ವ ಟ್ವಿಟ್ಟರ್ ಬಳಕೆದಾರರು, ‘ಲಡಾಖ್‍ನಲ್ಲಿ ಒಂದು ವರ್ಷದ ಸಂಘರ್ಷದ ನಂತರ, ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಕೊನೆಗೊಳ್ಳಬೇಕಿತ್ತು.’ ಎಂದಿದ್ದಾರೆ ಹಾಗೂ ಈ ಕುರಿತು ಈ ಟ್ವಿಟರ್ ಬಳಕೆದಾರರು ಒಂದು ವರದಿಯನ್ನು ಸಲ್ಲಿಸಿ ಅದರಲ್ಲಿ ಭಾರತ ಮತ್ತು ಚೀನಾ ಇವುಗಳ ನಡುವಿನ ಸ್ಥಿತಿಯು ಮೊದಲಿಗಿಂತ ಹೆಚ್ಚು ಉದ್ವಿಗ್ನವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಡಾ. ಸ್ವಾಮಿ ಪ್ರತಿಕ್ರಿಯೆ ನೀಡುತ್ತಾ, ‘ನಿಜವಾಗಿಯೂ ಹಾಗೇಯೇ ಇದೆಯೇ? ಚೀನಾದ ಎಲ್ಲ ಸೈನ್ಯವನ್ನು ಹಿಂತೆಗೆದುಕೊಳ್ಳುವುದಾಗಿ ವಿದೇಶಾಂಗ ಸಚಿವಾಲಯವು ಘೋಷಿಸಿತ್ತು. ಆದರೆ ವಾಸ್ತವದಲ್ಲಿ ಭಾರತ ಮಾತ್ರ ಮರಳಿ ಬಂದಿದೆ ಮತ್ತು ಚೀನಾ ಮತ್ತಷ್ಟು ಮುಂದೆ ಸಾಗಿ ಬರುತ್ತಿದೆ ಎಂದು ಈಗ ನನಗೆ ಅರ್ಥವಾಗಿದೆ.’ ಎಂದು ಹೇಳಿದ್ದಾರೆ.