ಬೆಂಗಳೂರಿನಲ್ಲಿ ಬೇಹುಗಾರಿಕೆಗಾಗಿ ನಡೆಯುತ್ತಿದ್ದ ಅಕ್ರಮ ದೂರವಾಣಿ ಕೇಂದ್ರದ ಮೇಲೆ ಪೊಲೀಸರ ದಾಳಿ !

ಇಬ್ರಾಹಿಂ ಪುಲತ್ತಿ ಮತ್ತು ಕೆ.ವಿ. ಗೌತಮ್

ಬೆಂಗಳೂರು – ಕರ್ನಾಟಕ ಪೊಲೀಸರು ಮತ್ತು ಸೇನಾ ಗುಪ್ತಚರ ಇಲಾಖೆಯು ಇಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ದೂರವಾಣಿ ಕೇಂದ್ರದ ಮೇಲೆ ದಾಳಿ ನಡೆಸಿ ಮುಚ್ಚಿದೆ. ಈ ಕೇಂದ್ರಕ್ಕೆ ಅಂತರರಾಷ್ಟ್ರೀಯ ಕರೆ ಬಂದಾಗ, ಅದನ್ನು ಸ್ಥಳೀಯ ಕರೆಯಾಗಿ ಬದಲಾಯಿಸಲಾಗುತ್ತಿತ್ತು. ಜೊತೆಗೆ ವಿದೇಶದಿಂದ ದೂರವಾಣಿ ಕರೆ ಬರುತ್ತಿದೆ ಎಂದು ಯಾರಿಗೂ ತಿಳಿಯಬಾರದು ಮತ್ತು ಈ ಮೂಲಕ ಬೇಹುಗಾರಿಕೆ ನಡೆಸಲು ಆಗಬೇಕು ಎಂದು ಪ್ರಯತ್ನಿಸಲಾಗುತ್ತಿತ್ತು. ವಿದೇಶಿ ಗೂಢಚಾರರಿಗೆ ಗೌಪ್ಯ ಮಾಹಿತಿಯನ್ನು ನೀಡಲಾಗುತ್ತಿತ್ತು. ಈ ಪ್ರಕರಣದಲ್ಲಿ ಕೇರಳದ ಮಲ್ಲಾಪುರಂ ನಿವಾಸಿ ಇಬ್ರಾಹಿಂ ಪುಲತ್ತಿ ಮತ್ತು ತಮಿಳುನಾಡಿನ ನಿವಾಸಿ ಕೆ.ವಿ. ಗೌತಮ್ ಅವರನ್ನು ಬಂಧಿಸಲಾಗಿದೆ. ಅವರಿಂದ ೩೨ ಸಿಮ್ ಕಾರ್ಡ್‍ಗಳು ಮತ್ತು ೩೦ ಇತರ ‘ಎಲೆಕ್ಟ್ರಾನಿಕ್’ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.