ಈ ಬಗ್ಗೆ ಅಂಧಶ್ರದ್ಧೆ ನಿರ್ಮೂಲನೆಯವರು ಏನು ಹೇಳಲಿಕ್ಕಿದೆ ? ಈಗ ಯಾರನ್ನು ‘ವಿಜ್ಞಾನವಾದಿ’ ಎಂದು ಕರೆಯಬೇಕು ? ಈ ಘಟನೆಯನ್ನು ‘ಮೂಢನಂಬಿಕೆ’ ಎಂದು ಕರೆದು ಕೈ ಚೆಲ್ಲುವವರನ್ನೋ ಅಥವಾ ಈ ಸೂಕ್ಷ್ಮ ಶಕ್ತಿಗಳನ್ನು ಸಂಶೋಧಿಸುವ ಮೂಲಕ ಅದರ ಹಿಂದಿನ ಸತ್ಯವನ್ನು ತಿಳಿದಿರುವವರನ್ನೋ ? ಎಂದು ಜನರಿಗೆ ಗೊತ್ತಾಗಿದೆ.
ಮುಂಬಯಿ : ನಟ ರಣವೀರ್ ಸಿಂಗ್ ಸಂದರ್ಶನವೊಂದರಲ್ಲಿ ‘ಬಾಜಿರಾವ್ ಮಸ್ತಾನಿ’ ಚಲನಚಿತ್ರದ ವೇದಿಕೆ(ಸೆಟ್)ಯಲ್ಲಿ ಭೂತವೊಂದನ್ನು ನೋಡಿದ್ದೇನೆ ಎಂದು ಹೇಳಿದರು. ಆ ಭೂತ ಎಂದರೆ ‘ಬಾಜಿರಾವ್ ಪೇಶ್ವೆ’ಯ ಆತ್ಮ ಎಂದು ಅವರು ಹೇಳಿದ್ದಾರೆ. ನಾನು ಹಿಂದೆಂದೂ ಆತ್ಮಗಳು ಮತ್ತು ದೆವ್ವಗಳನ್ನು ನಂಬುತ್ತಿರಲಿಲ್ಲ; ಆದರೆ ಆಗ ನನಗೆ ತುಂಬಾ ಭಯವಾಗಿತ್ತು. ಇದು ನನಗೆ ಚಿತ್ರೀಕರಣದ ಅತ್ಯಂತ ಕಷ್ಟದ ದಿನಗಳಾಗಿದ್ದವು, ಎಂದು ರಣವೀರ್ ಸಿಂಗ್ ಹೇಳಿದ್ದಾರೆ.
When Ranveer Singh thought he saw Bajirao’s ghost on Bajirao Mastani set, called it ‘trippy experience’ https://t.co/vB49KClQLN
— Hindustan Times (@HindustanTimes) June 10, 2021
ಈ ಸಮಯದಲ್ಲಿ ಸಿಂಗ್ ಅವರು ಮುಂದಿನಂತೆ ಹೇಳಿದರು,
೧. ನನ್ನ ಸುತ್ತಲೂ ಯಾವಾಗಲೂ ಯಾರಾದರೂ ಇದ್ದಾರೆ ಎಂದು ನನಗೆ ಅರಿವಾಗುತ್ತಿತ್ತು. ‘ಅದು ಬಾಜಿರಾವ್ ಆಗಿರಬೇಕು’, ಎಂದು ನನಗೆ ಅನಿಸಿತು.
೨. ಬಾಜಿರಾವ್ ಪೇಶ್ವೆ ಅವರ ಆತ್ಮವು ನನಗೆ ನಿಜವಾಗಿಯೂ ಕಂಡರೆ ಏನಾಗುವುದು ಎಂದು ನಾನು ನಿರಂತರವಾಗಿ ಯೋಚಿಸುತ್ತಿದ್ದೆ, ನಾನು ಯಾಕೆ ಹಾಗೆ ಯೋಚಿಸುತ್ತಿದ್ದೇನೆ ಎಂದು ನನಗೆ ಗೊತ್ತಿಲ್ಲ; ಆದರೆ ಕೆಲವೇ ದಿನಗಳಲ್ಲಿ, ಅದು ನಿಜವಾಗಿ ಸಂಭವಿಸಿತು. ‘ನಾನು ಅವನೇ (ಬಾಜಿರಾವ್) ಆಗಿದ್ದೇನೆ’, ಎಂದು ಯಾರೋ ನನ್ನ ಕಿವಿಯಲ್ಲಿ ಪಿಸುಗುಟ್ಟುತ್ತಿರುವುದು ನನಗೆ ಅರಿವಾಯಿತು.
೩. ಒಂದು ದಿನ ನನಗೆ ವೇದಿಕೆಯಲ್ಲಿ ಒಂದು ದೊಡ್ಡ ಟಾಸ್ಕಅನ್ನು ನೀಡಲಾಯಿತು. ಈ ಟಾಸ್ಕ ಉತ್ತಮವಾಗಿ ನಡೆಯಬೇಕೆಂದು ನಾನು ಪ್ರಾರ್ಥಿಸುತ್ತಿದ್ದೆ. ವೇದಿಕೆಯ ಮೇಲೆ ಕಪ್ಪು ಬಣ್ಣದ ಗೋಡೆ ಇತ್ತು. ಈ ಗೋಡೆಯ ಮೇಲೆ ಬಿಳಿ ಧೂಳು ಸಂಗ್ರಹವಾಗಿ ಒಂದು ವಿಶಿಷ್ಟ ಆಕೃತಿಯು ತನ್ನಿಂದತಾನೇ ಮೂಡಿತು. ಅದೇ ಪೇಟ, ಅದೇ ಕಣ್ಣುಗಳು, ಅದೇ ಮೀಸೆ ! ಅದು ನಿಖರವಾಗಿ ಬಾಜಿರಾವ್ ಪೇಶ್ವೆಯವರಂತೆಯೇ ಆಕೃತಿ ಮೂಡಿತ್ತು. ಈ ಆಕೃತಿಯನ್ನು ವೇದಿಕೆಯಲ್ಲಿದ್ದ ಅನೇಕರಿಗೆ ತೋರಿಸಿದೆ. ಈ ಆಕೃತಿಯು ಬಾಜಿರಾವ್ ಪೇಶ್ವೆ ಅವರಂತೆಯೇ ಕಾಣಿಸುತ್ತದೆ ಎಂದು ಹಲವರು ಒಪ್ಪಿದ್ದರು.
ಈ ಹಿಂದೆ ಹಿಂದಿ ಚಲನಚಿತ್ರೋದ್ಯಮದ ನಟಿ ಬಿಪಾಶಾ ಬಸು, ನಟ ಇಮ್ರಾನ್ ಹಶ್ಮಿ ಮತ್ತು ವರುಣ ಧವನ ಇವರು ಸಹ ಚಿತ್ರೀಕರಣದ ಸಮಯದಲ್ಲಿ ಅವರಿಗೆ ಇಂತಹ ವಿಚಿತ್ರ ಅನುಭವವಾಗಿತ್ತು ಎಂದು ಹೇಳಿದ್ದಾರೆ.